

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಹೊನ್ನಗದ್ದೆ ನಿವಾಸಿ ಉತ್ತಮ ಅಂಬಿಗ ಎಂಬ ಪ್ರಸಿದ್ಧ ಗಣಪತಿ ತಯಾರಕರೊಬ್ಬರ ಮನೆಯಲ್ಲಿ ಬೆಳೆದ ಪಪ್ಪಾಯಿ ಗಿಡದಲ್ಲಿ ಬೆಳೆದ ಕಾಯಿಗಳೆಲ್ಲ ಗಣಪನ ಹೋಲಿಕೆ ಮೂಡಿರುವುದು ವಿಶೇಷವಾಗಿದೆ.

ಗಣೇಶ ಚತುರ್ಥಿ ಹತ್ತಿರ ಬರುತ್ತಿದೆ. ಉತ್ತಮ ಅಂಬಿಗ ಹೊನ್ನಗದ್ದೆ ಇವರು ಒಬ್ಬ ಪ್ರಸಿದ್ಧ ಗಣಪತಿ ತಯಾರಕರು. ಅವರು ಸುಮಾರು ಒಂದು ತಿಂಗಳಿಂದ ಗಣಪತಿ ತಯಾರಿಸುತ್ತಿದ್ದಾರೆ.ಇದೇ ಒಂದು ತಿಂಗಳಿಂದ ಅವರಮನೆ ಪಪ್ಪಾಯಿ ಗಿಡದಲ್ಲಿ ಅಚ್ಚರಿ ಎನ್ನುವಂತೆ ಬಿಟ್ಟ ಕಾಯಿಗಳೆಲ್ಲ ಗಣಪತಿಯ ಆಕಾರದಲ್ಲಿ ಕಾಣುತ್ತದೆ.

ಅವರು ದೈವ ಭಕ್ತರಾಗಿದ್ದು ಪ್ರತಿದಿನ ಭಕ್ತಿಯಿಂದ ಪೂಜೆ ಭಜನೆ ಮಾಡುತ್ತ ಕೂಲಿ ಕೆಲಸ ಮಾಡುತ್ತಾರೆ. ಚತುರ್ಥಿ ಸಂದರ್ಭದಲ್ಲಿ ಗಜಮುಖನ ಆಗಮನ ಪಪ್ಪಾಯಿ ಗಿಡದಲ್ಲಿ ಆಗಿರುವುದು ವಿಶೇಷ.

ಉತ್ತಮ ಅಂಬಿಗ ಹೊನ್ನಗದ್ದೆ ಇವರು ಒಬ್ಬ ಪ್ರಸಿದ್ಧ ಗಣಪತಿ ತಯಾರಕರು ಮೇಲಾಗಿ ಅವರು ಅಪ್ಪಟ ದೈವ ಭಕ್ತರು. ಪ್ರತಿದಿನ ಪೂಜೆ ಭಜನೆ ಮಾಡುತ್ತ ಜೀವನ ನಿರ್ವಹಣೆಗಾಗಿ ಕೂಲಿ ಕೆಲಸ ಮಾಡುತ್ತಾರೆ. ಜೊತೆಗೆ ಅವರು ಮಕ್ಕಳೆಲ್ಲರಿಗೆ ಉತ್ತಮ ಸಂಸ್ಕಾರ ನೀಡಿದ್ದು ಸಾಮಾಜಿಕ ಕಾರ್ಯದಲ್ಲೂ ತೊಡಗುವವರು. ಸಂಗೀತ ಆಸಕ್ತರೂ ಆಗಿದ್ದು ಭಾವಗೀತೆ, ಯಕ್ಷಗಾನ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಾರೆ. ಗಣಪತಿ ಮೂರ್ತಿಯೊಂದನ್ನೇ ತಯಾರಿಸದೇ ಹಲವು ಇತರ ಶಾರದಾ ಮೂರ್ತಿ ಹಲವು ಪ್ರಾಣಿಗಳ ಆಕೃತಿ ಇವರಿಂದ ತಯಾರಾಗಿದೆ. ಪತ್ರಿಕೆ ಗಳಲ್ಲೂ ಇವರ ಕುರಿತು ಈಗಾಗಲೇ ಹಲವು ಲೇಖನಗಳು ಪ್ರಕಟವಾಗಿವೆ.ಇವರು ಅರವತ್ತರ ವಯಸ್ಸಿನಲ್ಲೂ ಸದಾ ಉತ್ಸಾಹತುಂಬಿಕೊಂಡು ಉಳಿದವರಿಗೂ ಉತ್ಸಾಹ ತುಂಬಿ ಬೆನ್ನು ತಟ್ಟಿ ಪ್ರೋತ್ಸಾಹ ನೀಡುವ ವ್ಯಕ್ತಿತ್ವ ಉಳ್ಳವರು. ಶ್ರೀ ವೀರಭದ್ರ ಅವರಿಗೆ ಹರಸಲಿ. ಡೀಜಿ ದುಂಢಿ ಹಿರಿಯ ಕವಿಗಳು







Prathidvani Yellapura