Breaking News

ವಿಜಯ್ ಮಿರಾಶಿ ನೇತೃತ್ವದಲ್ಲಿ ಕಿರವತ್ತಿಯಲ್ಲಿ 2000 ಕ್ಕೂ ಅಧಿಕ ಕಾರ್ಯಕರ್ತರ ಬೃಹತ್ ಸಭೆ ಹೆಬ್ಬಾರ್ ರೋಡ್ ಷೋ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ, ಯಲ್ಲಪುರ-ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಯಲ್ಲಾಪುರ ತಾಲೂಕಿನ ಕಿರವತ್ತಿಯಲ್ಲಿ ವಿಜಯ್ ಮಿರಾಶಿ ನೇತೃತ್ವದಲ್ಲಿ ಆಯೋಜಿಸಿದ 2000 ಕ್ಕು ಅಧಿಕ ಮತದಾರರು ಕಾರ್ಯಕರ್ತರ ಸಭೆ ನಡೆಸಿ ಮತಯಾಚಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ ಇಷ್ಟೊಂದು ಸಂಖ್ಯೆಯ ಮತದಾರರ ಕಾರ್ಯಕರ್ತರ ಬೆಂಬಲ ಕಂಡು ಸಂತಸವಾಗಿದೆ. ಈ ಭಾಗದಲ್ಲಿರುವ ದನಗರಗೌಳಿ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಗೌಳಿಗರ ಪ್ರತಿ ತಾಂಡಾಗಳಿಗೆ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಅದಕ್ಕು ಮಿಗಿಲಾಗಿ ಹಲವು ದಶಕಗಳ ಈ ಭಾಗದ ಬೇಡಿಕೆಯಾದ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಿ ಉತ್ತಮ ಆರೋಗ್ಯ ಸೇವೆ ನೀಡಲು ಪಣತೊಡಲಾಗಿದೆ. ನೀವು ಕೊಟ್ಟ ಆಶಿರ್ವಾದ ನನ್ನ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಶ್ರೀರಕ್ಷೆಯಾಗಿದ್ದು ಪ್ರತಿಭಾರಿ ಈ ಪಂಚಾಯತ್ ವ್ಯಾಪ್ತಿ ಲೀಡ್ ನೀಡಿದೆ ಈ ಬಾರಿ ಅದು ದ್ವಿಗುಣವಾಗಬೇಕಿದೆ ಅದಕ್ಕೆ ನನ್ನೆಲ್ಲಾ ದೇವ ದುರ್ಲಬ ಕಾರ್ಯಕರ್ತರ ಶ್ರಮ ಮತ್ತು ಈ ಭಾಗದ ಜನಾನುರಾಗಿ ಮುಖಂಡ ವಿಜಯ್ ಮಿರಾಶಿ ನೇತೃತ್ವ ಪ್ರಮುಖವಾಗಿದ್ದು ನಿಮ್ಮೆಲ್ಲರಿಗು ಕೃತಜ್ಞತೆ ಸಲ್ಲುಸುತ್ತೇನೆ. ನಿಮ್ಮೆಲ್ಲರ ಅಭಿವೃದ್ಧಿಗೆ ಮುಂದೆಯೂ ಶ್ರಮಿಸುತ್ತೇನೆ’ ಎಂದರು.


ಸಭೆಯ ನಂತರ ಸಚಿವ ಶಿವರಾಮ ಹೆಬ್ಬಾರ್, ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ್, ಮುಖಂಡ ವಿಜಯ್ ಮಿರಾಶಿ ಉಪಸ್ಥಿತಿಯಲ್ಲಿ ಬೃಹತ್ ರೋಡ್ ಷೋ ನಡೆಯಿತು ಕಟ್ಟಿಗೆ ಸಾಮಿಲ್ ನಿಂದ ಕಿರವತ್ತಿ ಪಟ್ಟಣದಲ್ಲಿ ಮೆರವಣಿಗೆ ಸಾಗಿತು ಈ ಸಂದರ್ಭದಲ್ಲಿ ಸಚಿವ ಶಿವರಾಮ ಹೆಬ್ಬಾರ್ ಯುವಕರನ್ನು ಮೀರಿಸುವಂತೆ ಕಾರ್ಯಕರ್ತರೊಂದಿಗೆ ಕುಣಿತದ ಹೆಜ್ಜೆ ಹಾಕಿ ಉತ್ಸಾಹ ತೋರಿದರು.


ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷರಾದ ಗೋಪಾಲಕೃಷ್ಣ ಎನ್.ಗಾಂವ್ಕರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ವಿಜಯ್ ಮಿರಾಶಿ, ಮಂಡಲ ಉಪಾಧ್ಯಕ್ಷರಾದ ಶಿರಿಷ್ ಪ್ರಭು, ಖಜಾಂಚಿ ಮುರುಳಿ ಹೆಗಡೆ, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಪ್ರಮುಖರಾದ ರಹಮತ್ ಅಬ್ಬಿಗೇರಿ, ಪ್ರಮುಖರಾದ ಮಾಕು ಕೋಕರೆ, ರಾಜು ಉಪ್ಪಿನ್, ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು, ಪಕ್ಷದ ವಿವಿಧ ಸ್ತರದ ಮುಖಂಡರು,ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *