Breaking News

ಶತಾಯುಷಿ ಹಾಗು ಹಿರಿಯರು ಮನೆಯಿಂದಲೇ ಮತಚಲಾಯಿಸಿ ಪ್ರಜಾಪ್ರಭುತ್ವದ ಬದ್ದತೆ ತೋರಿದ್ದಾರೆ

ಯಲ್ಲಾಪುರ : ಕಳೆದೆರಡು ದಿನಗಳ ಹಿಂದೆ ಮನೆಯಿಂದಲೇ ಮತದಾನ ಮಾಡಿದ್ದ ತಾಲೂಕಿನ ಹಿತ್ಲಳ್ಳಿ ಮತದಾನ ಕೇಂದ್ರದ ವ್ಯಾಪ್ತಿಯ ಗೋಪಾಲಕೃಷ್ಣ ಹೆಗಡೆಯವರ 104 ವರ್ಷದ ಸುಬ್ಬಿ ಹೆಗಡೆ ಹಾಗೂ ಇವರ ಸಹೋದರಿ 94 ವರ್ಷದ ಗೌರಿ ಹೆಗಡೆ ಇವರ ಇನ್ನೋರ್ವ ಸಹೋದರಿ 92 ವರ್ಷದ ಭಟ್ ಸಾಕಿನ್ ಕಾನಗೊಡ್ ರವರು ತಮ್ಮ ಮಗನ ಸಹಾಯದಿಂದ ಮೇ 3 ರಂದು ರಂದು ಮತಚಲಾಯಿಸಿದರು.
ಈ ಸಂದರ್ಭದಲ್ಲಿ ಸೆಕ್ಟರ್ -11 ರ ಅಧಿಕಾರಿ ಎನ್.ಆರ್ ಹೆಗಡೆ ಹಾಗೂ ಅವರ ತಂಡ ಮತದಾನ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಿದರು.

ನಡೆದು ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸಲು ಸಾದ್ಯವಾಗದವರು ಮತ್ತು ವಿಶೇಷ ಚೇತನರಿಗೆಂದೇ ಚುನಾವಣ ಆಯೋಗ ಹೊಸ ವ್ಯವಸ್ಥೆ ಮಾಡಿ 80 ವರ್ಷ ದಾಟಿದವರಿಗೆ ಮನೆಯಿಂದಲೇ ಮತಚಲಾಯಿಸುವ ಅವಕಶ ನೀಡಿದೆ. ಇದನ್ನು ಚುನಾವಣೆ ಕಾರ್ಯದಲ್ಲಿ ತೊಡಗಿಸಿಕೊಂಡ ಅಧಿಕಾರಿ ವರ್ಗ ಶ್ರಮವಯಿಸಿ ಗುಡ್ಡಗಾಡು, ಗ್ರಾಮೀಣ ಪ್ರದೇಶದ ಅರಣ್ಯದಲ್ಲಿರುವ ಮನೆಗಳು ಅತ್ಯಂತ ಕಠಿಣ ಪ್ರದೇಶಗಳಿಗೆ ತೆರಳಿ ಮತದಾನ ಮಾಡಿಸುತ್ತಿದ್ದಾರೆ.

ಈ ವ್ಯವಸ್ಥೆ ಕಂಡು ಕೈ ಕಾಲು ಗಟ್ಟಿ ಇರುವ ಯುವ ಜನಾಂಗ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಮತದಾನದ ದಿನವನ್ನು ಮೋಜುಮಸ್ತಿಗೆ ಅಥವ ಚೆನ್ನಾಗಿ ನಿದ್ದೆ ಮಾಡಲು ಉಪಯೋಗಿಸಿದರೆ ಮುಂದೆ ಬರಲಿರುವ ಸರ್ಕಾರದ ಲೋಪದೋಷಗಳನ್ನು ಪ್ರಶ್ನಿಸುವ ಹಕ್ಕಿರುವುದಿಲ್ಲ. ಎಲ್ಲಿಯವರೆಗೆ ಸರ್ವ ಜನತೆ ಪ್ರಜ್ಞಾವಂತರಾಗಿ ನಮ್ಮ ಸಂವಿಧಾನ ಬದ್ದ ಹಕ್ಕಾಗಿರುವ ಮತ ಚಲಾಯಿಸುವ ಹಕ್ಕು ಪೂರೈಸುವುದಿಲ್ಲವೊ ಅಲ್ಲಿಯವರೆಗೆ ಉತ್ತಮ ಜನಪರ ಭ್ರಷ್ಟಾಚಾರ ಮುಕ್ತ ಸರ್ಕಾರ ಸ್ಥಾಪನೆ ಸಾದ್ಯವಿಲ್ಲ.

ಬನ್ನಿ ನಮ್ಮ ಕರ್ತವ್ಯ ನಾವು ನಿರ್ವಹಿಸೋಣ ಮತ್ತು ಕರ್ತವ್ಯ ನಿರ್ವಹಿಸದವರಲ್ಲಿ ಜಾಗೃತಿ ಮೂಡಿಸಿ ಮತದಾನ ಮಾಡುವಂತೆ ಪ್ರೇರೇಪಿಸೋಣ. ಒಟ್ಟಿನಲ್ಲಿ ನಮ್ಮ ನೆಲದ ಪ್ರಜಾಪ್ರಭುತ್ವದ ಹಬ್ಬವನ್ನು ಮತದಾನದ ಮೂಲಕ ಆಚರಿಸೋಣ.

ಚುನಾವಣೆ ಎಂದರೆ ಅಧಿಕಾರಿಗಳಿಗೆ ಕರ್ತವ್ಯ ಅಭ್ಯರ್ಥಿಗಳಿಗೆ ಸೋಲು ಗೆಲುವು ಆದರೆ ಪ್ರಜೆಗಳಿಗೆ ಜೀವನ ದೇಶದ ಭವಿಷ್ಯ ತಪ್ಪದೆ ಮತ ಚಲಾಯಿಸಿ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

2025 ನೆ ಸಾಲಿನ ಯಲ್ಲಾಪುರ ಗಣಪತಿಗಳ ದಿವ್ಯ ದರ್ಶನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದಲ್ಲಿ 20 ಕ್ಕು ಅಧಿಕ ಕಡೆಗಳಲ್ಲಿ …

Leave a Reply

Your email address will not be published. Required fields are marked *