Breaking News

ಹೊಸದಾಗಿ ಉದಯಿಸುತ್ತಿದೆ ಯಲ್ಲಾಪುರ ಪಟ್ಟಣದಲೊಂದು ತ್ಯಾಜ್ಯ ಘಟಕ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಕಾಳಮ್ಮ ನಗರದ ಕಡೆಗೆ ಸಾಗುವ ಮಾರ್ಗದಲ್ಲಿ ಸಣ್ಣದಾಗಿ ತ್ಯಾಜ್ಯ ಸುರಿವ ಘಟಕ ಉದಯಿಸುತ್ತಿದೆ. ಇಲ್ಲಿ ದಿನದಿಂದ ದಿನಕ್ಕೆ ಕಸದ ಪ್ರಮಾಣ ಹೆಚ್ಚಾಗುತ್ತಿದೆ. ಇಲ್ಲಿ ಉದಯವಾಗುತ್ತಿರುವ ಕಸದ ರಾಶಿಗೆ ಕಾರಣವೇನು..? ಯಾರು ತಂದು ಸುರಿಯುತ್ತಿದ್ದಾರೆ..? ಇತ್ಯಾದಿ ಪ್ರಶ್ನೆಗಳು ಉದ್ಬವಿಸುತ್ತಿದ್ದು ಉತ್ತರವಿಲ್ಲದಂತಾಗಿದೆ.


ಪ್ರತಿನಿತ್ಯ ನೂರಾರು ಮಂದಿ ಸಂಚಾರ ಮಾಡುವ ಸ್ಥಳ ಹಗಲೆಲ್ಲ ಜನರ ತಿರುಗಾಟ ಹೆದ್ದಾರಿ ಪಕ್ಕದಲ್ಲೆ ಇದೆ ಬ್ಯಾಂಕುಗಳು ಅಕ್ಕಪಕ್ಕದಲ್ಲಿವೆ ಕಸದ ರಾಶಿ ಸೃಷ್ಟಿಯಾಗುತ್ತಿರುವ ಸ್ಥಳದ ಸುತ್ತಮುತ್ತ ನಿವೃತ್ತ ಅಧಿಕಾರಿಗಳ ಮನೆ ಶಿಕ್ಷಕರ ಮನೆಗಳಿವೆ ಮತ್ತು ಪ್ರಜ್ಞಾವಂತ ವಿದ್ಯಾವಂತ ಜನರ ಮನೆಗಳೆ ಇವೆ ಆದರೆ ಕಸ ಸೃಷ್ಟಿಯಾಗುತ್ತಿರುವುದು ಯಕ್ಷ ಪ್ರಶ್ನೆಯಾಗಿದೆ. ಪ್ರತಿ ನಿತ್ಯ ಪಟ್ಟಣ ಪಂಚಾಯತ್ ಕಸದ ಗಾಡಿ ಮನೆ ಬಾಗಿಲಿಗೆ ಬಂದು ಕಸವನ್ನು ಬೇಡಿ ಪಡೆದು ಕೊಂಡೊಯ್ಯುತ್ತಾರೆ ಆದರು ಕಸದ ರಾಶಿ ಬೀಳುತ್ತಿರುವ ಮರ್ಮವೇನು.

ಎಂದು ಸುತ್ತಮುತ್ತಲಿನ ಸಿಸಿ ಟಿವಿ ದೃಶ್ಯಾವಳಿ ವೀಕ್ಷಿಸಿ ಕಸ ಸುರಿಯುವ ಬೂಪರಿಗೆ ಕ್ರಮ ಜರುಗಿಸಿ ಬಿಸಿ ಮುಟ್ಟಿಸಬೇಕಿದೆ ಇಲ್ಲವಾದರೆ ಯಾರ ಭಯವಿಲ್ಲದೆ ಕಸದ ರಾಶಿ ಬೆಳೆಯುತ್ತ ಅಲ್ಲೊಂದು ತ್ಯಾಜ್ಯ ಘಟಕ ನಿರ್ಮಾಣವಾಗುವುದಂತು ಖಂಡಿತ.
ಸಂಬಂದಿಸಿದ ಅಧಿಕಾರಿಗಳು ಆದಷ್ಟು ಶೀಘ್ರವಾಗಿ ಸಮಸ್ಯೆ ಪರಿಹರಿಸಬೇಕಿದೆ ಇಲ್ಲವಾದಲ್ಲಿ ಬೀದಿ ಬೀದಿಯಲ್ಲಿ ಕಸದ ರಾಶಿ ಕಂಡುಬರಲಿದೆ ಎನ್ನುತ್ತಾರೆ ಸಾರ್ವಜನಿಕರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *