
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ…………..
ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಹಿಟ್ಟಿನಬೈಲ್ ಸಮೀಪ ಬಳ್ಳಾರಿ-ಕಾರವಾರ ರಾಷ್ಟಿçÃಯ ಹೆದ್ದಾರಿಯ ಮೇಲೆ ಮರದ ತುಂಡುಗಳನ್ನು ಹೊತ್ತು ಸಾಗುತ್ತಿದ್ದ ಟ್ರಾö್ಯಕ್ಟರ್ ಆಯ ತಪ್ಪಿ ಹೆದ್ದಾರಿಗೆ ಅಡ್ಡಲಾಗಿ ಬಿದ್ದಿದ್ದು ಕೆಲಕಾಲ ಸಂಚಾರ ವ್ಯತ್ಯಯವಾಗಿತ್ತು.

ತಾಲೂಕಿನ ಲಾಲಗುಳಿಯಿಂದ ಕಿರವತ್ತಿ ಅರಣ್ಯ ಇಲಾಖೆಯ ಡಿಪೋಗೆ ಮರದ ತುಂಡುಗಳನ್ನು ಟ್ರಾಕ್ಟರ್ ನಲ್ಲಿ ಸಾಗಿಸುವಾಗ ಟ್ರಾಲಿ ಆಯ ತಪ್ಪಿ ಹೆದ್ದಾರಿಗೆ ಅಡ್ಡಲಾಗಿ ಮಗುಚಿದೆ. ಟ್ರಾಕ್ಟರ್ ನಲ್ಲಿದ್ದ ಮರದ ತುಂಡುಗಳೆಲ್ಲಾ ಹೆದ್ದಾರಿ ತುಂಬಾ ಚೆಲ್ಲಾಪಿಲ್ಲಿಯಾಗಿದ್ದು ಕೆಲ ಸಮಯ ರಸ್ತೆ ಸಂಚಾರಕ್ಕೆ ತೊಡಕುಂಟಾಗಿತ್ತು.
ಸಾಮರ್ಥ್ಯಕ್ಕೂ ಮೀರಿ ಮರದ ತುಂಡುಗಳನ್ನು ಟ್ರಾಕ್ಟರ್ ನಲ್ಲಿ ಕೊಂಡೊಯ್ಯುವ ಬದಲು ದೊಡ್ಡ ವಾಹನದಲ್ಲಿ ಸಾಗಿಸಬಹುದಿತ್ತು ಎಂಬುದು ಹಲವರ ಅಭಿಪ್ರಾಯವಾಗಿದೆ.

ಯಾವುದೇ ಪ್ರಾಣಾಪಾಯ ಸಂಭವಿಸದೇ ಟ್ರಾö್ಯಕ್ಟರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.


Prathidvani Yellapura