Breaking News

ರವೀಂದ್ರ ನಗರ ಆಂಜನೇಯ ದೇವರ ಪಲ್ಲಕ್ಕಿ ನಿರ್ಮಾಣ ಸಹಾಯಾರ್ಥ ನಾಟಕ ಪ್ರದರ್ಶನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ರವೀಂದ್ರನಗರದಲ್ಲಿರುವ ಶ್ರೀ ಆಂಜನೇಯ ದೇವರ ಪಲ್ಲಕ್ಕಿ ನಿರ್ಮಾಣಕ್ಕಾಗಿ ಶ್ರೀ ಗುರುಸಿದ್ಧೇಶ್ವರ ನಾಟ್ಯ ಸಂಘದ ಸಹಕಾರದಲ್ಲಿ “ಚಿನ್ನದ ಗೊಂಬೆ” ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.
ಪಟ್ಟಣದ ಕೆಇಬಿ ಮುಂಭಾಗದ ಮದ್ಗುಣಿ ಕಾಂಪ್ಲೆಕ್ಸ್ ಆವರಣದಲ್ಲಿ ಮಂಡಲಗಿರಿಯ ಶ್ರೀ ಗುರುಸಿದ್ದೇಶ್ವರ ನಾಟ್ಯ ಕಂಪನಿಯವರ ವತಿಯಿಂದ ಚಿನ್ನದ ಗೊಂಬೆ ಎಂಬ ಸುಂದರ ಸಾಮಾಜಿಕ ಹಾಸ್ಯಭರಿತ ನಾಟಕವನ್ನು ಪ್ರದರ್ಶಿಸಲಾಯಿತು.

ಪಲ್ಲಕ್ಕಿ ನಿರ್ಮಾಣದ ಧಾರ್ಮಿಕ ಸೇವಾಕಾರ್ಯದಲ್ಲಿ ಕೈಜೋಡಿಸಿದ ನಾಟಕ ಕಂಪನಿಯ ಕಲಾವಿದರಿಗೂ ಹಾಗೂ ನಾಟಕ ನಡೆಸಲು ಸ್ಥಳಾವಕಾಶ ನೀಡಿದ ವೇಣುಗೋಪಾಲ ಮದ್ಗುಣಿ ಅವರಿಗೂ ರವೀಂದ್ರನಗರದ ಶ್ರೀ ಆಂಜನೇಯ ದೇವಸ್ಥಾನ ಕಮಿಟಿ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಮಿಟಿಯ ಅಧ್ಯಕ್ಷ ಪ್ರಶಾಂತ ಡಿ ಜೋಗಳೇಕರ , ಉಪಾಧ್ಯಕ್ಷ ಮಹಾದೇವ ಭೋವಿವಡ್ಡರ, ಸದಸ್ಯರಾದ ರಾಜು ಬದ್ದಿ, ಅನಿಲ ಜೋಗಳೇಕರ, ಲೋಕನಾಥ ಗಾಂವ್ಕರ್, ಮಹೇಶ್ ಆಲ್ಮಠ, ಶಿವರಾಜ ಭೋವಿವಡ್ಡರ, ಕುಮುದಾ ಸಾಣೆ, ಸುಮಂಗಲಾ ಮರಾಠಿ ನಾಟಕ ಕಂಪನಿಯ ಎಲ್ಲ ಕಲಾವಿದರು ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *