
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ – ಪಟ್ಟಣದ ಗ್ರಾಮದೇವಿ ದೇವಸ್ಥಾನದ ಆವರಣದಿಂದ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್ ನೇತೃತ್ವದಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರು ಮತದಾರರು ರ್ಯಾಲಿ ನಡೆಸಿ ಮತಯಾಚಿಸಲಾಯಿತು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮೋಹನ್ ಲಿಂಬಿಕಾಯಿ, ಪ್ರಮುಖರಾದ ಉಲ್ಲಾಸ ಶಾನಬಾಗ್ , ಶ್ರೀನಿವಾಸ್ ಭಟ್ ಧಾತ್ರಿ, ವಿ.ಎಸ್.ಭಟ್, ರಾಘು ಭಟ್, ಎನ್.ಕೆ ಭಟ್, ಪ್ರಶಾಂತ್ ಸಭಾಹಿತ್, ಅನಿಲ್ ಮರಾಠೆ , ರವಿಚಂದ್ರ ನಾಯ್ಕ್ ಇಂಜಿನಿಯರ್, ನರ್ಮದಾ ನಾಯ್ಕ್, ಸೈಯದ್ ಕೈಸರ್ ಇನ್ನು ಮುಂತಾದ ಪ್ರಮುಖರು ರ್ಯಾಲಿ ಯಲ್ಲಿ ಪಾಲ್ಗೊಂಡು ಮತಯಾಚಿಸಿದರು.
Prathidvani Yellapura