Breaking News

ಪುಟ್‌ಪಾತ್ ಅತಿಕ್ರಮಿಸಿರುವ ಅಂಗಡಿಗಳ ತೆರವುಕಾರ್ಯ ಎಲ್ಲಿಗೆ ಬಂತು? ಇನ್ನೂ ಅಲ್ಲೆ ಇದೆಯ ಅಥವಾ ಅದಕ್ಕಿಂತ ಹದಗೆಟ್ಟಿದೆಯ.???

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಯಲ್ಲಾಪುರ : ಪಟ್ಟಣದ ಪಾದಚಾರಿ ಮಾರ್ಗಗಳೆಲ್ಲವೂ ಗೂಡಂಗಡಿಗಳ ಅತಿಕ್ರಮಣಕ್ಕೊಳಗಾಗಿದ್ದು ನೂರಾರು ಬಾರಿ ಮಾಧ್ಯಮಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು ಎಚ್ಛರಿಸುತ್ತಾ ಬಂದರೂ ತೆರವು ಕಾರ್ಯವಾಗದೇ ಹಾಗೆಯೇ ಮುಂದುವರೆಯುತ್ತಿದ್ದು ಗೂಡಂಗಳಿಗಳನ್ನು ಎಂದಿಗೆ ತೆರವುಗೊಳಿಸುತ್ತಾರೋ ಎಂಬುದು ಸಾರ್ವಜನಿಕರ ದೊಡ್ಡ ಪ್ರಶ್ನೆಯಾಗಿದೆ.


     ಬಸ್ ನಿಲ್ದಾಣದ ಮುಂಭಾಗ ಬೆಲ್ ರಸ್ತೆಯ ಎರಡೂ ಬದಿ, ಬಸವೇಶ್ವರ ವೃತ್ತದ ಆಸುಪಾಸು, ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿಯ ಬಹುತೇಕ ಕಡೆಗಳಲ್ಲಿ ಪುಟ್‌ಪಾತ್ ಅತಿಕ್ರಮಣಗೊಂಡಿದ್ದು ಪಾದಚಾರಿಗಳಿಗೆ ಲಭ್ಯವಿಲ್ಲದಂತಾಗಿದೆ. ಮಾಧ್ಯಮಗಳಲ್ಲಿ ಸುದ್ಧಿಯಾಗುತ್ತಲೇ ಸ್ಥಳೀಯ ಆಡಳಿತ ತೆರವು ಕಾರ್ಯಾಚರಣೆಗೆ ಇಳಿದಂತೆ ಮಾಡಿ ಒಂದೆರಡು ಅಂಗಡಿಕಾರರಿಗೆ ಎಚ್ಚರಿಕೆ ನೀಡಿ ಕೈಬಿಡುತ್ತಾರೆ.


ಪಟ್ಟಣದ ಬಸವೇಶ್ವರ ವೃತ್ತ, ಬಸ್ ನಿಲ್ದಾಣದ ಮುಂಭಾಗದ ಕಿರಿದಾದ ಮಾರ್ಗದಲ್ಲೂ ಗೂಡಂಗಡಿಗಳಿದ್ದು ಪಾದಚಾರಿ ಮಾರ್ಗವಲ್ಲದೇ ವಾಹನ ಸಂಚಾರದ ರಸ್ತೆಗೂ ಇಳಿದು ಇಕ್ಕಟ್ಟಿನ ವಾತಾವರಣ ಸೃಷ್ಠಿಸುತ್ತಿರುವುದು ಅಪಘಾತದ, ಅವಘಡಗಳ ಮುನ್ಸೂಚನೆ ನೀಡುತ್ತಿದೆ. ಸ್ಥಳೀಯ ಆಡಳಿತ ಇನ್ನಾದರೂ ಎಚ್ಛೆತ್ತುಕೊಂಡು ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿಕೊಡಬೇಕಿದೆ ಎಂಬುದು ಹಲರ ಅಭಿಪ್ರಾಯವಾಗಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *