Breaking News

ಆರೋಪದಲ್ಲಿ ಹುರುಳಿಲ್ಲ ಹೆಬ್ಬಾರ್ ಜನಪ್ರಿಯತೆ ತಡೆಯಲು ಸಾದ್ಯವಿಲ್ಲ ಹಕ್ಕು ಪತ್ರ ವಿತರಣೆ ಕ್ರಮಬದ್ದವಾಗಿದೆ – ಜಿ.ಎನ್.ಜಿ….


ಪ್ರತಿಧ್ವನಿ,ಯಲ್ಲಾಪುರ : ಸಮಾಜದಲ್ಲಿ ಕ್ರಿಮಿನಲ್ ಪಟ್ಟ ಕಟ್ಟಿಕೊಂಡು ಅಪರಾಧ ಹಿನ್ನೆಲೆಯುಳ್ಳ ಕೆಲವು ಕುಚೋದ್ಯ ವ್ಯಕ್ತಿಗಳ ಆರೋಪಿಸುತ್ತಿರುವುದು ಸತ್ಯಕ್ಕೆ ದೂರವಾಗಿದೆ. ಸೋಲಿನ ಹತಾಶೆ ಕಾಂಗ್ರೆಸ್ ಕುಮ್ಮಕ್ಕಿನಿಂದ ಆದಾರರಹಿತ ಆರೋಪ ಮಾಡಲಾಗುತ್ತಿದೆ.
ಬಡ ಮಧ್ಯಮ ವರ್ಗದವರ ಮನೆದೇವರಂತೆ ಸಚಿವ ಹೆಬ್ಬಾರ್ ಅವರನ್ನು ಕ್ಷೇತ್ರದ ಜನತೆ ಅಭಿಮಾನದಿಂದ ಕಾಣುತ್ತಿದ್ದು ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಲಿದ್ದಾರೆಂಬ ಮಾಹಿತಿ ವಿರೋಧಿ ಪಾಳಯಕ್ಕೆ ಲಭಿಸಿದ ಹಿನ್ನೆಲೆಯಲ್ಲಿ ಇಲ್ಲಸಲ್ಲದ ಆರೋಪ ಮಾಡಿ ಜನರಲ್ಲಿ ಗೊಂದಲ ಸೃಷ್ಟಿಸಲು ಹೊರಟಿದ್ದಾರೆ ಕೆಲವು ಸಮಾಜ ಘಾತುಕ ಶಕ್ತಿಗಳು ಎಂದು ಯಲ್ಲಾಪುರ ತಾಲೂಕು ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ್ ಹೇಳಿದರು.


ಕಳೆದ ಎರಡು ದಿನಗಳ ಹಿಂದೆ ಪತ್ರಿಕೆಗಳಲ್ಲಿ ಯಲ್ಲಾಪುರದದಲ್ಲಿ ಭೋಗಸ್ ಹಕ್ಕುಪತ್ರ ವಿತರಿಸುತ್ತಿದ್ದಾರೆ ಎಂಬ ಸುದ್ದಿಗೆ ಸ್ಪಷ್ಟನೆ ನೀಡುವ ಸಲುವಾಗಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
2005 ಕ್ಕೂ ಪೂರ್ವದಲ್ಲಿ ಯಲ್ಲಾಪುರ ಪಟ್ಟಣದ ಕೆಲವು ಪ್ರದೇಶಗಳನ್ನು ಕೊಳಚೆ ಪ್ರದೇಶಗಳೆಂದು ಗುರುತಿಸಿದ್ದು ಸಚಿವ ಹೆಬ್ಬಾರ್ ಶಾಸಕರಾಗಿ ಆಯ್ಕೆಯಾದಾಗಿನಿಂದ ಬಡವರು ವಾಸಿಸುವ ಜಾಗ ಅವರದ್ದೆ ಆಗಬೇಕೆಂದು ಸ್ವಂತ ಸೂರು ಹೊಂದಬೇಕೆಂದು ಸರ್ಕಾರ ಮಟ್ಟದಲ್ಲಿ ಶ್ರಮಿಸಿದ ಫಲವೆ ಹಕ್ಕು ಪತ್ರ ನೀಡಲು ಕಾರಣವಾಗಿದೆ. ಕೆಲವು ತಾಂತ್ರಿಕ ಕಾರಣಗಳಿಂದ ಬಡವರಿಗೆ ಅನುಕೂಲವಾಗಲೆಂದು ಸರಳ ಸ್ವರೂಪದಲ್ಲಿ ಹಕ್ಕು ಪತ್ರ ವಿತರಿಸಿದ್ದಾರೆ. ಕೇವಲ ಯಲ್ಲಾಪುರದಲ್ಲಿ ಮಾತ್ರವಲ್ಲದೆ ಮುಂಡಗೋಡು ತಾಲೂಕಿನಲ್ಲಿ ಕೂಡ ಈ ಯೋಜನೆ ಜಾರಿಮಾಡಿದ್ದು ಕೊಟ್ಟ ಹಕ್ಕು ಪತ್ರ ಇದೀಗ ಅವರವರ ಹೆಸರಿಗೆ ರಿಜಿಸ್ಟರ್ ಕೂಡ ಆಗಿದೆ ಇದಕ್ಕಿಂತ ಪುರಾವೆ ಇನ್ನೇನು ಬೇಕು? ಎಂದು ಕಟುವಾಗಿ ಪ್ರಶ್ನೆ ಮಾಡಿದರು.


ಚುನಾವಣಾ ಸಂದರ್ಭದಲ್ಲಿ ಹೆಬ್ಬಾರ್ ವಿರೋಧಿಗಳಿಗೆ ಹೇಳಿಕೊಳ್ಳಲು ವಿಷಯವೆ ಇಲ್ಲದಿರುವುದರಿಂದ ಇಂತಹ ತಲೆ ಬುಡ ಇಲ್ಲದ ವಿಷಯಗಳನ್ನಿಟ್ಟು ಪತ್ರಿಕಾ ಪ್ರಚಾರಕ್ಕಾಗಿ ಗಿಮಿಕ್ ಮಾಡುತ್ತಿದ್ದಾರೆ. ಜನರು ಅಂತಹವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಇಂತಹ ನಡೆಯನ್ನು ಖಂಡಿಸುವುದಲ್ಲದೆ ಕಾನೂನು ಹೋರಾಟದ ಚಿಂತನೆಯು ಸಾಗಿದೆ ಎಂದು ಹೇಳಿದರು.
ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಹೆಬ್ಬಾರ್ ಪರ ತೀವ್ರ ಗೆಲುವಿನ ಅಲೆ ಇದ್ದು ಹತಾಶರಾದ ಕಾಂಗ್ರೆಸ್ ಪಕ್ಷದವರು ಅಪರಾಧ ಹಿನ್ನಲೆಯ ಕೆಲವು ಹೆಬ್ಬಾರ್ ವಿರೋದಿಗಳು ಬಾಯಿಗೆ ಬಂದಂತೆ ಹರಟುತಿದ್ದಾರೆ. ಬಡವರ ಏಳಿಗೆ ಮತ್ತು ಅಭಿವಿಚಾರದಲ್ಲಿ ಹೆಬ್ಬಾರ್ ಅವರು ಏನೆ ಸಮಸ್ಯೆ ಎದುರಾದರು ಎದೆಗುಂದದೆ ಅವರ ಸ್ವಾಭಿಮನಿ ಬದುಕಿಗೆ ಆಸರೆಯಾಗಿ ನಿಲ್ಲಲಿದ್ದರೆ. ಪಟ್ಟಣ ಪಂಚಾಯತ್ ಸಹ ಕಾನೂನು ವ್ಯಾಪ್ತಿ ಮೀರಿ ಯಾವುದೆ ಯೋಜನೆಗಳನ್ನು ತಂದಿಲ್ಲ ಕ್ರಮಬದ್ದವಾಗಿಯೆ ಹಕ್ಕುಪತ್ರ ನೀಡುತ್ತಿದ್ದು ಚುನಾವಣೆ ಎದುರಾದ ಹಿನ್ನೆಲೆಯಲ್ಲಿ ಮುಂದೆ ಆಗಬೇಕಾದ ಕೆಲಸಗಳಿಗೆ ತಡೆಯಾಗಿದೆ ಸದ್ಯದಲ್ಲಿಯೆ ಮತ್ತೆ ಉಳಿದವರ ಹಕ್ಕು ಪತ್ರ ನೀಡುವ ಪ್ರಕ್ರಿಯೆ ಮುಂದುವರೆಸಲಾಗುವುದು ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುನಂದದಾಸ್ ಹೇಳಿದರು.
ಇಷ್ಟೊಂದು ದೊಡ್ಡ ಮಟ್ಟದ ಯೋಜನೆ ಅನುಷ್ಟಾನಗೊಳಿಸುವಾಗ ಕೇವಲ ಸಣ್ಣಪುಟ್ಟ ಅಧಿಕಾರಿಗಳು ಪರಾಮರ್ಶಿಸಿರುವುದಿಲ್ಲ ಬದಲಾಗಿ ಐಎಎಸ್/ಕೆಎಎಸ್ ಮಟ್ಟದ ಅಧಿಕಾರಿಗಳು ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಕಾನೂನು ಕ್ರಮದಂತೆ ನಿರ್ವಹಿಸಿ ನಿರ್ದೇಶಿಸಿರುತ್ತಾರೆ. ಇನ್ನೊಂದು ಸ್ವಾರಸ್ಯವೆಂದರೆ ಹೆಬ್ಬಾರ್ ವಿರೋದಿಗಳೆ ಹೇಳಿರುವಂತೆ ಬಡವರಿಗೆ ಹಕ್ಕುಪತ್ರ ನೀಡಿರುವುದು ತಪ್ಪಾಗಿದೆ ನೀಡಬಾರದು ಎಂಬುದಾಗಿದೆ ಆದರೆ ನಮ್ಮ ನಾಯಕರಾದ ಸಚಿವ ಹೆಬ್ಬಾರ್ ಬಡವರಿಗೆ ಒಳಿತಾಗುವುದಾದರೆ ಕೆಲವು ಕಾನೂನು ಅಡೆತಡೆಗಳನ್ನು ಎದುರಿಸಲು ಸಿದ್ದರಿದ್ದಾರೆ ಎಂದಾಯಿತಲ್ಲ ಎಂದು ರಾಜ್ಯ ವಿಕೇಂದ್ರೀಕರಣ ಯೋಜನಾ ಸಮಿತಿ ಉಪಾಧ್ಯಕ್ಷ ಪ್ರಮೋದ್ ಹೆಗಡೆ ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಶಾಮಿಲಿ ಪಾಟಣ್ಕರ್, ಮಾಜಿ ಅಧ್ಯಕ್ಷರಾದ ರಾಮು ನಾಯ್ಕ್, ಶಿರೀಷ್ ಪ್ರಭು, ಪ್ರಮುಖರಾದ ಮುರಳಿಹೆಗಡೆ ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *