
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲ ನಾಗೇಶ್ ಲೇಖನಿಯಲ್ಲಿ

ರಾಜ್ಯ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ಘೋಷಣೆಯಾಗುತ್ತಲೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ರಾಜಕೀಯ ರಣಕಣದಲ್ಲಿ ಯಲ್ಲಾಪುರದ ಮಟ್ಟಿಗೆ ಚುನಾವಣ ಕಾವು ನಿಧಾನವಾಗಿ ಏರುತ್ತಿದೆ. ಆದರೆ ತೆರೆಮರೆಯ ಚಟುವಟಿಕೆ ಮಾತ್ರ ಚುರುಕಾಗಿದೆ.

ತಾಲೂಕಿನಲ್ಲಿ ಹೆಬ್ಬಾರ್ ಮೆನಿಯ ಚಲಾವಣೆಯಲಿದ್ದು ಕಾಂಗ್ರೆಸ್ ಕೈ ಹಿಡಿದ ವಿ.ಎಸ್ ಪಾಟೀಲ್ ಗೆ ಕಮಲ ಕೈ ಹಿಡಿಯಲಿಲ್ಲ ಎಂಬ ಅನುಕಂಪದ ಅಲೆಯನ್ನೆ ಅಸ್ತ್ರವಾಗಿಸಿಕೊಂಡು ಚುನಾವಣೆ ಎದುರಿಸುವ ತಂತ್ರಗಾರಿಕೆ ಹೆಣೆಯಲಾಗುತ್ತಿದೆ. ಈ ಮದ್ಯೆ ಜೆಡಿಎಸ್ ತಮ್ಮ ಅಭ್ಯರ್ಥಿ ಯಾರೆಂಬುದನ್ನು ಇನ್ನೂ ಬಹಿರಂಗ ಪಡಿಸಿಲ್ಲ
ಬಿಜೆಪಿ ಚುನವಣೆ ಘೋಷಣೆಗು ಪೂರ್ವದಲ್ಲಿ ಕಾರ್ಯಕರ್ತರ ಸರಣಿ ಸಭೆ ನಡೆಸಿ ತಳಮಟ್ಟದ ಕಾರ್ಯಕರ್ತರೊಂದಿಗೆ ಸಚಿವ ಹೆಬ್ಬಾರ್ ನೇರ ಮಾತಕತೆ ನಡೆಸಿ ಕೊಟ್ಟ ಭರವಸೆಗಳ ಈಡೇರಿಕೆ ಅಭಿವೃದ್ಧಿ ಕಾರ್ಯಗಳ ಮಾಹಿತಿ , ಆಗಬೇಕಾದ ಕಾರ್ಯಗಳ ಕುರಿತು ಮುಕ್ತವಾಗಿ ಚರ್ಚೆ ನಡೆಸಿದ್ದರು. ಇದರಿಂದ ಯಲ್ಲಾಪುರ ತಾಲೂಕಿನ ಮಟ್ಟಿಗೆ ಚುನಾವಣೆ ತಯಾರಿ ಕಾರ್ಯದಲ್ಲಿ ಒಂದುಹೆಜ್ಜೆ ಬಿಜೆಪಿ ಮುಂದಿದೆ ಎನ್ನಬಹುದು.

ಕಾಂಗ್ರೆಸ್ ಪಕ್ಷದಲ್ಲಿ ಹೊಸಶಕೆ ಪ್ರಾರಂಭವಾಗಿದ್ದು ಇರುವ ನಾಯಕರಲ್ಲಿ ಅಥವ ಕಾರ್ಯಕರ್ತರಲ್ಲಿ ಯಾರೊಬ್ಬರನ್ನು ಅಭ್ಯರ್ಥಿಯಾಗಿ ಘೋಷಿಸದೆ. ಬಿಜೆಪಿಯಲ್ಲಿ ಮನ್ನಣೆ ಸಿಗಲಿಲ್ಲ ಮತ್ತು ಚುನಾವಣೆಯಲ್ಲಿ ಟಿಕೆಟ್ ನೀಡುವುದಿಲ್ಲ ಎಂಬ ಕಾರಣಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ವಿ.ಎಸ್ ಪಾಟೀಲ್ ಇದೇ ಹೆಬ್ಬಾರ್ ಜೊತೆಯಲ್ಲಿ ಕಳೆದ ಕೆಲವು ತಿಂಗಳ ಹಿಂದಿನವರೆಗು ಜೈ ಹೆಬ್ಬಾರ್ ಎಂದು ತಿರುಗಿದವರೆ ಇದೀಗ ಇದೇ ಕ್ಷೇತ್ರದ ಜನರ ಮುಂದೆ ಹೆಬ್ಬಾರ್ ವಿರುದ್ಧ ಮಾತನಾಡಿ ಮತ ಹೇಗೆ ಪಡೆಯಲಿದ್ದಾರೆಂಬುದು ಕುತೂಹಲವಾಗಿದೆ.

ಇದ್ದಕ್ಕಿದ್ದಂತೆ ಸಿಡಿದೆದ್ದು ಯಾರು ಊಹಿಸಲಾಗದಂತೆ ಸಂಘಪರಿವಾರದ ಗರಡಿಯಲ್ಲಿ ಪಳಗಿದ ಕಟ್ಟಾ ಹಿಂದುತ್ವ ಪ್ರತಿಪಾಧಿಸುತ್ತಿದ್ದ ಉದ್ಯಮಿ ಶ್ರೀನಿವಾಸ ಭಟ್ ಧಾತ್ರಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿ ಕೊನೆ ಹಂತದವರೆಗು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪೈಪೋಟಿಯಲಿದ್ದು ಕೊನೆ ಗಳಿಗೆಯಲ್ಲಿ ವಿ.ಎಸ್ ಪಾಟೀಲ್ ಗೆ ಟಿಕೆಟ್ ಘೋಷಣೆಯಗಿದೆ ಇದಕ್ಕಾಗಿ ಧಾತ್ರಿ ಭಟ್ಟರಿಗೆ ಯವ ಮದ್ದು ಅರೆದಿದ್ದಾರೋ ವರಿಷ್ಟರು ನಿಗೂಢವಾಗಿದೆ. ಬಲ್ಲ ಮೂಲಗಳ ಪ್ರಕಾರ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಚುನಾವಣ ಪ್ರಚಾರ ಸಮಿತಿ ಉಸ್ತುವಾರಿ ಧಾತ್ರಿ ಹೆಗಲಿಗೆ ಹೊರಿಸಲಾಗಿದೆ ಎನ್ನುತ್ತಿದ್ದಾರೆ. ಹಾಗೇನಾದರು ಆದರೆ ಹೆಬ್ಬಾರ್ ಸೋಲಿಸಲು ಕಾಂಗ್ರೆಸ್ ರಾಜ್ಯ ನಾಯಕರು ಟಾಸ್ಕ್ ನೀಡಿರಬಹುದು ಎನ್ನುತ್ತಿದೆ ರಾಜಕೀಯ ವಲಯ.

ತೆನೆಹೊತ್ತ ಪಕ್ಷದ ಕತೆ ಏನು…? ಕ್ಷೇತ್ರದಲ್ಲಿ ಜೆಡಿಎಸ್ ಕಳೆದ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತು ಹೆಬ್ಬಾರ್ ಕಾಂಗ್ರೆಸ್ ಗೆ ರಾಜಿನಾಮೆ ಕೊಟ್ಟು ಬಿಜೆಪಿ ಯಿಂದ ಸ್ಪರ್ಧಿಸಿದ ಉಪಚುನಾವಣೆಯಲ್ಲಿ ಸಹ ನೆಲಕಚ್ಚಿ ಹೋಗಿತ್ತು. ಆದರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜನತಾ ಜಲಧಾರೆ, ಪಂಚರತ್ನ ಯಾತ್ರೆ ಪಕ್ಷಕ್ಕೆ ಹೆಚ್ಚಿನ ಬಲ ಬಂದಿದೆ ಇದರ ಹಿನ್ನೆಲೆಯಲ್ಲಿ ಡಾ,ನಾಗೇಶ್ ನಾಯ್ಕ್ ಕಾಗಾಲ ಮತ್ತು ಸಂತೋಷ್ ರಾಯ್ಕರ್ ಇಬ್ಬರು ಪ್ರಭಲ ಟಿಕೇಟ್ ಆಕಾಂಕ್ಷಿಗಳ ಮದ್ಯೆ ಪೈಪೋಟಿ ಇನ್ನೂ ನಡೆಯುತ್ತಿದ್ದು ಟಿಕೇಟ್ ಯಾರ ಪಾಲಗಲಿದೆ ನೋಡಬೇಕಿದೆ.

ಚುನಾವಣೆ ಬಂತೆಂದರೆ ಅನೇಕ ಮಂದಿ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸಲಿದ್ದು ಕೆಲವರು ಹೆಸರಿಗಾಗಿ ಸ್ಪರ್ಧಾ ಕಣಕ್ಕೆ ದುಮುಕುತ್ತಾರೆ.
ಒಟ್ಟಿನಲ್ಲಿ ಬರಲಿರುವ ಚುನವಣೆಯು ಪಕ್ಷಗಳ ನಡುವೆ ಎನ್ನುವುದಕ್ಕಿಂತ ವ್ಯಕ್ತಿಗಳ ನಡುವಿನ ಕದನ ಎನ್ನಬಹುದಗಿದೆ.
ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ 90,937 ಪುರುಷ 88,536 ಮಹಿಳಾ ಮತದಾರರು ಹಾಗು 1 ಇತರೆ ಮತ ಸೇರಿದಂತೆ ಒಟ್ಟು 1,79,474 ಮತದಾರರಿದ್ದಾರೆ.
ಅವುಗಳಲ್ಲಿ ಅತಿ ಹೆಚ್ಚು ಎಲ್ಲಾ ವರ್ಗದ ಬ್ರಾಹ್ಮಣರ 25,000 ಮತಗಳಿವೆ ಈ ಮತಗಳಿಗೆ ಸರಿಸಾಟಿ ಎಂಬಂತೆ ವೀರಶೈವ ಲಿಂಗಾಯತರ 21,600 ಮತಗಳು ಮತ್ತು ಈಡಿಗ ನಾಮಧಾರಿ ಸಮುದಾಯಗಳ 21,000 ಮತಗಳು ಕ್ಷೇತ್ರಾದ್ಯಂತ ಇವೆ ಬಹಳ ಪ್ರಮುಖವಾಗಿ ಪರಿಶಿಷ್ಟ ಜಾತಿ ಮತಗಳು ದೊಡ್ಡ ಮಟ್ಟದಲ್ಲಿ 24,000 ದಷ್ಟಿದ್ದು ಯಾವುದೆ ಅಭ್ಯರ್ಥಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಪರಿಶಿಷ್ಟ ಪಂಗಡ ಮತಗಳು10,000 ಇದ್ದು ಇದರಲ್ಲಿ ವಾಲ್ಮೀಕಿ, ಲಂಬಾಣಿ,ಸಿದ್ದಿ ಸಮೂದಾಯದ ಮತಗಳು ಒಳಗೊಂಡಿದೆ. ಇದೆಲ್ಲದರ ಮದ್ಯೆ ಮರಾಠ ಸಮೂದಾಯದ ಮತಗಳು 17,000 ಇದ್ದು ಮುಸ್ಲಿಂರ ಮತಗಳು 15,000 ದಷ್ಟಿದೆ. ಇನ್ನುಳಿದಂತೆ5000 ದಷ್ಟು ಕ್ರಿಶ್ಚಿಯನ್ ಮತಗಳು ಹಾಗು ಇತರೆ 40,874 ಮತಗಳು ಸೇರಿಕೊಂಡಿವೆ. ಈ ಎಲ್ಲಾ ವಿಭಾಗವಾರು ಮತಗಳನ್ನು ಗಮನಿಸಿದಾಗ ಅಭ್ಯರ್ಥಿಯ ಗೆಲುವಿಗೆ ಯಾವಯಾವ ವಿಭಾಗ ಬಲ ತುಂಬಬೇಕಿದೆ ಎಂಬ ಲೆಕ್ಕಾಚಾರ ಪ್ರತಿಯೊಬ್ಬ ಓದುಗರ ಮನದಲ್ಲಿ ಹಾದು ಹೋಗವುದಂತು ಕಂಡಿತ.
Prathidvani Yellapura