Breaking News

ಮತ್ತಷ್ಟು ಹೆಚ್ಚಾದ ಕೊರೊನ ಸೋಂಕು, 6 ಕ್ಕೇರಿದ ಸೋಂಕಿತರ ಸಂಖ್ಯೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿಧ್ವನಿ,ಯಲ್ಲಾಪುರ – ಜನಜೀವನದಿಂದ ಕಣ್ಮರೆಯಾಗಿದ್ದ ಕೊರೊನ ಹೆಮ್ಮಾರಿ ಶುಕ್ರವಾರ ಯಲ್ಲಾಪುರದಲ್ಲಿ  ವ್ಯಕ್ತಿಯೋರ್ವನಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು ಶನಿವಾರ ಮತ್ತೆ 5 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದ್ದು ಆತಂಕ ಇನ್ನಷ್ಟು ಹೆಚ್ಚಾಗಿದೆ.


      ಚುನಾವಣೆ ಕಾರ್ಯಕ್ಕಾಗಿ ರಾಜಸ್ಥಾನ ದಿಂದ ಬಂದಿರುವ ಯುವಕನೋರ್ವನಲ್ಲಿ ಸೋಂಕು ಕಾಣಿಸಿದ್ದು ಆತನ ಸಂಪರ್ಕದಲಿದ್ದ ಸುಮಾರು 70 ಮಂದಿ ಗಂಟಲುದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು ಶನಿವಾರ ಅದರ ಪಲಿತಾಂಶ ಬಂದಿದ್ದು ಮತ್ತೆ 5 ಜನರಲ್ಲಿ ಸೋಂಕು ದೃಡಪಟ್ಟಿದೆ.
     ಕೊರೊನ ತೊಲಗಿತೆಂಬ ನಿರಾತಂಕದಲಿದ್ದ ಯಲ್ಲಾಪುರದ ಜನರಿಗೆ ಚುನಾವಣೆಯ ಕಾರಣದಿಂದ ಮತ್ತೆ ಕೋವಿಡ್ ಭೂತ ಎಲ್ಲಿ ವಕ್ಕರಿಸಿ ಬಿಡುವುದೊ ಎಂಬುದೆ ದೊಡಚಿಂತೆಯಾಗಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಪರಿಷತ್ ಕಲಾಪದಲ್ಲಿ ಪ್ರತಿಧ್ವನಿಸಿದ ಯಲ್ಲಾಪುರ ಕಾಳಮ್ಮ ನಗರ ಕೆಲವು  ನಿವಾಸಿಗಳಿಗೆ ವಿದ್ಯುತ್ ನೀಡದ ಸಮಸ್ಯೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದ ಕಾಳಮ್ಮನಗರದ ಮುರಾರ್ಜಿ ವಸತಿ ಶಾಲೆ …

Leave a Reply

Your email address will not be published. Required fields are marked *