

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ನಿಮ್ಮ ಅರಣ್ಯವನ್ನು ನೀವೇ ರಕ್ಷಿಸಬೇಕು, ಕಿಡಿಗೇಡಿಗಳು ಯಾರಾದರೂ ಅರಣ್ಯಕ್ಕೆ ಬೆಂಕಿ ಹಚ್ಚುವ ಕೃತ್ಯ ನಡೆಸುವುದು ಗಮನಕ್ಕೆ ಬಂದಲ್ಲಿ ನಮಗೆ ಮಾಹಿತಿ ನೀಡಬೇಕು ನಾವು ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ವಲಯ ಅರಣ್ಯ ಅಧಿಕಾರಿ ಶಿಲ್ಪಾ ನಾಯ್ಕ್ ಹೇಳಿದರು.

ಅವರು ಜ,31 ರಂದು ಕೆಳಾಸೆ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅರಣ್ಯ ಇಲಾಖೆ ಗ್ರಾಮ ಅರಣ್ಯ ಸಮಿತಿ ಹಾಗೂ ಆಶಿಯಾ ಸಮಾಜ ಸೇವಾ ಸಂಸ್ಥೆ. ವತಿಯಿಂದ ಬೆಂಕಿಯಿಂದ ಅರಣ್ಯ ರಕ್ಷಣೆ ಮತ್ತು ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅರಣ್ಯ ಬೆಂಕಿಯಿಂದ ಅರಣ್ಯ ಸಂಪತ್ತಿನ ಜೊತೆ ಪ್ರಾಣಿ ಪಕ್ಷಿ ಸರೀಸೃಪಗಳ ಕೌಟುಂಬಿಕವಾಗಿ ನಾಶವಾಗುತ್ತದೆ ಇದರಿಂದ ಮಾನವ ಪರಿಸರದ ಮೇಲೆ ನೇರವಾಗಿ ದುಷ್ಪರಿಣಾಮ ಬೀಳುತ್ತದೆ ಎಂದು ಡಿ ಆರ್ ಎಫ್ ಓ ಗುರುಪ್ರಸಾದ್ ಹೇಳಿದರು.
ಈ ಭಾಗದಲ್ಲಿ ಬೆಂಕಿ ಪ್ರಕರಣ ಜಾಸ್ತಿ ಇರುವುದರಿಂದ ಬೆಂಕಿ ಬೀಳುವ ಕಾರಣಗಳನ್ನು ಅವಲೋಕಿಸಿ ವನ್ಯ ದೇವತೆಯನ್ನು ಗೌರವಿಸಿ ಪೂಜಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಜಾಗೃತಿ ಮೂಡಿಸುವಲ್ಲಿ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಆಶಿಯ ಸೇವಾ ಸಂಸ್ಥೆಯ ಸಂಸ್ಥಾಪಕ ವಿಜಯನಾಯಕ ಅಭಿಪ್ರಾಯ ಪಟ್ಟರು.
ಇದೇ ಸಂದರ್ಭದಲ್ಲಿ ಅರಣ್ಯಕ್ಕೆ ಬೆಂಕಿ ಬಿದ್ದಾಗ ಬೆಂಕಿ ನಂದಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅರಣ್ಯ ವೀಕ್ಷಕ ನಾರಾಯಣ ಸಿದ್ದಿ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು,
ಗ್ರಾಮಾರಣ್ಯ ಸಮಿತಿ ಅಧ್ಯಕ್ಷ ಸುಬ್ಬು ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಪ ವಲಯ ಅರಣ್ಯ ಅಧಿಕಾರಿ ಗಣೇಶ ಗುನುಗಾ, ಶಾಲೆಯ ಮುಖ್ಯ ಶಿಕ್ಷಕಿ ಅಂಬಾ ಭವಾನಿ, ಸಂಸ್ಥೆಯ ಅಧ್ಯಕ್ಷರಾದ ಅನಿಲ್ ಮರಾಠೆ , ಯೋಜನಾ ಸಂಯೋಜಕ ಗಂಗಾಧರ್ ನಾಯ್ಕ, ನಿರ್ದೇಶಕರುಗಳಾದ ಆಯಿಷಾ ಗುಜನೂರು, ಮುಷರತ್ ಶೇಕ್, ಫರ್ಜಾನಾ ಶೇಕ್, ಊರಿನ ನಾಗರಿಕರಾದ ನಾಗಪ್ಪ ಜೆ ಸಿದ್ದಿ ,ಶಂಕರ್ ಎನ್ ಸಿದ್ದಿ, ಮೀನಾಕ್ಷಿ ಏನ್ ಸಿದ್ದಿ ,ಗೋಪಾಲ್ ಜಿ ಸಿದ್ದಿ, ಶಿವರಾಮ್ ಜಿ ಸಿದ್ಧಿ ,ರತ್ನ ಬಿ ಸಿದ್ದಿ ಶಿವಾನಂದ ಬಿ ಸಿದ್ದಿ ,ವೀಣಾ ಬಿ ಸಿದ್ದಿ , ಸುಬ್ರಾಯ ಡಿ ಸಿದ್ದಿ, ನಾಗಪ್ಪ ಸಿದ್ದಿ ಹಾಗು ಕೆಳಾಸೆ
ಗ್ರಾಮ ಅರಣ್ಯ ಸಮಿತಿ ಸದಸ್ಯರು, ಆಶಿಯಾ ಸಮಾಜ ಸೇವಾ ಸಂಸ್ಥೆ ಸದಸ್ಯರು, ಇನ್ನಿತರ ನಾಗರಿಕರೂ ಉಪಸ್ಥಿತರಿದ್ದರು.


Prathidvani Yellapura