
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಕಾಳಮ್ಮನಗರದ ಎರಡು ಸ್ಥಳಗಳಲ್ಲಿ ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಸಭೆ ನಡೆಯಿತು.
ಪಕ್ಷದ ನಾಯಕರಾದ ವಿ.ಎಸ್ ಪಾಟೀಲ್, ಶ್ರೀನಿವಾಸ್ ಭಟ್ ಧಾತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬ್ಲಾಕ್ ಅಧ್ಯಕ್ಷ ಡಿ.ಎನ್ ಗಾಂವ್ಕರ್ ಅಧ್ಯಕ್ಷತೆ ವಹಿಸಿದ್ದರು.
ಜನರು ನೆಮ್ಮದಿಯ ಜೀವನ ನಡೆಸಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದು ಅನಿವಾರ್ಯವಾಗಿದೆ ಎಂಬುದು ನಾಯಕರ ಅಭಿಪ್ರಾಯವಾಗಿತ್ತು.

ಮಾಜಿ ಅಧ್ಯಕ್ಷ ವಿ.ಸ್ ಭಟ್ ಪ್ರಮುಖರಾದ ಎನ್.ಕೆ ಭಟ್, ಉಲ್ಲಾಸ ಶಾನಭಾಗ , ಎಂಡಿ ಮುಲ್ಲಾ, ತಾಲೂಕ ಮಹಿಳಾ ಸೆಲ್ ಅಧ್ಯಕ್ಷೆ ಪೂಜಾ ನೇತ್ರಕರ್, ಪಟ್ಟಣ ಪಂಚಾಯತ್ ಸದಸ್ಯರಾದ ಕೈಸರ್ ಅಲಿ, ನರ್ಮದ ನಾಯಕ್ , ಜಿಲ್ಲಾ ಕಮಿಟಿಯ ಸರಸ್ವತಿ ಗುನುಗ ,ಅನಿಲ್ ಮರಾಠೆ, ಇಡಗುಂದಿ ಘಟಕದ ಅಧ್ಯಕ್ಷ ರಾಘು ನಾಯಕ್ ಪ್ರಮುಖರಾದ ಎನ್.ಎನ್ ಹೆಬ್ಬಾರ್, ಜಿ.ವಿ ಭಟ್ , ಗಜಾನನ ಭಟ್ , ವೆಂಕಟೇಶ ಮತ್ತು ಕಾಳಮ್ಮನಗರ ಬೂತಿನ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.

ಹಿಂದುಳಿದ ವರ್ಗದ ಜಿಲ್ಲಾ ಉಪಾಧ್ಯಕ್ಷ ರವಿ ನಾಯಕ ಸ್ವಾಗತಿಸಿದರು. ನಗರ ಘಟಕದ ಉಸ್ತುವಾರಿ ರವಿಚಂದ್ರ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.




Prathidvani Yellapura