Breaking News

ಯಲ್ಲಾಪುರ ಕ್ಷೇತ್ರದ ಮಣ್ಣಿನ ಮಗ ಪಕ್ಷಾತೀತ ಜನನಾಯಕ ಹೆಬ್ಬಾರ್ ಜನ್ಮದಿನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿಧ್ವನಿ,ಯಲ್ಲಾಪುರ : ಸಾಮಾನ್ಯ ವ್ಯಕ್ತಿಯೊಬ್ಬ ಡೆಕನ್ ಏರ್‌ವೇಸ್‌ಗೆ ಒಡೆಯನಾಗಿದ್ದು , ಪೆಟ್ರೋಲ್ ಬಂಕ್‌ನಲ್ಲಿ ಕೆಲಸಕ್ಕಿದ್ದವ ರಿಲಯನ್ಸ್ ಸಾಮ್ರಾಜ್ಯದ ದೊರೆಯಾಗಿದ್ದು, ಸಾಮಾನ್ಯ ಗ್ರಾಮೀಣ ಭಾಗದ ಹುಡುಗನೋರ್ವ ಐ.ಎ.ಎಸ್ ಆಗಿದ್ದು ಹೀಗೆ ಅನೇಕ ಪ್ರೇರಣದಾಯಕ ಸುದ್ದಿಗಳ ಜೊತೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಸಾಮಾನ್ಯ ಲಾರಿ ಚಾಲಕನೋರ್ವ ಕರ್ನಾಟಕ ರಾಜ್ಯದ ಹೆಮ್ಮೆಯ ಪ್ರತೀಕ ವಿಧಾನಸಭೆಯಲ್ಲಿ ರಾಜ್ಯದ ಮಂತ್ರಿಯಾಗಿ ಸೇವೆ ಸಲ್ಲಿಸಿದ ಪ್ರೇರಣಾದಾಯಕ ಚರಿತ್ರೆಗೆ ಅರಬೈಲ್ ಶಿವರಾಮ ಹೆಬ್ಬಾರ್ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತಾರೆ.


ಇಂದು ಶಾಸಕ ಶಿವರಾಮ ಹೆಬ್ಬಾರ್ ಅವರ ಜನ್ಮದಿನ ಸಂಭ್ರಮ ಅದು ಕೇವಲ ಅವರ ಕುಟುಂಬಕ್ಕಾಗಲಿ, ಯಲ್ಲಾಪುರ ತಾಲೂಕಿಗಾಗಲಿ ಮಾತ್ರವಲ್ಲ ಬದಲಾಗಿ ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಡಗರ ಸಂಭ್ರಮದಲ್ಲಿ ಆಚರಿಸುತ್ತಾರೆ ಕಾರಣ ಹೆಬ್ಬಾರ್ ಕ್ಷೇತ್ರದ ಮನೆಯ ಮಗನಾಗಿ ಗುರುತಿಸಿಕೊಂಡಿದ್ದಾರೆ ಅದರಲ್ಲು ಬಡ ಮದ್ಯಮವರ್ಗದ ನೆಚ್ಚಿನ ನೇತಾರರಾಗಿದ್ದಾರೆ.


ಹೆಬ್ಬಾರ್ ರಾಜಕೀಯ ನಡೆಗಳೆ ವಿಶೇಷ ಕಾಂಗ್ರೆಸ್‌ನಲ್ಲಿದ್ದಾಗಲು ಬಿಜೆಪಿಯಲ್ಲಿರುವಾಗಲು ಪಕ್ಷದ ವ್ಯಾಪ್ತಿಯನ್ನು ಮೀರಿದ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗುತ್ತಾರೆ ಅದಕ್ಕೆ ಅವರು ಎದುರಿಸಿ ಗೆದ್ದ ನಾಲ್ಕು ಚುನಾವಣೆಗಳೆ ಸಾಕ್ಷಿಯಾಗಿವೆ. ಹೆಬ್ಬಾರ್ ಚುನವಣೆಯಲ್ಲಿ ಮಾತ್ರ ಪರ ವಿರೋದದ ನಡುವಿನ ಹೋರಾಟದಲ್ಲಿರುತ್ತಾರೆ ಮುಗಿದ ನಂತರ ಸರ್ವರಿಗು ಒಂದೇ ತರಹದ ಗೌರವ ಸಮ್ಮಾನಗಳನ್ನು ನೀಡುತ್ತಾರೆ. ಹೆಬ್ಬಾರ್ ಜನ ಸೇವೆಯಲ್ಲಿ ಎಂದಿಗು ರಾಜಕೀಯ ಬೆರೆಸಿದವರಲ್ಲ ಸರ್ವಧರ್ಮಿಯರನ್ನು ಸಮಾನವಾಗಿ ಕಾಣುವುದು ಅವರ ವಿಶೇಷತೆಗಳಲ್ಲಿ ಒಂದಾಗಿದೆ.


ಸದ್ಯ ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸುನಾಮಿ ಎದುರು ಬಿಜೆಪಿ ತರಗೆಲೆಯಂತೆ ಉದುರಿದರು ಹೆಬ್ಬಾರ್ ಅವರ ಬಡವರ , ಮದ್ಯಮವರ್ಗದ ಜನರೊಂದಿಗಿನ ಒಡನಾಟ, ನಿಷ್ಕಲ್ಮಷ ಜನಸೇವೆ, ನನ್ನ ಕ್ಷೇತ್ರ ಎಂಬ ಸಾತ್ವಿಕ ಪ್ರೀತಿ, ವಿರೋದಿಗಳಿಗು ಕೇಡು ಬಗೆಯದ ನಿಸ್ವಾರ್ಥ ವ್ಯಕ್ತಿತ್ವವೆ ಅವರನ್ನು ಗೆಲ್ಲಿಸಿದೆ.


ಕ್ಷೇತ್ರದ ಅಭಿವೃದ್ಧಿ ಕನಸು ಹೊತ್ತು ಇದ್ದ ಅಧಿಕಾರ ತೊರೆದು ಕಾಂಗ್ರೆಸ್ ಪಕ್ಷದ ಎದುರು ತೊಡೆ ತಟ್ಟಿ ರಾಜ್ಯದಲ್ಲಿ ಬಿಜೆಪಿ ಆಡಳಿತ ತಂದು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳ್ಳಿರಿಸಿದ ಹೆಗ್ಗಳಿಕೆಗೆ ಕಾರಣೀಕರ್ತರಾದವರಲ್ಲಿ ಶಿವರಾಮ ಹೆಬ್ಬಾರ್ ಕೂಡಾ ಒಬ್ಬರು. ಅದಾದ ನಂತರ ಸಚಿವ ಸ್ಥಾನ ಗಿಟ್ಟಿಸಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ ಕಂಡು ಕೇಳರಿಯದ ಅಭಿವೃದ್ಧಿ ಸುವರ್ಣಪರ್ವವನ್ನೆ ತಂದಿತ್ತ ಜನನಾಯಕರಾಗಿ ಗುರುತಿಸಿಕೊಂಡವರಾಗಿದ್ದಾರೆ ಅವರ ರಾಜಕೀಯ ಪಯಣವೆ ಒಂದು ರೋಚಕ ರೋಮಾಂಚಕ.

ಸದ್ಯ ಜಿಲ್ಲೆಯಲ್ಲಿ ಗೆದ್ದಿರುವ ಆಡಳಿತ ಪಕ್ಷದ ಶಾಸಕರು ಮತ್ತು ಮಂತ್ರಿ ಸ್ಥಾನ ಗಿಟ್ಟಿಸಿದವರೊಂದಿಗೆ ಹೆಬ್ಬಾರ್ ಉತ್ತಮ ಬಾಂಧವ್ಯ ಹೊಂದಿದ್ದು ಅಭಿವೃದ್ಧಿ ಕಾರ್ಯಗಳಿಗೆ ಎಲ್ಲಿಯೂ ಚ್ಯುತಿ ಬಾರದಂತೆ ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ರಾಜಕೀಯ ಚಾಕಚಕ್ಯತೆಯನ್ನು ಹೊಂದಿದ್ದಾರೆ.


ಇಂದು ಅರಬೈಲ್ ಶಿವರಾಮ ಹೆಬ್ಬಾರ್ ವರಿಗೆ ಜನ್ಮದಿನವಾಗಿದ್ದು ಕ್ಷೇತ್ರಕ್ಕೆ ಮತ್ತಷ್ಟು ಉತ್ತಮೋತ್ತಮ ಸೇವೆ ಲಭಿಸಲೆಂಬುದು ಸಮಸ್ತ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಜನತೆಯ ನಾಡಿಮಿಡಿತದ ಮಾತಾಗಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *