Breaking News

ಇದೆಂತಹ ವಿಪರ್ಯಾಸ ಹಿಂದುಗಳನ್ನು ಒಗ್ಗೂಡಿಸುವುದೆ ಪ್ರಯಾಸ – ಹಿಂದು ಸಮಾಜದ ಉತ್ಸವದಲ್ಲಿ ಬೆರಳೆಣಿಕೆ ಹಿಂದುಗಳು!!!


ನೊಂದ ಹಿಂದುವಿನ ಅಳಲು.

ಅತಿಥಿ ಬರಹ -ಕೇಬಲ್ ನಾಗೇಶ್, ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ನೊಂದು ನುಡಿದ ನುಡಿಗಳಿವು ತಪ್ಪದೆ ಸಂಪೂರ್ಣ ಓದಿ.
ಪ್ರಭು ಶ್ರೀರಾಮನ ಜನ್ಮ ಸ್ಥಳ ಅಯೋದ್ಯೆಯಲ್ಲಿ ನಿರ್ಮಾಣವಾಗಿ ಲೋಕಾರ್ಪಣೆಗೆ ಸಿದ್ದಗೊಂಡ ಭವ್ಯ ದೇಗುಲ ಭವ್ಯ ಭಾರತದ ಶತಕೋಟಿ ಹಿಂದುಗಳ ದಶಕಗಳ ಕನಸು ನಾವು ಬದುಕಿದ್ದಾಗಲೆ ನನಸಾಗುತ್ತಿರುವ ಕ್ಷಣಕ್ಕೆ ಅದೆಷ್ಟೊ ಹಿಂದುಗಳ ತ್ಯಾಗ ಬಲಿದಾನವಾಗಿದೆ ಅದರ ನೆನಪುಗಳನ್ನು ಹಸಿರಾಗಿಸಿ ಭವಿಷ್ಯದ ಯುವ ಪೀಳಿಗೆಗೆ ನೆನಪಿಸುವ ಸದುದ್ದೇಶದಿಂದ ಜಿಲ್ಲೆಯಾದ್ಯಂತ ಸಂಚರಿಸಿ ಯಲ್ಲಾಪುರ ತಲುಪಿದ ” ಶೌರ್ಯ ಜಾಗರಣ ರಥ ಯಾತ್ರೆ ಸೋಮವಾರ ಬೆಳಗಿನ ಗ್ರಾಮದೇವಿ ದೇವಸ್ಥಾನದ ಆವಾರದ ಪೂಜೆಯೊಂದಿಗೆ ತಾಲೂಕಿನ ಪರ್ಯಟನೆ ಪ್ರಾರಂಭಿಸಿತು. ಆಗ ಉಪಸ್ಥಿತರಿದ್ದ ಹಿಂದುಗಳ ಸಂಖ್ಯೆ ಸಂಘಟಕರೊಂದಿಗೆ ಗ್ರಾಮದೇವಿ ದೇವಸ್ಥಾನದ ಅರ್ಚಕರೊಬ್ಬರು ಮ್ಯಾನೇಜರ್ ಒಬ್ಬರು ಸೇರಿಸಿ 40 ಮಂದಿ ಹಿಂದುಗಳು

ಮಾಗೋಡು ತಿರುವಿನಿಂದ ರಥಯಾತ್ರೆ ಸ್ವಾಗತಿಸಿದ ತಂಡದಲ್ಲಿ ಭಜನಾ ಕಲಾವಿದರಿಲ್ಲದಿದ್ದರೆ ಮೆರವಣಿಗೆ ದೇವರೆ ಗತಿ


ಚೇ…ಛೇ….ಇದೆಂತಹ ದುರ್ಗತಿ ಬಂತು ನಮ್ಮ ಹಿಂದು ಸಮಾಜಕ್ಕೆ ಈ ಚಂದಕ್ಕೇನಾ ಕೋಟ್ಯಾಂತರ ನಮ್ಮ ಹಿಂದು ಸಹೋದರರು ಕರಸೇವೆಯಲ್ಲಿ ಪಾಲ್ಗೊಂಡಿದ್ದು, ಜೈಲು ಕಂಬಿ ಎಣಿಸಿದ್ದು, ಗೋದ್ರಾ ಹತ್ಯಾಕಾಂಡದಲ್ಲಿ ಪ್ರಾಣ ಚೆಲ್ಲಿದ್ದು, ಹಗಲು ರಾತ್ರಿ ಎನ್ನದೆ ಅನ್ನ ಆಹಾರ ಬಿಟ್ಟು ದೇಶದಾದ್ಯಂತ ರಥ ಯಾತ್ರೆಗಳಲ್ಲಿ ಮನೆ ಮಠ ಬಿಟ್ಟು ಪಾಲ್ಗೊಂಡಿದ್ದು, ಪೊಲೀಸರ ಬೂಟಿನ ಮತ್ತು ಲಾಠಿಯ ರುಚಿ ಕಂಡದ್ದು. ಈ ಸೌಭಾಗ್ಯಕ್ಕೇನಾ ತ್ಯಾಗ ಬಲಿದಾನಗೈದದ್ದು. ನನಗೆ ನಾಚಿಕೆಯಾಗುತ್ತಿದೆ ನನ್ನ ಧರ್ಮದ ಜನರ ನಡವಳಿಕೆ ಕಂಡು.
ಏನಿದು ತಾತ್ಸಾರ ಎಷ್ಟರ ಮಟ್ಟಿಗೆ ಸ್ವಾರ್ಥ ಜೀವನ ದೇಶ,ಧರ್ಮ,ಭಾರತಮಾತೆ, ನನ್ನ ನೆಲ ಪವಿತ್ರ ಮಣ್ಣು, ವಿಶ್ವಗುರು ಎಂದೆಲ್ಲಾ ಕೊಚ್ಚಿಕೊಳ್ಳುವ ಅಥವ ತಮ್ಮ ಮೊಬೈಲ್ ಗಳಲ್ಲಿ ಚೆಂದದ ಪದಗಳಿವು ಎಂದು ಸ್ಟೇಟಸ್ ಹಾಕಿಕೊಂಡು ಮೊಬೈಲ್ ಹಿಂದುವಾಗಿ ಫೋಸ್ ಕೊಡುವ ಹಿಂದುಗಳಿಗೆ ನನ್ನ ನೇರ ಪ್ರಶ್ನೆ ಇನ್ನೆಷ್ಟು ಕಾಲ ನಿಮ್ಮ ತಾತ್ಸಾರ ಇನ್ನಾದರು ಎಚ್ಚೆತ್ತುಕೊಳ್ಳಿ ಮೊಬೈಲ್ ಹಿಂದುತ್ವದಿಂದ ಹೊರಬನ್ನಿ ಭಾರತಮಾತೆಯ ನೆಲದ ಸನಾತನ ಹಿಂದು ಧರ್ಮದ ಪ್ರಜೆಗಳಾಗಿ ಧರ್ಮ ಕಾರ್ಯಗಳಲ್ಲಿ ಪಾಲ್ಗೊಳ್ಳಿ ನಿಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ಇದು ನನ್ನ ಪವಿತ್ರ ಧರ್ಮ ಎಂದು ಎದೆಯುಬ್ಬಿಸಿ ಹೇಳಿಕೊಳ್ಳಿ.
ಶೌರ್ಯ ಜಾಗರಣ ರಥ ಯಾತ್ರೆಯಲ್ಲಿ ಯಲ್ಲಾಪುರದಲ್ಲಿ ವಾಸವಿರುವ ಹಿಂದುಗಳ ಮನೆಗಳಿಂದ ಒಬ್ಬೊಬ್ಬರು ಬಂದಿದ್ದರು ರಥ ಯಾತ್ರೆಯಲ್ಲಿ ನಿಲ್ಲಲು ಸ್ಥಳವೆ ಸಾಲುತ್ತಿರಲಿಲ್ಲ. ಆದರೆ ನಾವೆ ನಾಚಿಕೆ ಪಡುವಷ್ಟು ಹಿಂದುಗಳು ಸೇರಿದ್ದರು. ನಮಗ್ಯಾಕೆ ಇದನ್ನೆಲ್ಲ ಮಾಡಲು ಒಂದಷ್ಟು ಮಂದಿ ಇದ್ದಾರೆ ಅವರೆ ಮಾಡುತ್ತಾರೆ ಎಂಬ ಧಾಷ್ಟ್ಯ ಮನೋಭಾವದಿಂದ ಹೊರ ಬರಬೇಕಿದೆ. ಈ ನೆಲದ ಕಾರ್ಯ ತಾಯಿ ಭಾರತಿ ಕಾರ್ಯ ಈ ದೇಶದ ಕಾರ್ಯ ಪ್ರಭು ಶೀರಾಮನ ಕಾರ್ಯ ಎಂಬ ಭಕ್ತಿಭಾವ ನಮ್ಮಲ್ಲಿ ಕಾಣದಿದ್ದರೆ ನೈತಿಕತೆ ಎಂಬ ಪದಕ್ಕೆ ಅರ್ಥವಿಲ್ಲದಂತಾಗಲಿದೆ. ಕೇವಲ ಕೇಸರಿತೊಟ್ಟು. ಹಣೆಗೆ ತಿಲಕವಿಟ್ಟರೆ ಮಾತ್ರ ಸಾಲದು ಧರ್ಮದ ಧಾರ್ಮಿಕ ಕಾರ್ಯಗಳಲ್ಲಿ ಮತ್ತು ಹಿಂದು ಸಮಾಜದ ಬಂಧುಗಳ ಕಷ್ಟ ಸುಖದಲ್ಲಿ ಕೈ ಜೋಡಿಸಬೇಕಿದೆ.
ದಿನದ 24 ಗಂಟೆಯನ್ನು ನಮಗಾಗಿಯೆ ಮೀಸಲಿಟ್ಟು ಬದುಕುವ ನಾವು ಕನಿಷ್ಟ ಅಪರೂಪಕ್ಕಾದರು ಧರ್ಮಕ್ಕೆ ಸಂಭಂದಿಸಿದ ಚಟುವಟಿಕೆಗಳಲ್ಲಿ ತೊಡಗಿಕೊಂಡು ಕಿಂಚಿತ್ತಾದರು ಜನ್ಮ ಭೂಮಿ ಮತ್ತು ಧರ್ಮದ ಋಣ ತೀರಿಸುವ ಕಾರ್ಯ ಮಾಡಬೇಕಿದೆ.

ಶೌರ್ಯ ಜಾಗರಣ ರಥ ಯಾತ್ರೆಯ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಕೇವಲ ನಿಮ್ಮ ನಿಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡು ಧರ್ಮದ ಬಗ್ಗೆ ಕಿಂಚಿತ್ತು ಸೇವೆ ನೀಡದೆ ಅದು ತಪ್ಪು ಇದು ಸರಿ ಎಂದು ಧರ್ಮದ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕು ನಮಗಿರುವುದಿಲ್ಲ.


ಧಾರ್ಮಿಕ ಆಚರಣೆಗಳಲ್ಲಿ ಧರ್ಮಕ್ಕೆ ಸಂಭಂದಿಸಿದ ಯಾವುದೆ ಕಾರ್ಯಗಳಲ್ಲಿ ನಮ್ಮ ಪಾಲ್ಗೊಳ್ಳುವಿಕೆ ಅತಿ ಅವಶ್ಯಕ . ಅದನ್ನು ಬಿಟ್ಟು ನನಗೆ ಕೆಲಸದ ಒತ್ತಡವಿದೆ, ಮನೆಯಲ್ಲಿ ಯಾರು ಇಲ್ಲ, ನನಗೆ ರಜೆ ಇಲ್ಲ, ನಾನು ನನ್ನ ಕೈಲಾದ ಹಣ ನೀಡುತ್ತೇನೆ ಎಂದು ಇಲ್ಲಸಲ್ಲದ ಕಾರಣ ನೀಡಿದರೆ ಮುಂದೆ ಹಿಂದು ಸಮಾಜವೆ ನಮ್ಮನ್ನು ಕೀಳಾಗಿ ಕಾಣುವ ದಿನಗಳು ಬರಲಿದೆ ಎಚ್ಚರ.
ಸೋಮವಾರ ಯಲ್ಲಾಪುರಕ್ಕೆ ರಥ ಯಾತ್ರೆ ಬರುತ್ತಲಿದೆ ಮತ್ತು ಊರ ತುಂಬಾ ಸಂಚಾರ ನಡೆಸಲಿದೆ ಎಂಬುದನ್ನು ಸಂಘಟಕರು ಹಲವು ವಿಧದಲ್ಲಿ ಜನಗಳಿಗೆ ಮಾಹಿತಿ ತಲುಪಿಸಿದ್ದಾರೆ. ಆದರೆ ಹದ ಹೇಳುವ ಮೊಬೈಲ್ ಹಿಂದುಗಳು, ತಮ್ಮ ಮನಸ್ಸಿನ ಭಾವನೆಯನ್ನು ಇನ್ನೊಬ್ಬರ ಹೆಗಲಿಗೊರಿಸಿ ತಾವು ಸಮಾದಾನದದ ಬದುಕುನಡೆಸುವ ನಾಟಕೀಯ ಹಿಂದುಗಳು, ಡಿಜೆ ಸಪ್ಪಳಕ್ಕೆ ಕೇಸರಿ ತೊಟ್ಟು ಕುಣಿದು ಕುಪ್ಪಳಿಸುವ ಡಿಜೆ ಹಿಂದುಗಳು, ತಮ್ಮ ಅಂಗಡಿ ವ್ಯವಹಾರ ವ್ಯಾಪಾರ ಗಳಿಗಾಗಿ ಹಿಂದುತ್ವ ಎಂಬ ಗುರಾಣಿ ಹಿಡಿದು ತಮ್ಮ ಬದುಕನ್ನು ಮಾತ್ರ ಚಂದವಾಗಿಸಿಕೊಂಡು ಧರ್ಮ ಕಾರ್ಯಕ್ಕಾಗಿ ಎಲ್ಲವನ್ನು ತ್ಯಜಿಸಿ ಆರ್ಥಿಕವಾಗಿ ಜರ್ಜರಿತರಾದವರನ್ನು ಕಂಡು ಜವಾಬ್ದಾರಿಯ ಮಾತುಗಳನ್ನಾಡುವ ನಾಟಕದ ಹಿಂದುಗಳು ಬರಲೇ ಇಲ್ಲ ತಮ್ಮ ತಮ್ಮ ಬೇಳೆ ಬೇಯಿಸಿಕೊಂಡು ಹಿಂದು ಧರ್ಮದ ಕಾರ್ಯಗಳಲ್ಲಿ ತಲೆ ಹಾಕದೆ ನನ್ನದು ಶ್ರೇಷ್ಟ ಹಿಂದು ಧರ್ಮ ಎಂದು ಬೊಗಳೆ ಬಿಡುವವರು ಇನ್ನಾದರು ಎಚ್ಚೆತ್ತುಕೊಳ್ಳಿ ಧರ್ಮಕ್ಕಾಗಿ ಕೊಂಚ ಸಮಯವನ್ನಾದರು ಮೀಸಲಿಡಿ ಇಲ್ಲವಾದರೆ ಗಂಡಾಂತರ ತಪ್ಪಿದ್ದಲ್ಲ. ಮುಂದಿನ ದಿನಗಳಲ್ಲಿ ಧಾರ್ಮಿಕ ಆಚರಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಕೈಲಾದ ಸೇವೆ ಸಲ್ಲಿಸಿ ಮಕ್ಕಳಲ್ಲಿ ಧರ್ಮ ಶ್ರದ್ದೆ ಹೆಚ್ಚಿಸಿ.

ಸಂತಸದ ವಿಷಯವೆಂದರೆ ಪರಮಪೂಜ್ಯ ಸ್ವರ್ಣವಲ್ಲಿ ಶ್ರೀ ಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಶ್ರೀಗಳ ಆಶಿರ್ವಚನದಿಂದ ಶೌರ್ಯ ಜಾಗರಣ ರಥ ಯಾತ್ರೆಗೊಂದಷ್ಟು ಶ್ರೇಷ್ಟತೆ ಹೆಚ್ಚಾಯಿತು. ವಿಶ್ವ ಹಿಂದೂ ಪರಿಷತ್ ಭಜರಂಗದಳ ವತಿಯಿಂದ ಧರ್ಮಕಾರ್ಯ ನಡೆದಿದ್ದು ಹಿರಿಯರು ಪ್ರಮುಖರು ಪಾಲ್ಗೊಂಡು ರಥ ಯಾತ್ರೆಯನ್ನು ನಿರ್ವಿಘ್ನವಾಗಿ ಯಶಸ್ವಿಗೊಳಿಸಿದರು. ಅವರ ನಿಸ್ವಾರ್ಥ ಶ್ರಮಕ್ಕೆ ಕೋಟಿ ವಂದನೆಗಳು


ನಾನೊಬ್ಬ ಹಿಂದುವಾಗಿ ಪ್ರತಿ ಹಿಂದು ಸಹೋದರ ಸಹೋದರಿಯರಿಗೆ ಕೈ ಮುಗಿದು ಕೇಳುವೆ ಧರ್ಮಕ್ಕಾಗಿ ಶ್ರಮಿಸೋಣ ನಮ್ಮ ಧರ್ಮದ ಘನತೆ ಹೆಚ್ಚಿಸೋಣ.
ಮನಃ ನೊಂದು ನುಡಿದಿದ್ದೇನೆ ತಪ್ಪಿದ್ದರೆ ಕ್ಷಮಿಸಿ ಆದರೆ ಧರ್ಮಕ್ಕಾಗಿ ಶ್ರಮಿಸಿ

ವಿಮರ್ಶಿಸಿ ಅಭಿಪ್ರಾಯ ಹಂಚಿಕೊಂಡ ನಾನು ಮಾತ್ರ ಸರಿ ಎಂದು ಹೇಳಿಕೊಳ್ಳುತ್ತಿಲ್ಲ ಧರ್ಮಸೇವೆ ವಿಚಾರದಲ್ಲಿ ನನ್ನದು ತಪ್ಪಿದೆ ಆದರೆ ಅದನ್ನು ತಿದ್ದಿ ನಡೆಯುವ ಪ್ರಯತ್ನವಾಗಬೇಕಿದೆ ಎಂಬುದಷ್ಟೆ ಪ್ರಾರ್ಥನೆ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಕೇಬಲ್ ನಾಗೇಶ್, ಯಲ್ಲಾಪುರ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *