Breaking News

ಕೊಳಗೇರಿಗೆ ಭಾವನಾತ್ಮಕ ಬೀಳ್ಕೊಡುಗೆ- ಚೀಲಗಳು ತುಂಬುವಷ್ಟು ಕೊಡುಗೆ ಎದೆ ತುಂಬುವಷ್ಟು ಪ್ರೀತಿ…

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ – ತಮ್ಮ ಶಿಕ್ಷಕ ವೃತ್ತಿ ಜೀವನದಲ್ಲಿ ತಪ್ಪೇ ಮಾಡಿಲ್ಲದ ಒರ್ವ ಪ್ರಬುದ್ದ ಶಿಕ್ಷಕರೆಂದರೆ ಅದು ಸಂತೋಷ್ ಕೊಳಗೇರಿಯವರು ಎನ್ನಲು ಹೆಮ್ಮೆ ಎನಿಸುತ್ತದೆ.ಸಮಾಜದ ಶಿಲ್ಪಿಯಾಗಿ ಸಹಸ್ರಾರು ಸಂಸ್ಕಾರವಂತ ವಿದ್ಯಾರ್ಥಿ ಶಿಲ್ಪಗಳನ್ಬು ಸಮಾಜಕ್ಕೆ ನೀಡಿದ್ದಾರೆ. ಅವರ ನಿವೃತ್ತಿ ಜೀವನ ಸುಖ ಸಂತೋಷದಿಂದ ಕೂಡಿರಲಿ ಎಂದು ಮಲವಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುಬ್ಬಣ್ಣ ಕುಂಟೆಕಳಿ ಹೇಳಿದರು.


ಅವರು ತಾಲೂಕಿನ ಮಲವಳ್ಳಿ ಶ್ರೀ ರಾಮಲಿಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ನಡೆದ ಶಿಕ್ಷಕ ಸಂತೋಷ ಹೊನ್ನಪ್ಪ ಕೊಳಗೇರಿ ಅವರ ನಿವೃತ್ತಿಯ ಬೀಳ್ಕೊಡುಗೆ ಸಮಾಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ನಾರಾಯಣ ನಾಯಕ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ – ಕೊಳಗೇರಿ ಸರ್ ಅವರು ಸೇವೆ ಸಲ್ಲಿಸದಿರುವ ಯಾವ ಕ್ಷೇತ್ರವು ಇಲ್ಲ ಮತ್ತು ಯಾರೊಂದಿಗು ವೈಮನಸ್ಸಾದವರು ಅಲ್ಲ ಎಲ್ಲರನ್ನು ತಮ್ಮ ನಡವಳಿಕೆಯಿಂದಲೆ ಗೆಲ್ಲುವರಾಗಿದ್ದರು.


ರವಿ ಹುಳ್ಸೆ ದೇವಸ್ಥಾನದ ಮೊಕ್ತೇಸರ ಸಂತೋಷ ಕೊಳಗೇರಿ ಶಿಕ್ಷಕರು ಹಿರಿಯರೊಂದಿಗೆ ಮತ್ತು ಕಿರಿಯರೊಂದಿಗೆ ಬೆರೆತು ಸ್ನೇಹದಿಂದ ನಡೆಯುವವರಾಗಿದ್ದರು ಮತ್ತು ಸೇವಾ ಭಾವದ ಭಾವಜೀವಿಯಾಗಿದ್ದರು ಅವರ ನಿವೃತ್ತ ಜೀವನ ಶಾಂತರೀತಿಯಲ್ಲಿ ಸಾಗಲಿ ಎಂದರು.


ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್.ಭಟ್, ಸದಾನಂದ ಭಟ್ಟ , ಸಿ ಆರ್ ಪಿ ಪ್ರಭಾಕರ ಭಟ್ ಕೊಳಗೇರಿ ಅವರ ವೃತ್ತಿ ನಿಷ್ಟೆ ಇತರರೊಂದಿಗಿನ ಒಡನಾಟದ ಕುರಿತು ಮಾತನಾಡಿದರು.

ಕಾರ್ಯಕ್ರಮದಲೊಂದು ” ಕವನ ” ಕೊಡುಗೆ


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಘವೇಂದ್ರ ಭಟ್ಟ ಮಾತನಾಡಿ ಸಮಯ ಪ್ರಜ್ಞೆ ಮತ್ತು ಕಾರ್ಯ ತತ್ಪರತೆಗೆ ಮತ್ತೊಂದು ಹೆಸರು ಕೊಳಗೇರಿ ಸರ್ ಅವರು ಅವರ ಸುದೀರ್ಘ ಸೇವೆಯ ಮಹತ್ವವನ್ನು ಕೇಳುತ್ತ ನಮ್ಮ ಮಲವಳ್ಳಿ ಶಾಲೆಯಿಂದ ಬೀಳ್ಕೊಡುವ ಸದಾವಕಾಶ ನಮಗೊದಗಿರುವುದು ಪುಣ್ಯದ ಕೆಲಸವಾಗಿದೆ. ನಿವೃತ್ತಿ ನಂತರವು ಸಮಾಜದೊಂದಿಗಿನ ಅವರ ಸಂಪರ್ಕ ನಿರಂತರವಾಗಿರಲಿ ಎಂದರು.


ಈ ಸಂದರ್ಭದಲ್ಲಿ ಯಲ್ಲಾಪುರ ಪಟ್ಟಣದಿಂದ ಆಗಮಿಸಿದ ಹಲವು ಶಿಕ್ಷಕರು, ಹಿತೈಷಿಗಳು, ಊರನಾಗರಿಕರು, ಮಲವಳ್ಳಿ ಶಾಲೆ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಸದಸ್ಯರು ಹಲವು ಬಗೆಯ ನೆನಪಿನ ಕಾಣಿಕೆಗಳನ್ನು ನೀಡಿದರು. ಬಂಗಾರದ ಉಂಗುರ, ಮೊಬೈಲ್ ಫೋನ್ ಸಹ ಕೊಡುಗೆಯಲ್ಲಿ ಸೇರಿಕೊಂಡಿದ್ದು ವಿಶೇಷವಾಗಿತ್ತು.
ಶಿಕ್ಷಕ ಸುದರ್ಶನ್ ಭಟ್ಟ ಸ್ವಾಗತಿಸಿದರು, ಶಿಕ್ಷಕಿಯರಾದ ಮೇಘಶ್ರೀ ನಿರೂಪಿಸಿದರು, ಪೂನಮ್ ನಾಯ್ಕ್ ಸನ್ಮಾನ ಪತ್ರ ವಾಚಿಸಿದರು, ಶಿಕ್ಷಕ ಶ್ರೀದರ್ ವಂದಿಸಿದರು.
ಸಭೆಯ ನಂತರ ರುಚಿರುಚಿಯಾದ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

40 ವರ್ಷಗಳ ಸುದೀರ್ಘ ಸೇವೆಗೆ ಹೃದಯ ತುಂಬಿ ಗೌರವಿಸಿ ಕೊಟ್ಟ ಸನ್ಮಾನ ಪತ್ರ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *