

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಇಂದಿನ ಯುವಕರು ವ್ಯಸನಿಗಳಾಗುತ್ತಿರುವುದು ತುಂಬಾ ಆತಂಕಕಾರಿ ವಿಷಯವಾಗಿದೆ. ಹಿಂದಿನ ಕಾಲದ ಜನರು ವ್ಯಸನ ಮುಕ್ತರಾಗಿ ಆರೋಗ್ಯಕರ ಜೀವನವನ್ನು ನಡೆಸಿರುತ್ತಾರೆ ಆದರೆ ಇಂದು ಯುವಕರು ದುಶ್ಚಟಗಳಿಗೆ ಬಲಿಯಾಗಿ ತಮ್ಮ ಜೀವನವನ್ನು ಹಾಳುಮಾಡಿಕೊಂಡು ಸಮಾಜಕ್ಕೆ ಕಂಟಕರಾಗಿದ್ದಾರೆ. ಆದ್ದರಿಂದ ಯುವಕರು ದುಶ್ಚಟಗಳಿಂದ ದೂರವಾಗಿ ಆರೋಗ್ಯಪೂರ್ಣ ಜೀವನ ನಡೆಸಬೇಕೆಂದು ಕ್ಷೇತ್ರಶಿಕ್ಷಣಾಧಿಕಾರಿ ಎನ್.ಆರ್ ಹೆಗಡೆ ಹೇಳಿದರು.

ಅವರು ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ತಾಲೂಕಾ ಆಡಳಿತ ಯಲ್ಲಾಪುರ ಹಾಗೂ ಕಾಲೇಜಿನ ಯುವ ರೆಡ್ಕ್ರಾಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಪ್ರಯುಕ್ತ ವ್ಯಸನ ಮುಕ್ತ ದಿನಾಚರu ಕಾರ್ಯಕ್ರಮದಲ್ಲಿ ಮುಖ್ಯತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಡಾ. ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಮುಖ್ಯ ಉಪನ್ಯಾಸಕರಾಗಿ ಮಾತನಾಡಿದ ಕಾಲೇಜಿನ ವಾಣಿಜ್ಯಶಾಸ್ತç ಸಹಾಯಕ ಪ್ರಾಧ್ಯಾಪಕರಾದ ಶ್ರೀ ಡಿ. ಜಿ. ತಾಪಸ್ ಡಾ. ಡಾ. ಮಹಾಂತ ಶಿವಯೋಗಿಗಳು ೪೦ ವರ್ಷ ತಮ್ಮ ಜೀವನವನ್ನು ಸಾಮಾಜಿಕ ಕಾಳಜಿಗಾಗಿ ಮುಡಿಪಾಗಿಟ್ಟರು. ಮಹಾಂತ ಜೋಳಿಗೆ ಹಿಡಿದು ಭಿಕ್ಷೆ ಬೇಡುತ್ತಾ ವ್ಯಸನ ಮುಕ್ತರಾಗಿ ಸಮಾಜದಲ್ಲಿ ಎಲ್ಲರೂ ನೆಮ್ಮದಿ ಸಂತೋಷದಿಂದ ಬದುಕುವ ವಾತಾವರಣ ನಿರ್ಮಾಣ ಮಾಡಬೇಕೆಂದು ಕರೆ ಕೊಡುತ್ತಾ ಸಮಾಜಕ್ಕೆ ಕೊಡುಗೆ ನೀಡಿದರು. ಅವರ ಈ ಕಾರ್ಯವು ಇಂದಿನ ಯುವ ಜನಾಂಗಕ್ಕೆ ಪ್ರೇರಣೆಯಾಗಿದೆ. ಅವರು ಅವರ ಜನ್ಮದಿನದ ಅಂಗವಾಗಿ ಇವತ್ತು ನಾವೆಲ್ಲ ದುಶ್ಟಟಗಳಿಂದ ದೂರವಾಗಿರೋಣ, ವ್ಯಸನ ಮುಕ್ತರಾಗೋಣ, ಆರೋಗ್ಯಪೂರ್ಣ ಸಮಾಜ ನಿರ್ಮಾಣದತ್ತ ಸಾಗೋಣ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಡಿ. ಎಸ್. ಭಟ್ಟ ಮಾತನಾಡಿ ಈ ಕಾರ್ಯಕ್ರಮದ ಮೂಲಕ ಯುವಜನತೆಗೆ ಒಂದು ಉತ್ತಮ ಸಂದೇಶವನ್ನು ನೀಡುವ ಅನಿವಾರ್ಯತೆ ಇದೆ. ಇಂದಿನ ಯುವಕರೇ ನಾಳಿನ ನಾಯಕರು. ಅವರೇ ಆರೋಗ್ಯವಾಗಿದ್ದರೆ ಈ ದೇಶವನ್ನು ಆರೋಗ್ಯಪೂರ್ಣವಾಗಿರಿಸಬಹುದು ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಗ್ರೇಡ್-2 ತಹಶೀಲ್ದಾರರಾದ ಸಿ. ಜಿ. ನಾಯ್ಕ ಅಧ್ಯಕ್ಷೀಯ ನುಡಿಗಳನ್ನಾಡಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಕು. ನಮ್ರತಾ ಹೆಬ್ಬಾರ್ ಪ್ರಾರ್ಥಿಸಿದಳು. ಯುವ ರೆಡ್ಕ್ರಾಸ್ ಸಂಚಾಲಕ ಶರತ್ಕುಮಾರ್ ಸ್ವಾಗತಿಸಿದರು. ಕನ್ನಡ ಸಹಾಯಕ ಪ್ರಾಧ್ಯಾಪಕ ರಾಮಕೃಷ್ಣ ಗೌಡ ವಂದಿಸಿದರು. ಕು. ಆಶಾ ಬೆಳ್ಳೆನವರ ಕಾರ್ಯಕ್ರಮ ನಿರ್ವಹಿಸಿದರು. ಕು. ಸಹನಾ ನಾಯ್ಕ ವ್ಯಸನ ಮುಕ್ತ ಪ್ರತಿಜ್ಞಾವಿಧಿ ಕಾರ್ಯಕ್ರಮ ನಡೆಸಿಕೊಟ್ಟಳು.
ಮಂಜುನಾಥ ಆಗೇರ ಸಹಾಯಕ ನಿರ್ದೇಶಕರು ತಾಲೂಕಾ ಪಂಚಾಯತ, ಸುನಿಲ್ ಗಾವಡೆ ಮುಖ್ಯಾಧಿಕಾರಿಗಳು ಪ.ಪಂ ಯಲ್ಲಾಪುರ, ಮಹೇಶ ಗೌಳಿ ವೀರಶೈವ ಲಿಂಗಾಯತ ಸಮುದಾಯ ಯಲ್ಲಾಪುರ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರದಲ್ಲಿ ಆರ್.ಡಿ. ಜನಾರ್ಧನ್ ಕ್ರೀಡಾ ಸಂಚಾಲರಕು, ಎನ್.ಬಿ. ಮೆಣಸುಮನೆ ಪತ್ರಾಂಕಿತ ವ್ಯವಸ್ಥಾಪಕರು, ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.

Prathidvani Yellapura