
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ರಾಜ್ಯದಲ್ಲಿ ಇತ್ತೀಚೆಗೆ ವಿಧಾನಸಭಾ ಚುನಾವಣೆ ನಡೆದು ಕಾಂಗ್ರೆಸ್ ಜಯಭೇರಿ ಬಾರಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಗದ್ದುಗೆಯಲ್ಲಿ ಸಿದ್ದರಾಮಯ್ಯ ವಿರಾಜಮಾನರಾಗಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾಗಿದೆ. ಈ ಹಿಂದೆ ಸಿದ್ದರಾಮಯ್ಯ 2017 ರ ಸರ್ಕಾರದಲ್ಲಿ ಮಹತ್ವದ ನಿರ್ಣಯ ತೆಗೆದುಕೊಂಡು ಬಡವರ ಹಸಿದ ಹೊಟ್ಟೆಗೆ ಅತ್ಯಂತ ಕಡಿಮೆ ಹಣದಲ್ಲಿ ಬೆಳಗ್ಗಿನ ತಿಂಡಿ, ಮದ್ಯಾಹ್ನದ ಊಟ, ರಾತ್ರಿಯ ಊಟ ನೀಡುವಂತೆ ವ್ಯವಸ್ಥೆ ತಂದಿದ್ದರು ಅದರಂತೆ ಯಲ್ಲಾಪುರದ ಬೆಲ್ ರಸ್ತೆಯಲ್ಲಿ ಇಂದಿರಾ ಕ್ಯಾಂಟೀನ್ ಕಾರ್ಯ ನಿರ್ವಹಿಸುತ್ತ ಬಡವರ, ಪಾಲಿನ ಅನ್ನಪೂರ್ಣ ದಾಸೋಹ ಕೇಂದ್ರವಾಗಿದೆ.

ಪ್ರಾರಂಭದಲ್ಲಿ ಇದೊಂದು ಬೇಡದ ಯೋಜನೆ ಮುಂದುವರೆಯುವುದು ಕಷ್ಟ ಎಂದೆಲ್ಲಾ ಹೆಳಲಾಗುತ್ತಿತ್ತು ಆದರೆ ಸಿದ್ದರಾಮಯ್ಯ ಅವರ ಯಶಸ್ವಿ ಯೋಜನೆಗಳಲ್ಲಿ ಇಂದಿರಾ ಕ್ಯಾಂಟೀನ್ ಜನ ಮನ್ನಣೆ ಪಡೆಯಿತು ಅದಕ್ಕೆ ಯಲ್ಲಾಪುರದ ಇಂದಿರಾ ಕ್ಯಾಂಟೀನ್ ಇಂದಿಗೂ ಬಡವರ ನಿತ್ಯ ದಾಸೋಹದ ಕೇಂದ್ರವಾಗಿದೆ.

ಸಹಜವಾಗಿಯೆ ಒಂದು ಸರ್ಕಾರ ತಂದ ಯೋಜನೆ ಮತ್ತೊಂದು ಸರ್ಕಾರ ಬದ್ದತೆ ಯಿಂದ ಮುಂದುವರೆಸಿಕೊಂಡು ಸಂಪನ್ಮೂಲ ಪೂರೈಸುತ್ತ ಸಾಗುವುದು ಅತಿ ವಿರಳ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಈಗಿನ ಶಾಸಕ ಶಿವರಾಮ ಹೆಬ್ಬಾರ್ ಆಗಿನ ಶಾಸಕರಾಗಿದ್ದರು ಇಂದಿರಾ ಕ್ಯಾಂಟೀನ್ ನಿರ್ಮಾಣ ಮತ್ತು ಯೋಜನೆ ಅನುಷ್ಠಾನಕ್ಕೆ ನಿಗಾ ವಹಿಸಿ ಮಾಡಿಸಿದ್ದರು. ಕಾರಣ ಅವರು ಮೂಲತಃ ಲಾರಿ ಚಾಲಕರಾಗಿ ಜೀವನ ಪ್ರಾರಂಭಿಸಿದ್ದರು ಅದಕ್ಕಾಗಿ ಬಡವರ, ಕೂಲಿ ಕಾರ್ಮಿಕರ ಉದರದ ಹಸಿವನ್ಬು ಬಲ್ಲವರಾಗಿದ್ದರು. ಇಂದಿಗೂ ಅವರ ಪ್ರಯತ್ನ ಫಲಕಾರಿಯಾಗಿ ಸಾಗಿ ಬಂದಿದೆ.
ಪಟ್ಟಣದ ಬೆಲ್ ರಸ್ತೆಯಲ್ಲಿ ಇರುವ ಇಂದಿರಾ ಕ್ಯಾಂಟೀನ್ ಹಲವು ಸಮಸ್ಯೆಗಳ ನಡುವೆ ನಡೆಯುತ್ತ ಬಂದಿದೆ

ಪ್ರಾರಂಭದಲ್ಲಿ ಇದ್ದ ಸಿಬ್ಬಂದಿಗಳ ಸಂಖ್ಯೆ ಕಡಿಮೆಯಾಗಿದೆ, ಕೊಡುತ್ತಿದ್ದ ಸಂಬಳಕ್ಕೂ ಕತ್ತರಿ ಬಿದ್ದಿದೆ. ಓರ್ವ ಮ್ಯಾನೇಜರ್, ಹೆಡ್ ಕುಕ್, ಅಸಿಸ್ಟೆಂಟ್ ಕುಕ್ ಕ್ಲೀನರ್ ನಾಲ್ಕು ಮಂದಿ ನಿರ್ವಹಿಸುತ್ತಿದ್ದಾರೆ.
ಅಡುಗೆ ತಯಾರಿಕೆಗೆ ಬಳಸುವ ವ್ಯವಸ್ಥೆಯಲ್ಲು ಕೆಲವು ವಸ್ತುಗಳು ಹಾಳಾಗಿದೆ ದೊಡ್ಡ ಗಾತ್ರದ ಫ್ರಿಡ್ಜ್, ಗ್ರೈಂಡರ್, ಮಿಕ್ಸರ್, ವಾಟರ್ ಫಿಲ್ಟರ್, ಮತ್ತು ಸಬ್ ಮರ್ಸಿಬಲ್ ಪಂಪ್, ಹಾಳಾಗಿ ಕೂತಿದೆ. ಬಿಲ್ಡಿಂಗ್ ಸುತ್ತಲು ಮಳೆಗಾಲದಲ್ಲಿ ಸೋರುತ್ತದೆ. ಮುಂಬಾಗದ ಗೇಟ್ ಹಾಳಾಗಿದೆ. ಕ್ಯಾಂಟೀನ್ ಬಳಕೆಯ ಬಳಸಿದ ನೀರು ಮತ್ತು ಒಳಗಿನ ಶೌಚಾಲಯದ ನೀರು ಒಂದೇಕಡೆ ಹರಿದು ಶೇಖರಣೆಯಾಗಿ ದುರ್ನಾಥ ಬರುತ್ತಿದೆ.
ಬೆಳಗಿನ ಉಪಹಾರ 5 ರುಪಾಯಿಗೆ ನೀಡುತ್ತಿದ್ದು ಒಂದೊಂದು ದಿನ ಒಂದು ಬಗೆಯ ತಿಂಡಿ ಸಿದ್ದ ಪಡಿಸಲಾಗುತ್ತದೆ .
ಕ್ಕು ಅಧಿಕ ಮಂದಿ ಉಪಹಾರ ಸೇವಿಸುತ್ತಾರೆ. ಮದ್ಯಾಹ್ನ ೧೫೦ ಕ್ಕು ಅಧಿಕ ಮಂದಿ ರಾತ್ರಿ ವೇಳೆಯು ಸಾಕಷ್ಟು ಪ್ರಮಾಣದಲ್ಲಿ ಊಟಮಾಡುತ್ತಾರೆ ಪ್ರತಿ ಊಟಕ್ಕೆ 10
ರುಪಾಯಿ ನಿಗದಿಪಡಿಸಲಾಗಿದೆ. ಒಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ಆದಾಯದ ರೂಪದಲ್ಲಿ ನೋಡದೆ ಬಡವರ ಹಸಿವು ನೀಗಿಸುವ ಸೇವೆಯ ರೂಪದಲ್ಲಿ ನೋಡಬೇಕಿದೆ.
” ಬೆಂಗಳೂರಿನ ಚಿಪ್ಟಾಲ್ಕ್ ಏಜೆನ್ಸಿ ನಿರ್ವಹಣೆಯ ಜವಾಬ್ದಾರಿ ನಿಭಾಯಿಸುತ್ತಿದ್ದು ಸಿಬ್ಬಂದಿಗಳ ಸಂಬಳ ನೀಡುತ್ತಿದೆ. ಕ್ಯಾಂಟೀನ್ ಕೆಲಸ ಮಾಡುವವರಿಗೆ ಕೆಲಸದ ಸಂದರ್ಭದಲ್ಲಿ ಅವಘಡ ಸಂಭವಿಸಿದರೆ ವೈದ್ಯಕೀಯ ನೆರವು, ಕಾಲಕಾಲಕ್ಕೆ ಸಂಬಳ, ಮತ್ತು ಮಾನವ ಶಕ್ತಿ ಹೆಚ್ಚಿಸಬೇಕಿದ್ದು ಆಹಾರ ತಯಾರಿಸುವಲ್ಲಿ ಬೇಕಾದ ಖರ್ಚುವೆಚ್ಚಗಳ ಪ್ರಮಾಣ ಹೆಚ್ಚಸ ಬೇಕಿದೆ ಎಂಬುದು ಸಿಬ್ಬಂದಿಗಳ ಅಳಲಾಗಿದೆ.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ತಂದ ಇಂದಿರಾ ಕ್ಯಾಂಟೀನ್ ಯೋಜನೆ ಹಲವು ಕಡೆಗಳಲ್ಲಿ ಕಾರಣಾಂತರದಿಂದ ಸ್ಥಗಿತಗೊಂಡರೂ ಹೆಬ್ಬಾರ್ ಬಿಜೆಪಿಯಲ್ಲಿ ಕಾರ್ಮಿಕ ಮಂತ್ರಿಯಾಗಿದ್ದ ಕಾಲಕ್ಕು ನಿರ್ಲಕ್ಷ್ಯ ತೋರದೆ ಸಂಕಷ್ಟದಲ್ಲು ನಡೆಸುವಂತೆ ನೋಡಿಕೊಂಡಿದ್ದಾರೆ. ಸದ್ಯ ಯೋಜನೆಯ ಪಿತಾಮಹನೆ ಮುಖ್ಯಮಂತ್ರಿ ಆಗಿರುವುದರಿಂದ ಇಂದಿರಾ ಕ್ಯಾಂಟೀನ್ ಇನ್ನಷ್ಟು ಹೊಸತನ ಮೈ ಗೂಡಿಸಿಕೊಂಡು ಉಜ್ವಲ ಸೇವೆ ಹಸಿದವರಿಗೆ ನೀಡಲಿದೆ ಎಂಬುದು ಕ್ಯಾಂಟೀನ್ ಬಳಕೆ ಗ್ರಾಹಕರ ಅಭಿಪ್ರಾಯವಾಗಿದೆ.
..ಪ್ರಸ್ತುತ ದಿನಮಾನಗಳಲ್ಲಿ ಆಹಾರ ಸಾಮಗ್ರಿಗಳ ದರ ಹೆಚ್ಚಾಗಿದ್ದು ನಿರ್ವಹಣಾ ವೆಚ್ಛ ದುಬಾರಿಯಾಗುತ್ತಿದೆ. ಸಿಬ್ಬಂದಿಗಳ ಸಂಖ್ಯೆ ಹೆಚ್ಚಿಸಲು ಅಲ್ಲಿನ ಗ್ರಾಹಕರ ಸಂಖ್ಯೆ ಆಧಾರವಾಗಿರುತ್ತದೆ. ಕೆಲಸ ನಿರ್ವಹಿಸುವ ಸ್ಥಳದಲ್ಲಿ ಸಂಭವಿಸಬಹುದಾದ ಅವಘಡಗಳಿಗೆ ಮಾನವೀಯ ನೆರವಿನ ಆಧಾರದಲ್ಲಿ ಸಿಬ್ಬಂದಿಗಳ ಸಂಕಷ್ಟಕ್ಕೆ ಕಂಪನಿ ಭಾದ್ಯತೆ ವಹಿಸಲಿದೆ. ನೀಡುತ್ತಿರುವ ಅಲ್ಪ ಸಂಬಳದಲ್ಲಿ ಪಿಎಫ್ ಹಾಗೂ ಇಎಸ್‌ಐ ಸೌಲಭ್ಯ ನೀಡುವುದು ಕಷ್ಟಸಾಧ್ಯವಾಗಿದೆ. – ರಾಜನ್ ಶೆಟ್ಟಿ, ಗುತ್ತಿಗೆದಾರ
Prathidvani Yellapura