Breaking News

ಪ್ರಧಾನಿ ಮೋದಿ ಆಗಮನಕ್ಕೆ ಉತ್ತರ ಕನ್ನಡ ನೆಲ ಕಾತರದಿಂದ ಎದುರು ನೋಡುತ್ತಿದೆ-ರವಿ ಹೆಗಡೆ ಹೂವಿನ ಮನೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ಪ್ರಧಾನಿಯಾದ ನಂತರ ಪ್ರಥಮ ಬಾರಿಗೆ ನರೇಂದ್ರಮೋದಿ ಉತ್ತರಕನ್ನಡ ಜಿಲ್ಲೆಗೆ ಆಗಮಿಸುತ್ತಿರುವುದು ಪಕ್ಷ ಮಾತ್ರವಲ್ಲದೇ ಜಿಲ್ಲೆಯ ಜನತೆಗೂ ಸಂತಸ ತಂದಿದೆ. ಚುನಾವಣೆ ಸಂದರ್ಭವಲ್ಲದಿದ್ದರೂ ಮೋದಿಯ ಆಗಮನಕ್ಕೆ ಜಿಲ್ಲೆಯ ಜನತೆಯ ಸಂತಸ ಇದೇ ರೀತಿ ಇರುತ್ತಿತ್ತು. ಏಕೆಂದರೆ ಮೋದಿ ವಿಶ್ವನಾಯಕರಾಗಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತವಾಗಿದೆ.

ಮೋದಿಯ ಆಗಮನದಿಂದ ಗೆಲುವಿನ ಅಂತರ ಹೆಚ್ಚಾಗಲಿದೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಉಸ್ತುವಾರಿ ಡಾ.ರವಿ ಹೆಗಡೆ ಹೂವಿನಮನೆ ಹೇಳಿದರು.


ಅವರು ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಯಲ್ಲಾಪುರಕ್ಕೆ ಸ್ಟಾರ್ ಪ್ರಚಾರಕರು ಬರುವುದಿಲ್ಲವೇ? ಎಂಬ ಪತ್ರಕರ್ತರ ಪ್ರಶ್ನೆಗೆ ಈ ಕ್ಷೇತ್ರ ರಾಜ್ಯದಲ್ಲಿಯೇ ವಿಶೇಷತೆಯನ್ನು ಹೊಂದಿದೆ. ಮೂರು ತಾಲೂಕುಗಳನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಮತದಾರರೇ ಸ್ಟಾರ್ ಪ್ರಚಾರಕರಾಗಿದ್ದಾರೆ. ಕ್ಷೇತ್ರದ ಜನರ ನಾಡಿಮಿಡಿತವನ್ನು ಹೆಬ್ಬಾರರು ಅರಿತುಕೊಂಡಿದ್ದಾರೆ. ಜೊತೆಯಲ್ಲಿ ಜನರ ಜೊತೆ ಅವರು ಹೊಂದಿರುವ ಅವಿನಾಭಾವ ಸಂಬಂಧವೇ ಅವರನ್ನು ಹೆಚ್ಚಿನ ಅಂತರದಲ್ಲಿ ಗೆಲ್ಲಿಸುವುದಕ್ಕೆ ಕಾರಣವಾಗಲಿದೆ ಎಂದರು.
ಮೋದಿಯವರು ಕರೆಕೊಟ್ಟಂತೆ ಪ್ರತಿ ಮನೆಗಳಿಗೆ ನಮ್ಮ ಕಾರ್ಯಕರ್ತರು ತೆರಳಿ “ಹರ್ ಘರ್ ನಮಸ್ಕಾರ್” ಮೋದೀಜಿ ತಿಳಿಸಿದ್ದಾರೆ ಎಂದು ಜನರಿಗೆ ಅವರ ಭಾವನೆಯನ್ನು ತಿಳಿಸುವ ಕಾರ್ಯ ಪ್ರಾರಂಭವಾಗಲಿದೆ.

ಅಂಕೋಲಾ-ಹುಬ್ಬಳ್ಳಿ ರೈಲ್ವೆ ಮಾರ್ಗದ ಕುರಿತು ಕೇಳಿದ ಪ್ರಶ್ನೆಗೆ ಈ ವಿಷಯ ನ್ಯಾಯಾಲಯದಲ್ಲಿದೆ, ಚುನಾವಣೆ ಸಂದರ್ಭದಲ್ಲಿ ಈ ವಿಷಯದ ಪ್ರಸ್ತಾಪ ಸೂಕ್ತವಲ್ಲವಾದರೂ ನಮ್ಮ ಪಕ್ಷ, ಸರ್ಕಾರ ಆ ನಿಟ್ಟಿನಲ್ಲಿ ಖಂಡಿತವಾಗಿಯೂ ಯೋಜನೆಯನ್ನು ಜಾರಿಗೆ ತರುವಲ್ಲಿ ತೀವ್ರ ಪ್ರಯತ್ನದಲ್ಲಿದೆ. ಇನ್ನೊಂದು ಪ್ರಶ್ನೆಗೆ ಉತ್ತರಿಸಿ ಶಿರಸಿ ಜಿಲ್ಲೆಯ ಕುರಿತು ಚರ್ಚೆ ಹಂತದಲ್ಲಿದೆ. ಸರ್ಕಾರ ಜನಪರ ನಿರ್ಣಯ ತೆಗೆದುಕೊಂಡು ಜಿಲ್ಲೆಯನ್ನು ವಿಭಾಗ ಮಾಡುತ್ತದೆಯೇ ವಿನಃ ಅಲ್ಲಿ ಗೊಂದಲ ಖಂಡಿತ ಇಲ್ಲ ಎಂದರು.


ಬಿಜೆಪಿ ಮುಖಂಡ ಡಾ.ಶಶಿಭೂಷಣ ಹೆಗಡೆ ಮಾತನಾಡಿ , ಮೋದಿಯವರು ಜಿಲ್ಲೆಗೆ ಬರುತ್ತಿರುವುದು ಒಂದು ಸುವರ್ಣ ಘಳಿಗೆಯಾಗಿದೆ. ಈ ಕ್ಷೇತ್ರದಿಂದ ಹೆಬ್ಬಾರ್ ಅವರು ಎರಡು ಅವಧಿಗೆ ಗೆದ್ದಿದ್ದಾರೆ. ತಾಂತ್ರಿಕವಾಗಿ ಮೂರು ಎಂದೂ ಹೇಳಬಹುದು. ಜಿಲ್ಲೆಯಲ್ಲಿ ಆದರ್ಶ ನಾಯಕತ್ವದ ಗುಣಗಳನ್ನು ಹೊಂದಿದ್ದಾರೆ. ರಾಜಕೀಯದಲ್ಲಿ ಮುಂಬರುವ ನಾಯಕರಿಗೆ ಮೇಲು ಪಂಕ್ತಿ ಹಾಕಿಕೊಟ್ಟಿದ್ದಾರೆ. ಅದರಲ್ಲೂ ಕಾರ್ಮಿಕ ಸಚಿವರಾಗಿ ಮಾಡಿದ ಕಾರ್ಯ ದೇಶದಲ್ಲೇ ಗಮನ ಸೆಳೆದಿದೆ. ಎಲ್ಲಾ ಸಮಾಜದವರನ್ನೂ ಪರಸ್ಪರ ಪ್ರೀತಿ, ಸೌಹಾರ್ದತೆಯಿಂದ ನಡೆದುಕೊಂಡ ಪರಿಣಾಮವೇ ಅವರ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದರು.


ದೇಶದ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿಲ್ಲ, ಜೊತೆಗೆ ಗ್ರಾಮಪಂಚಾಯತದಿಂದ ಕೇಂದ್ರದವರೆಗೂ ಬಿಜೆಪಿ ಅಧಿಕಾರದಲ್ಲಿದೆ. ಅಸ್ತಿತ್ವವಿಲ್ಲದ ಕಾಂಗ್ರೆಸ್ ಪಕ್ಷ ಗೆಲ್ಲೋದು ಹೇಗೆ? ಕೇವಲ ಹುಸಿ ಹೇಳಿಕೆಗಳನ್ನು ನೀಡಿ ಜನರನ್ನು ವಂಚಿಸಬಹುದೇ ವಿನಃ ಯಾವುದೇ ರೀತಿಯ ಸಾಧನೆಗಳು ಕಾಂಗ್ರೆಸ್‌ ನಿಂದ ಮಾಡಲಾಗದು ಎಂದು ಹಿರಿಯ ಮುಖಂಡ ಪ್ರಮೋದ ಹೆಗಡೆ ಹೇಳಿದರು.


ತಾಲೂಕಿನಲ್ಲಿ 96 ಬೂತ್‌ಗಳಿವೆ. ಈಗಾಗಲೇ ಎರಡು ಸುತ್ತು ಪ್ರಚಾರ ಕೈಗೊಂಡಿದ್ದೇವೆ. ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದಾರೆ. ನಮ್ಮ ಗೆಲುವಿನ ಅಂತರ ಹೆಚ್ಚಿಸುವ ಪಣ ತೊಟ್ಟಿದ್ದೇವೆ. ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಗಳು ಮತದಾರರ ದಿಕ್ಕು ತಪ್ಪಿಸುವ ತಂತ್ರವಾಗಿದೆ. ಅದನ್ನು ಜನ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಮಂಡಲಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್ ಹೇಳಿದರು.


ಕ್ಷೇತ್ರದಲ್ಲಿ ಮಹಿಳಾ ಮತದಾರರ ಪ್ರಮಾಣವು ಸಾಕಷ್ಟಿದೆ ಅವರಿಗೆ ಬಿಜೆಪಿ ಆಡಳಿತದಿಂದಾದ ಅನುಕೂಲ ಮತ್ತು ವಿರೋಧಿ ಕಾಂಗ್ರೆಸ್ ಪಕ್ಷದ ಅಧಿಕಾರದಾಸೆಗೆ ಬೋಗಸ್ ಗ್ಯಾರಂಟಿ ಕಾಡ್೯ ನೀಡುತ್ತಿರುವ ವಿಚಾರವನ್ನು ವಿವರಿಸಿ ಬಿಜೆಪಿ ಪರವಾಗಿ ಮತದಾನದ ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಮಹಿಳಾ ಘಟಕ ಸಕ್ರಿಯವಾಗಿ ಚುನಾವಣ ಅಖಾಡದಲ್ಲಿ ತನ್ನದೆ ಪಾತ್ರ ನಿರ್ವಹಿಸಲಿದೆ ಎಂದು ರಾಜ್ಯ ಮಹಿಳಾ ಮೋರ್ಚಾ ಸದಸ್ಯೆ ರೇಖಾ ಹೆಗಡೆ ಹೇಳಿದರು

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಭಾಗ್ವತ, ಪ್ರಚಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ಹಿರಿಯರಾದ ಪಿ.ಜಿ ಭಟ್ಟ ಬರಗದ್ದೆ , ಎನ್.ಎಸ್ ಭಟ್ಟ ಶಿರಸಿ, ಪ್ರಧಾನ ಕಾರ್ಯದರ್ಶಿಗಳಾದ ಡಾ.ರವಿ ಭಟ್ಟ ಬರಗದ್ದೆ, ಪ್ರಸಾದ ಹೆಗಡೆ ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *