Breaking News

ಪತ್ರಕರ್ತ ನಾಗರಾಜ್ ಮದ್ಗುಣಿ ಪುತ್ರ ತೇಜಸ್ವಿ ಮದ್ಗುಣಿಗೆ ಸಂದ ಹವ್ಯಕ ಪಲ್ಲವ ಪುರಸ್ಕಾರ.

ತೇಜಸ್ವಿ ಮದ್ಗುಣಿಗೆ ಹವ್ಯಕ ಪಲ್ಲವ ಪುರಾಸ್ಕಾರ ಪ್ರಧಾನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ                                 ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ…………


ಪ್ರತಿಧ್ವನಿ,ಯಲ್ಲಾಪುರ: ಹವ್ಯಕ ಭವನದಲ್ಲಿ ಭಾನುವಾರ ನಡೆದ ಅಖಿಲ ಹವ್ಯಕ ಮಹಾಸಭಾದ ‘ಸಂಸ್ಥಾಪನೋತ್ಸವ’ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧನೆಯ ಜೊತೆಗೆ ಇತರ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನೀಡುವ ‘ಹವ್ಯಕ ಪಲ್ಲವ’ ಪುರಸ್ಕಾರವನ್ನು ಯಲ್ಲಾಪುರದ ತೇಜಸ್ವಿ ಮದ್ಗುಣಿ ಗೆ ನೀಡಿಗೌರವಿಸಲಾಯಿತು.

ಪುರಸ್ಕಾರದೊಂದಿಗೆ ತೇಜಸ್ವಿ ಮದ್ಗುಣಿ


   ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಈಶ್ವರ ದೈತೋಟ, ಎಂ.ಕೆ.ಭಾಸ್ಕರ್ ರಾವ್, ಅಖಿಲ ಹವ್ಯಕ ಮಹಾ ಸಭಾದ ಅಧ್ಯಕ್ಷ ಡಾ. ಗಿರಿಧರ ಕಜೆ ಉಪಸ್ಥಿತರಿದ್ದರು. ತೇಜಸ್ವಿ ಯಲ್ಲಾಪುರದ ಪತ್ರಕರ್ತ ನಾಗರಾಜ ಮದ್ಗುಣಿ ಹಾಗೂ ಡಾ. ಜಿ.ಪಿ. ಭಟ್ಟ ಮದ್ಗುಣಿ ಸ್ಮಾರಕ ಆಯುರ್ ಸೇವಾ ಭವನದ ವೈದ್ಯೆ ಡಾ. ಸುಚೇತಾ ಮದ್ಗುಣಿ ಇವರ ಪುತ್ರನಾಗಿದ್ದಾನೆ.

        ತೇಜಸ್ವಿ ಮದ್ಗುಣಿ ಯಲ್ಲಾಪುರ ತಾಲೂಕಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ವೈ.ಟಿ.ಎಸ್.ಎಸ್ ಸಂಸ್ಥೆ ವಿದ್ಯಾರ್ಥಿ ಯಾಗಿದ್ದು ಬುದ್ದಿಮತ್ತೆಗೆ ಸಂಬಂದಿಸಿದ ಶೈಕ್ಷಣಿಕ ಚಟುವಟಿಕೆಯಲ್ಲಿ ಚುಕುಕುತನಹೊಂದಿದ್ದ ತೇಜಸ್ವಿ ಕಲೆ ಮತ್ತು ಕ್ರೀಡೆಗಳಲ್ಲಿ ಆಸಕ್ತಿ ಹೊಂದಿದ್ದಾನೆ. ಸದ್ಯ ಧಾರವಾಡದಲ್ಲಿ ವಿಧ್ಯಾಭ್ಯಾಸ ಮುಂದುವರೆಸಿದ್ದು ಇನ್ನಷ್ಟು ಹೆಚ್ಚಿನ ಸಾಧನೆ ಮಾಡಲೆಂದು ಹಿತೈಷಿಗಳು, ಪ್ರಮುಖರು, ಕುಟುಂಬದವರು ಹರಸಿ ಹಾರೈಸಿದ್ದಾರೆ.

ನಾಗರಾಜ್ ಮದ್ಗುಣಿ ಹಾಗು ಡಾ, ಸುಚೇತ ಮದ್ಗುಣಿ

ಮಕ್ಕಳ ಸಾಧನೆಮಾಡಿ ಸಮಾಜ ಅಥವಾ ಸಂಘ ಸಂಸ್ಥೆಗಳು ಗುರುತಿಸಿ ಪ್ರೋತ್ಸಾಹಿಸಿ ಗೌರವಿಸಿದರೆ ತಂದೆತಾಯಿಗಳಿಗೆ ಆಗುವ ಆನಂದ ಅಪರಿಮಿತವಾದದ್ದು. ಮಕ್ಕಳು ಸಾತ್ವಿಕ ಸಾಧನೆಗಳನ್ನು ಮಾಡಿದರೆ ಅದಕ್ಕಿಂತ ತಂದೆತಾಯಿಗಳಿಗೆ ನೀಡುವ ಉನ್ನತ ದರ್ಜೆಯ ಕೊಡುಗೆ ಮತ್ತೊಂದಿಲ್ಲ. ನಮ್ಮ ಮಗನಿಗೆ ಸಂಧ ಗೌರವಕ್ಕೆ ಕಾರಣೀಬೂತರಾದ ಸರ್ವರಿಗು ಅತಾನಂತ ಧನ್ಯವಾದಗಳು. ‌‌‌‌ ‌‌‌ನಾಗರಾಜ್ ಮದ್ಗುಣಿ, ಪತ್ರಕರ್ತ. ಡಾ, ಸುಚೇತ ಮದ್ಗುಣಿ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *