
ಪ್ರತಿಧ್ವನಿ, ಯಲ್ಲಾಪುರ- ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ ಬೆನ್ನಲ್ಲೆ ಎಣ್ಣೆ ಕೇಸುಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ.
ಮುಂಡಗೋಡ್ ಪಟ್ಟಣದ ಅಕ್ಷಯ ಹೋಟೆಲ್ ಎದುರು ಪ್ರವೀಣ್ ಕುಮಾರ್ ಶೆಟ್ಟಿ ಎಂಬುವರಿಗೆ ಸೇರಿದ ದ್ವಿಚಕ್ರ ವಾಹನ ತಪಾಸಣೆ ನಡೆಸಿ 10.260 ಲೀಟರ್ ಮಧ್ಯ ಮತ್ತು 20.650 ಲೀಟರ್ ಬಿಯರ್ ಪತ್ತೆ ಆಗಿದ್ದು ಅಂದಾಜು ಮೌಲ್ಯ 94,865 ರು ಆಗಿರುತ್ತದೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಅಬಕಾರಿ ಜಂಟಿ ಆಯುಕ್ತ ಮಂಗಳೂರು ವಿಭಾಗ ಮತ್ತು ಅಬಕಾರಿ ಉಪ ಆಯುಕ್ತ ಕಾರವಾರ ಹಾಗೂ ಅಬಕಾರಿ ಉಪ ಅಧೀಕ್ಷಕ ಯಲ್ಲಾಪುರ ಉಪ ವಿಭಾಗ. ರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಯಲ್ಲಾಪುರ ವಲಯ ನಿರೀಕ್ಷಕ ಪ್ರಶಾಂತ್ ಪಾಟೀಲ್ ಉಪ ನಿರೀಕ್ಷಕ ಅನಿಲ್ ಕೊಕಟನೂರ್ ಮತ್ತು ಸಿಬ್ಬಂದಿಗಳಾದ ಅಭಿಷೇಕ್ ಬೋರಕರ ,ಸಿದ್ಧಾರೂಡ ಬನ್ಸೋಡೆ, ಮೋಹನ್ ಮೊಗೇರ, ತಿಪ್ಪಣ್ಣ ಹುಲ್ಲೂರ್, ಪ್ರವೀಣ್ ಹೊಸಕೋಟೆ, ಸಾಧಿಕ್ ಕಿತ್ತೂರ್ ಭಾಗವಹಿಸಿದ್ದರು.


Prathidvani Yellapura