
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಅಪ್ಪೆಕೊಡಿ ಗ್ರಾಮದಲ್ಲಿ ಹಾದುಹೋದ ಬೇಡ್ತಿ ನದಿಯ ನಿಂತ ನೀರಲ್ಲಿ ಮೀನು ಹಿಡಿಯಲು ಹೋದ ತಂದೆ-ಮಗ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ತಾಲೂಕಿನ ಕಂಪ್ಲಿ ಹಳ್ಳಿಗದ್ದೆಯ ಕಲಂದರ ಪಕ್ರು ಸಾಬ(೫೧) ಹಾಗೂ ಅಬ್ದುಲ್‌ಖಾದರ್ ಕಲಂದರ ಸಾಬ(೨೧) ಎಂಬುವರೇ ಮೃತ ವ್ಯಕ್ತಿಗಳಾಗಿದ್ದು ಫೆ.೮ರ ಸಾಯಂಕಾಲ ತಾಲೂಕಿನ ಅಪ್ಪೆಕೊಡಿ ಗ್ರಾಮದಲ್ಲಿ ಹಾದುಹೋದ ಬೇಡ್ತಿ ನದಿಯ ನಿಂತ ನೀರಲ್ಲಿ ಮೀನು ಹಿಡಿಯಲು ಹೋಗಿ ಆಕಸ್ಮಿಕವಾಗಿ ನೀರಲ್ಲಿ ಬಿದ್ದು ಇಬ್ಬರೂ ಮೃತರಾಗಿದ್ದಾರೆ.

ನೀರಿನಲ್ಲಿ ಬಿದ್ದವರನ್ನು ಕಂಪ್ಲಿಯ ಹಸನಸಾಬ ಮುಜಾವರ, ನಿಸ್ಸಾರ ಜಂಡೆವಾಲೆ, ಮಂಚೀಕೇರಿಯ ಖಲೀಲ ಎಂಬುವರು ನೀರಿನಿಂದ ಮೇಲಕ್ಕೆ ತೆಗೆದು ನದಿಯ ದಡದಲ್ಲಿ ಮಲಗಿಸಿದ್ದು ಇವರ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಎಂದು ಮೃತರ ಪತ್ನಿ ಮಮ್ತಾಜಬೀ ಕಲಂದರ ಸಾಬ ಯಲ್ಲಾಪುರ ಠಾಣೆಯಲ್ಲಿ ದೂರು ನೀಡಿರುತ್ತಾರೆ.
Prathidvani Yellapura