Breaking News

ವಿ‌.ಎಸ್.ಪಿ ಪಾಳಯದ ಕೆಲವರ ಪತ್ರಿಕಾ ಹೇಳಿಕೆ ಸತ್ಯಕ್ಕೆ ದೂರವಾದುದು; ಅನಿಲ್ ನಾಯ್ಕ್ ಇಡಗುಂದಿ.

ಯಲ್ಲಾಪುರದ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ – ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಯಲ್ಲಾಪುರ ಭೇಟಿ ನೀಡಿದ ದಿನ ಪ್ರತ್ಯೇಕ ಸಭೆ ನಡೆಸಿದ್ದಾರೆಂದು ದೂರಿ ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವ ವಿ.ಎಸ್.ಪಾಟೀಲ ಬಣದ ಹೇಳಿಕೆಗಳು ಸತ್ಯಕ್ಕೆ ದೂರವಾದುದಾಗಿದೆ. ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿ.ಎಸ್. ಭಟ್ಟ ಅವರನ್ನು ಸ್ವತಃ ಹೆಬ್ಬಾರ್ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾಗಲೆ ಹೊರ ದೂಡಿದ್ದರು. ಅಂತಹ ವ್ಯಕ್ತಿ ಸದ್ಯ ನಿಷ್ಠಾವಂತ ಕಾಂಗ್ರೆಸ್ಸಿಗರು ಹಾಗು ಸ್ವಾತಂತ್ರ‍್ಯ ಹೋರಾಟಗಾರ ಕುಟುಂಬದ ಹಿನ್ನಲೆಯುಳ್ಳ ಡಿ.ಎನ್.ಗಾಂವ್ಕರ್ ಅವರ ಬಗ್ಗೆ ಪತ್ರಿಕಾ ಹೇಳಿಕೆ ಬಾಲಿಷತನದ್ದಾಗಿದೆ ಎಂದು ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಅನಿಲ್ ನಾಯ್ಕ ಇಡಗುಂದಿ ಹೇಳಿದರು.
ಅವರು ರವಿವಾರ ಪಟ್ಟಣದಲ್ಲಿ ಸುದ್ದಿಗೋಷ್ಟಿ ನಡೆಸಿ ಕಳೆದೆರಡು ದಿನಗಳ ಹಿಂದೆ ಮಾಧ್ಯಮಗಳಲ್ಲಿ ಹಿರಿಯರಾದ ಡಿ.ಎನ್ ಗಾಂವ್ಕರ್ ಸೇರಿದಂತೆ ಕೆಲವು ನಿಷ್ಠಾವಂತ ಕಾಂಗ್ರೆಸ್ಸಿಗರ ಮೇಲೆ ಇಲ್ಲಸಲ್ಲದ ಆರೋಪದೊಂದಿಗೆ ಸುಳ್ಳು ಹೇಳಿಕೆಯನ್ನು ನೀಡಿರುವುದನ್ನು ಗಂಭೀರವಾಗಿ ಖಂಡಿಸುತ್ತೇವೆ ಎಂದರು

ಶಾಸಕ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಸಂದರ್ಭದಲ್ಲಿ ಪಕ್ಷದಲ್ಲಿ ಅಳಿದುಳಿದ ಕೆಲವೇ ಮಂದಿ ಕಾರ್ಯಕರ್ತರನ್ನು ಕಟ್ಟಿಕೊಂಡು ಆತ್ಮವಿಶ್ವಾಸ ತುಂಬಿಸಿ ಪಕ್ಷ ಸಂಘಟನೆಗೊಳಿಸಿ ಯಾವುದೇ ಆಮಿಶಕ್ಕೆ ಒಳಗಾಗದೇ ಮುನ್ನೆಡೆಸಿಕೊಂಡು ಬಂದಿದ್ದು ಡಿ.ಎನ್.ಗಾಂವ್ಕರ್ ಆಗಿದ್ದಾರೆ. ಅಂತಹವರನ್ನು ಯಾವುದೇ ಮುನ್ಸೂಚನೆ ನೀಡದೇ ಬ್ಲಾಕ್ ಅಧ್ಯಕ್ಷ ಸ್ಥಾನದಿಂದ ತೆಗೆದು ಪಕ್ಷಕ್ಕೆ ಹಾನಿ ಮಾಡಿದ್ದರು. ನಂತರ ಮತ್ತೆ ಉಪಚುನಾವಣೆ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಸ್ಥಾನವನ್ನು ಪುನಃ ಅವರೇ ನಿಭಾಯಿಸಿದರು. ನಂತರವೂ ಗೌರವದ ನಡೆ ತೋರದೇ ವಿ.ಎಸ್ ಪಾಟೀಲ ಅವರ ಮಾತಿಗೆ ಅಧ್ಯಕ್ಷ ಸ್ಥಾನ ಬದಲಿಸಿದ್ದು ಅಕ್ಷಮ್ಯವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರು, ಹಿರಿಯ ಕಾಂಗ್ರೆಸ್ಸಿಗರಾದ ಮಾಜಿ ಮಂತ್ರಿ ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ, ತಾಲೂಕಿನ 14 ಘಟಕಗಳ ಅಧ್ಯಕ್ಷರು, ಸೇವಾದಳದ ಜಿಲ್ಲಾಧ್ಯಕ್ಷರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಹೈ ಕಮಾಂಡ್‌ನಿಂದ ವೀಕ್ಷಕರಾಗಿ ಕ್ಷೇತ್ರಕ್ಕೆ ಆಗಮಿಸಿ ಮಾಹಿತಿ ಪಡೆದು ವರದಿ ನೀಡಿದರೂ, ಹಿರಿಯ ಕಾರ್ಯಕರ್ತರ ಅಭಿಪ್ರಾಯಕ್ಕೂ ಮನ್ನಣೆ ನೀಡದೇ ಎನ್.ಕೆ ಭಟ್ಟ ಮೆಣಸುಪಾಲರನ್ನು ಬ್ಲಾಕ್ ಅಧ್ಯಕ್ಷರನ್ನಾಗಿ ಮುಂದುವರೆಸುತ್ತಿರುವುದು ದುರಂತವಾಗಿದೆ.


ಒಟ್ಟಿನಲ್ಲಿ ಪಕ್ಷದ ನಿಷ್ಠಾವಂತರಾಗಿ ಕಾರ್ಯನಿರ್ವಹಿಸುತ್ತಿರುವ ಸಾಮಾನ್ಯ ಕಾರ್ಯಕರ್ತನಿಂದ ಉನ್ನತ ಸ್ಥಾನದಲ್ಲಿರುವ ಪದಾಧಿಕಾರಿಗಳವರೆಗೂ ಶೇ.೮೦ಕ್ಕೂ ಅಧಿಕ ಮಂದಿ ವಿ.ಎಸ್. ಪಾಟೀಲ ಮತ್ತು ಅವರ ಬಳಗದ ವಿರುದ್ಧವಿದ್ದು ಪಕ್ಷದ ವರಿಷ್ಠರು ಗಮನಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಸಮಿತಿ ಸಹಕಾರ್ಯದರ್ಶಿ ವಿ.ಜಿ ಭಾಗ್ವತ, ಚಂದಗುಳಿ-ಉಪ್ಪಳೇಶ್ವರ ಘಟಕದ ಅಧ್ಯಕ್ಷ ಉಮೇಶ್ ಪಟಗಾರ, ತಾಲೂಕು ಪ್ರಧಾನ ಕಾರ್ಯದರ್ಶಿ ಎನ್.ಎನ್ ಹೆಬ್ಬಾರ್, ಮಂಜುನಾಥ ನಗರ ಘಟಕಾಧ್ಯಕ್ಷ ವಿ.ಜಿ ಭಟ್ಟ, ಮಾವಿನಮನೆ ಘಟಕಾಧ್ಯಕ್ಷ ಮಾಚಣ್ಣ ಮಲವಳ್ಳಿ, ಇಡಗುಂದಿ ಕಾಂಗ್ರೆಸ್ ಪ್ರಮುಖ ವಸಂತ ಎಂ ನಾಯ್ಕ ಉಪಸ್ಥಿತರಿದ್ದರು.


ಡಿ.ಎನ್ ಗಾಂವ್ಕರ್ ಸ್ವಾತಂತ್ರ್ಯ ಹೋರಾಟಗಾರ ಹಿನ್ನಲೆಯುಳ್ಳ ಕುಟುಂಬದಿಂದ ಬಂದಿದ್ದು ಸಾಮಾಜಿಕ ಸೇವಾಕಾರ್ಯಗಳಲ್ಲೂ ನಿರಂತರವಾಗಿ ಮುಂದುವರೆಯುತ್ತಿದ್ದಾರೆ. ರೋಟರಿ ಅಧ್ಯಕ್ಷರಾಗಿ, ವ್ಯವಸಾಯ ಸೇವಾ ಸಂಘದ ಅಧ್ಯಕ್ಷರಾಗಿ, ರಂಗಸಹ್ಯಾದ್ರಿ ಅಧ್ಯಕ್ಷರಾಗಿ ಸೇವಾ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ. ಅಂತಹವರ ವಿರುದ್ಧ ಪಿತೂರಿ ಮಾಡಿದವರ ಮಾತನ್ನೇ ನಂಬಿ ವಿ..ಎಸ್ ಪಾಟೀಲ ಅವರು ಎನ್.ಕೆ ಭಟ್ಟರನ್ನು ಅಧ್ಯಕ್ಷರನ್ನಾಗಿಸಿದ್ದೇ ಬ್ಲಾಕ್ ಕಾಂಗ್ರೆಸ್ ದುರಂತವಾಗಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *