
ಯಲ್ಲಾಪುರದಲ್ಲಿ ಸಿಡಿಲು ಬಡಿದು ತೆಂಗಿನಮರಕ್ಜೆ ಬೆಂಕಿ ತಕ್ಷಣ ನಂದಿಸಿದ ಅಗ್ನಿಶಾಮಕ ದಳ
ಪಟ್ಟಣದಲ್ಲಿ ಸಂಜೆ ಇದ್ದಕ್ಕಿದ್ದಂತೆ ಮೋಡ ಕವಿದು ಗುಡುಗು ಸಿಡಿಲು ಆರಂಭವಾಗಿ ತುಂತುರು ಮಳೆ ಹನಿ ಜಿನುಗಿದೆ ಗೋಪಾಲಕೃಷ್ಣ ಗಲ್ಲಿಯ ವಸಂತಭವನ ಚಾಳ್ ನಲ್ಲಿ ತೆಂಗಿನ ಮರ ಒಂದಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿ ಉರಿದಿದೆ.
ತಕ್ಷಣ ಅಲ್ಲೆ ಇದ್ದ ಸ್ಥಳೀಯರು ಅಗ್ನಿಶಾಮಕ ದಳದವರಿಗೆ ಕರೆಮಾಡಿದ್ದು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು ಮುಂದಾಗಬಹುದಾದ ಅನಾಹುತ ತಪ್ಪಿದಂತಾಗಿದೆ.

Prathidvani Yellapura