

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಕಾಳಮ್ಮ ನಗರ ಕ್ರೀಡಾಂಗಣದಲ್ಲಿ ಇಲಾಖಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮವಾದ ಪಲಿತಾಂಶ ಪಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಶ್ರೀದೇವಿ ನಾಯ್ಕ 100 ಮೀಟರ್ ಓಟದಲ್ಲಿ ಪ್ರಥಮ, ತ್ರಿವಿಧ ಜಿಗಿತ ಪ್ರಥಮ, ಈಟಿ ಎಸೆತ ಪ್ರಥಮ ಹಾಗು ವೈಯುಕ್ತಿಕ ವೀರಾಗ್ರಣಿ ಪಡೆದಿರುತ್ತಾಳೆ. ಸಿರಿಲ್ ಸಿದ್ದಿ ಗುಂಡು ಎಸೆತ ದ್ವಿತೀಯ,400 ಮೀಟರ್ ಓಟ ದ್ವಿತೀಯ. 800 ಮೀಟರ್ ಓಟ ತೃತೀಯ ಪಡೆದಿರುತ್ತಾಳೆ. ನಂದಿತಾ ಗೌಡ ಉದ್ದ ಜಿಗಿತ ಪ್ರಥಮ ತ್ರಿವಿಧ ಜಿಗಿತ ದ್ವಿತೀಯ. ರಾಧಿಕಾ ಮರಾಠಿ 800 ಓಟ ಪ್ರಥಮ., ಅಶ್ವನಿ ನಾಯ್ಕ 1500 ಮೀಟರ್ ಓಟದಲ್ಲಿ ದ್ವಿತೀಯ. ಚೇತನ ಕುಣಬಿ ಉದ್ಷ ಜಿಗಿತ ತೃತೀಯ. ಆಕಾಶ ಭಾವನವರ ಟ್ರಿಪಲ್ ಜಂಪ್ ತೃತೀಯ. ಛಾಯಾ ಸಿದ್ದಿ 200 ಮೀಟರ್ ಓಟ ತೃತೀಯ. ಗಣೇಶ ಕೋಕರೆ 3000 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಗಳಿಸಿರುತ್ತಾರೆ ಅಲ್ಲದೆ ಹೆಣ್ಣುಮಕ್ಕಳ ರಿಲೇಯಲ್ಲಿ ಪ್ರಥಮ ಗಂಡು ಮಕ್ಕಳ ರಿಲೇ ದ್ವಿತೀಯ. ಹೆಣ್ಣು ಮಕ್ಕಳ ಖೋ ಖೋ ಪ್ರಥಮ.ಹೆಣ್ಣು ಮಕ್ಕಳ ಕಬ್ಬಡ್ಡಿ ದ್ವಿತೀಯ. ಗಂಡು ಮಕ್ಕಳ ಖೋ ಖೋ ದ್ವಿತೀಯ ಗಳಿಸಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ವೈಟಿಎಸ್ಎಸ್ ಆಡಳಿತ ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರು ಕಾರ್ಯದರ್ಶಿ, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಪೋಷಕರು ಅಭಿನಂದಿಸಿದ್ದಾರೆ.







Prathidvani Yellapura