
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು ಮನೆಮನೆ ಪ್ರಚಾರದ ಭರಾಟೆ ಭರದಿಂದ ಸಾಗಿದೆ. ಭಾರತೀಯ ಜನತಾಪಕ್ಷದಿಂದ ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಶಿವರಾಮ ಹೆಬ್ಬಾರ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಪುತ್ರ ವಿವೇಕ್ ಹೆಬ್ಬಾರ್, ಪತ್ನಿ ವನಜಾಕ್ಷಿ ಹೆಬ್ಬಾರ್ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವುದು ತಿಳಿದಿರುವ ವಿಷಯ.

ಐರ್ಲೆಂಡ್‌ನಲ್ಲಿ ವಾಸವಿರುವ ಪುತ್ರಿ ಶೃತಿ ಹೆಬ್ಬಾರ್ ತಂದೆಯಪರ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದು ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಪ್ರಚಾರಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಪ್ರತಿ ಬಾರಿ ಚುನಾವಣಾ ಸಂದರ್ಭದಲ್ಲಿ ವಿದೇಶದಿಂದ ತಂದೆಯ ಪರ ಪ್ರಚಾರಕ್ಕಾಗಿ ಬರುವ ಶೃತಿ ಹೆಬ್ಬಾರ್ ತಮ್ಮದೇ ಮಹಿಳಾ ಬಳಗವನ್ನು ಹೊಂದಿದ್ದು ಎಲ್ಲರೊಂದಿಗೆ ಬೆರೆತು ಸರಳ ಸೌಜನ್ಯದಿಂದ ಪ್ರಚಾರಕಾರ್ಯದಲ್ಲಿ ತೊಡಗಿಕೊಂಡು ವಿದೇಶದಲ್ಲಿ ವಾಸವಿದ್ದರೂ ಭಾರತೀಯ ಸಂಸ್ಕಾರದಿಂದ ಹಿರಿಯರಿಗೆ ಗೌರವ ನೀಡಿ ತಂದೆಯ ಪರ ಮತ ಯಾಚಿಸುತ್ತಾ ಗಮನ ಸೆಳೆದಿದ್ದಾರೆ.

Prathidvani Yellapura