Breaking News

ರಜಾ ದಿನಗಳು ವ್ಯರ್ಥವಾಗದಂತೆ ಕ್ರಿಕೆಟ್ ಕೋಚಿಂಗ್ ಗೆ ಸಿದ್ದರಾದ ಯಲ್ಲಾಪುರದ ಮಕ್ಕಳು…!!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ…..


ಪ್ರತಿಧ್ವನಿ,ಯಲ್ಲಾಪುರ : ಮಕ್ಕಳಿಗೆ ರಜೆ ಬಂದರೆ ನೆಂಟರಮನೆ, ಪ್ರವಾಸ, ಮೋಜು ಮಸ್ತಿಯ ಆಟ, ಹಳ್ಳಕೆರೆ ತೊರೆಗಳಿಗೆ ಭೇಟಿ ಹೀಗೆ ಹಲವು ವಿಧದಲ್ಲಿ ರಜೆಯ ಮಜವನ್ನು ಸವಿಯಲು ಅಣಿಯಾಗುತ್ತಿದ್ದರು. ಆದರೆ ಇತ್ತೀಚಿಗೆ  ಕೇವಲ “ಮೊಬೈಲ್” ಒಂದನ್ನೇ ಪ್ರಪಂಚ ಎಂದುಕೊಂಡು ಮಕ್ಕಳು ಕುಬ್ಜರಾಗುತ್ತಿರುವುದು ದುರಂತವಾಗಿದೆ. ಇದಕ್ಕೆ ಪರಿಹಾರವೆಂಬಂತೆ ಮೈಂಡ್ ಟ್ರೈನರ್ ಯೋಗೇಶ್ ಶಾನಭಾಗ ನೇತೃತ್ವದಲ್ಲಿ ಮಕ್ಕಳಿಗೆ ಕ್ರಿಕೆಟ್ ಕೋಚಿಂಗ್ ಕ್ಲಾಸ್ ಪ್ರಾರಂಭಿಸಿದ್ದು 35 ಕ್ಕೂ ಅಧಿಕ ಮಕ್ಕಳು ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

ಯಲ್ಲಾಪುರ ಕಾಳಮ್ಮ ನಗರ ತಾಲೂಕು ಕ್ರೀಡಾಂಗಣದಲ್ಲಿ ಕ್ರಿಕೆಟ್ ಕಲರವ


ಶಿಬಿರವು ಮುಂಜಾನೆ ಮತ್ತು ಸಂಜೆ ಕ್ಕೆ ನಡೆಯುತ್ತಿದ್ದು ಚಿಕ್ಕಮಕ್ಕಳಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಇಬ್ಬರು ಹೆಣ್ಣುಮಕ್ಕಳು ಸುಜನ್ಯಾ ಸುರೇಶ್ , ಸೇಜಲ್ ಸತೀಶ ನಾಯ್ಕ ಶಿಬಿರದಲ್ಲಿ ಪಾಲ್ಗೊಂಡು ತರಬೇತಿ ಪಡೆಯುತ್ತಿರುವುದು ವಿಶೇಷವಾಗಿದೆ.

ಈ ಸುದ್ದಿಯ ದೃಶದಯಾವಳಿ ನೋಡಲು ಪ್ರತಿಧ್ವನಿ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ ಹಾಗೆ ಪ್ರತಿಧ್ವನಿ ಪ್ರೋತ್ಸಾಹಿಸಲು ಸಹಕರಿಸಲು ಚಾನಲ್ ಸಬ್ ಸ್ಕ್ರೈಬ್ ಮಾಡಿ

ಇತ್ತೀಚಿನ ದಿನಗಳಲ್ಲಿ ಮಹಿಳಾ ಕ್ರಿಕೆಟರ್ಸ್ ಅಂತರಾಷ್ಟೀಯ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಿರುವುದು ಹೆಣ್ಣುಮಕ್ಕಳ ಸೇರ್ಪಡೆಗೆ ಸ್ಪೂರ್ತಿಯಾಗಿದೆ.

ಮಕ್ಕಳ ಫಿಟ್ ನೆಸ್ ಗೆ ಪ್ರಮುಖ ಆದ್ಯತೆ


ಕ್ರಿಕೆಟ್ ತರಬೇತಿಯನ್ನು ಸ್ಥಳೀಯ ಆಟಗಾರ ಅಮಿತ್ ಕಮ್ಮಾರ್ ನೀಡುತ್ತಿದ್ದು ಕಾಳಮ್ಮನಗರದ ತಾಲೂಕಾ ಕ್ರೀಡಾಂಗಣದಲ್ಲಿ ಪ್ರಾಕ್ಟೀಸ್ ನೆಟ್ ನಿರ್ಮಿಸಲಾಗಿದೆ.

ನೆಟ್ ಪ್ರಾಕ್ಟಿಸ್ ವ್ಯವಸ್ಥೆ

ಶಿಬಿರಾರ್ಥಿಗಳ ದೇಹ ಸದೃಡತೆಗೆ ಫಿಟ್ನೆಸ್ ಕೋಚ್ ಆಗಿ ನಿವೃತ್ತ ದೈಹಿಕ ಶಿಕ್ಷಕ ಜಿ.ಎಂ ತಾಂಡುರಾಯನ್ ಕಾರ್ಯನಿರ್ವಹಿಸುತ್ತಿದ್ದು ಪ್ರಮುಖ ತರಬೇತುದಾರ ಧಾರವಾಡದಿಂದ ಕಾಲಕಾಲಕ್ಕೆ ಬಂದು ಸಲಹೆ ಸೂಚನೆಗಳನ್ನು ಶಿಬಿರಾರ್ಥಿಗಳಿಗೆ ನೀಡುತ್ತಿದ್ದಾರೆ.

ನಿವೃತ್ತ ದೈಹಿಕ ಶಿಕ್ಷಕ ಜಿ.ಎಂ.ತಾಂಡುರಾಯನ್ ರಿಂದ ಮಕ್ಕಳಿಗೆ ದೈಹಿಕ ಸಾಮರ್ಥ್ಯ ದ ತರಬೇತಿ


ಒಟ್ಟಿನಲ್ಲಿ ಬೇಸಿಗೆ ರಜೆ ಬಂತೆAದು ಹಳ್ಳಕೊಳ್ಳಗೊಳಿಗೆ ಹೋಗಿ ಜೀವಹಾನಿ ಮಾಡಿಕೊಳ್ಳದೇ ಮೊಬೈಲ್ ಗೀಳು ಹತ್ತಿಸಿಕೊಳ್ಳದೇ ಬೇಡದ ಚಟುವಟಿಕೆಯಿಂದ ಪೋಷಕರಿಗೆ ಸಮಸ್ಯೆ ತಂದೊಡ್ಡದೇ ದೇಹದ ಆರೋಗ್ಯ , ಮಾನಸಿಕ ಸದೃಡತೆ, ಕ್ರೀಡಾ ಉಲ್ಲಾಸ , ಭವಿಷ್ಯದಲ್ಲಿ ಉತ್ತಮ ಕ್ರಿಕೆಟರ್ ಆಗುವ ಅವಕಾಶ ತರಬೇತಿಯಿಂದ ಸಿಗುತ್ತಿರುವುದು ಪೋಷಕರಿಗೆ , ಕ್ರೀಡಾಪ್ರೇಮಿಗಳಿಗೆ ಸಂತಸ ತಂದಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *