Breaking News

Uncategorized

ಹೆಬ್ಬಾರ್ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿದ ಗೋವಾ ಮಾಜಿ ಶಾಸಕ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸ್ಥಳೀಯ ಶಾಸಕರೂ, ಕಾರ್ಮಿಕ ಸಚಿವರೂ ಆದ ಶಿವರಾಮ ಹೆಬ್ಬಾರ ಅಪಾರ ಪ್ರಮಾಣದ ಅನುದಾನವನ್ನು ತಮ್ಮ ಕ್ಷೇತ್ರಕ್ಕೆ ತಂದು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಕಾರಣದಿಂದಲೇ ಕ್ಷೇತ್ರದ ಜನರ ಪ್ರೀತಿ, ವಿಶ್ವಾಸಗಳನ್ನು ಗಳಿಸಿದ್ದಾರಲ್ಲದೇ, ಪ್ರಸ್ತುತ ಚುನಾವಣೆಯಲ್ಲಿಯೂ ಅತ್ಯಧಿಕ ಮತಗಳ ಅಂತರದಿAದ ಗೆಲುವು ಸಾಧಿಸುವ ಆತ್ಮವಿಶ್ವಾಸ ಹೊಂದಿದ್ದಾರೆ ಎಂದು ಗೋವಾ ರಾಜ್ಯದ ಮಾಜಿ …

Read More »

2019 ರ ಪೋಕ್ಸೊ ಪ್ರಕರಣದ ಆರೋಪಿಗೆ 20 ವರ್ಷ ಜೈಲು 1 ಲಕ್ಷ ದಂಡ ಕೋಟ್೯ ತೀರ್ಪು

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : 2019 ರಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸತ್ರ ನ್ಯಾಯಾಲಯ ಹಾಗೂ ಮಕ್ಕಳ ಸ್ನೇಹಿ ಹಾಗೂ 1 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಡಿ.ಎಸ್ ವಿಜಯ್‌ಕುಮಾರ್ ಆರೋಪಿತನಿಗೆ 20 ವರ್ಷಗಳ ಶಿಕ್ಷೆ ಹಾಗೂ 1 ಲಕ್ಷ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ಪಟ್ಟಣದ ನಿವಾಸಿ 17 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆಂಬ ದೂರು …

Read More »

ಸದೃಡ ದೇಹದ ಆರೋಗ್ಯಕ್ಕೆ ಉತ್ತಮ ಆಹಾರದ ಅಗತ್ಯತೆ ಬಗ್ಗೆ ಡಾ,ಸುಚೇತ ಮದ್ಗುಣಿ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಐಡಿಯಲ್ ಪ್ಲೇ ಅಬಾಕಸ್ ವತಿಯಿಂದ ನಡೆಯುತ್ತಿರುವ ಬೇಸಿಗೆ ಶಿಬಿರದಲ್ಲಿ ಧನ್ವಂತರಿ ಆಯುರ್ವೇದ ಸೇವಾ ಭವನದ ವೈದ್ಯಾಧಿಕಾರಿ ಡಾ.ಸುಚೇತಾ ಮದ್ಗುಣಿ ಶಿಬಿರದ ಮಕ್ಕಳಿಗೆ ಸದಾ ಆರೋಗ್ಯವಂತರಾಗಿರಲು ನಿತ್ಯ ಯಾವ ಆಹಾರ ಸೇವಿಸಬೇಕು, ಜಂಕ್ ಫುಡ್ ನ ದುಷ್ಪರಿಣಾಮಗಳು ಹಾಗೂ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಜಾಗೃತಿ ಬಗ್ಗೆ ವಿಸ್ತಾರವಾಗಿ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಶಿಬಿರದ ಮುಖ್ಯಸ್ಥೆ ಜ್ಯೋತಿ …

Read More »

ಅಕ್ಕಿ ವ್ಯಾಪಾರಿ ವಿನಾಯಕರ ಅಕ್ಷರ ಪ್ರೀತಿ-IAS ಬರೆಯಲಿರುವ ವಿಧ್ಯಾರ್ಥಿಗೆ ಹುಟ್ಟು ಹಬ್ಬದ ಹಣ ನೀಡಿ ಸಾರ್ಥಕ ಕಾರ್ಯ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ: ತಮ್ಮ ವ್ಯಾಪಾರದಲ್ಲಿ ಗಳಿಸಿದ ಹಣದಲ್ಲಿ ಒಂದಷ್ಟು ಪ್ರತಿದಿನ ತೆಗೆದಿರಿಸಿ ಡಬ್ಬದಲ್ಲಿ ಹಾಕಿ ವರ್ಷಕ್ಕೊಮ್ಮೆ ತಮ್ಮ ಹುಟ್ಟು ಹಬ್ಬದ ದಿನ ಒಟ್ಟು ಹಣ ಲೆಕ್ಕ ಮಾಡಿ ಸಾತ್ವಿಕ ಕಾರ್ಯಕ್ಕೆ ನೀಡುವ ಮೂಲಕ ಪಟ್ಟಣದ ಹೆಸರಾಂತ ಅಕ್ಕಿ ವ್ಯಾಪಾರಿ ಸಾಮಾಜಿಕ ಕಾರ್ಯಕರ್ತ ವಿನಾಯಕ ಭಟ್ಟ ಕವಾಳೆ ಮಾದರಿಯಾಗಿದ್ದಾರೆ. IAS ಆಗುವ ಪ್ರಯತ್ನದಲ್ಲಿರುವ ರಾಮನಾಥ ಶಿಂಧೆ ಕರಡೊಳ್ಳಿ ಕೆಲವರು ತಮ್ಮ ಹುಟ್ಟುಹಬ್ಬವನ್ನು ಸಾರ್ಥಕತೆಯಲ್ಲಿ ಆಚರಿಸುವ …

Read More »

ಯಲ್ಲಾಪುರದ ಬೆಲ್ ರಸ್ತೆಯಲ್ಲಿ ದಡೂತಿ ವಾಹನಗಳ ನಿಲುಗಡೆ ಸಂಚಾರಕ್ಕೆ ಅಡಚಣೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಬೆಲ್ ರಸ್ತೆಯಲ್ಲಿ ಹಳೆಯ ತಹಸೀಲ್ದಾರ್ ಕಚೇರಿಯ ಮುಂಭಾಗ ರಸ್ತೆಯ ಒಂದು ಬದಿ ದಡೂತಿ ಟ್ಯಾಂಕರುಗಳು, ಲಾರಿಯ ಬಾಡಿ ಮಟ್ಟವನ್ನೂ ಮೀರಿ ಕಟ್ಟಿಗೆ ತುಂಬಿರುವ ಲಾರಿ, ಇನ್ನಿತರೆ ದೊಡ್ಡ ಗಾತ್ರದ ವಾಹನಗಳನ್ನು ರಸ್ತೆ ಬದಿ ನಿಲ್ಲಿಸುವುದರಿಂದ ಇನ್ನೊಂದು ಬದಿಯಿಂದ ಬರುವ ವಾಹನಗಳಿಗಾಗಲೀ ಸಂಚರಿಸುವ ಪಾದಚಾರಿಗಳಿಗಾಗಲೀ ಸಂಕಷ್ಟ ತಪ್ಪಿದ್ದಿಲ್ಲ. ಒಂದು ದೊಡ್ಡ ಅವಘಡ ಆಗದ ಹೊರತು ಎಚ್ಚೆತ್ತುಕೊಳ್ಳುವ ಲಕ್ಷಣಗಳೆ ಕಂಡು …

Read More »

ಬಸವಣ್ಣನವರು ವಿಶ್ವಕ್ಕೆ ಸಮಾನತೆ ಹಾಗೂ ಏಕತೆಯ ಸಂದೇಶವನ್ನು ಸಾರಿದ್ದಾರೆ – ಜಗದೀಶ್ ಕಮ್ಮಾರ್

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಬಸವಣ್ಣನವರು ಸಮಾಜದಲ್ಲಿನ ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಬೇಕೆನ್ನುವ ನಿಟ್ಟಿನಲ್ಲಿ ವಿರಶೈವ ಲಿಂಗಾಯತ ಧರ್ಮವನ್ನು ಸಂಸ್ಥಾಪಿಸಿ, ತಮ್ಮ ವಚನ ಸಾಹಿತ್ಯದ ಮೂಲಕ ವಿಶ್ವಕ್ಕೆ ಸಮಾನತೆ ಹಾಗೂ ಏಕತೆಯ ಸಂದೇಶವನ್ನು ಸಾರಿದ್ದಾರೆ’ ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ ಹೇಳಿದರು.ಪಟ್ಟಣದ ಆಡಳಿತ ಸೌಧದಲ್ಲಿ ಸರಳವಾಗಿ ಹಮ್ಮಿಕೊಂಡ ಜಗಜ್ಯೋತಿ ಬಸವಣ್ಣನವರ ಜಯಂತಿ ಅಂಗವಾಗಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ …

Read More »

ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ದಿಗೆ ವೇಗ ಹೆಚ್ಚು – ಶಿವರಾಮ ಹೆಬ್ಬಾರ್

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ರಾಜ್ಯ ಮತ್ತು ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರವಿರುವುದರಿಂದ ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳ ವೇಗ ಹೆಚ್ಚಾಗುತ್ತದೆ. ಈ ಹಿನ್ನಲೆಯಲ್ಲಿ ಸಾಕಷ್ಟು ಜನಪರ ಯೋಜನೆಗಳು ಕ್ಷೇತ್ರದಲ್ಲಿ ಅನುಷ್ಠಾನಗೊಂಡಿರುವುದರಿದ ಜನರಲ್ಲಿ ಇನ್ನೂ ಹೆಚ್ಚಿನ ವಿಶ್ವಾಸ ಮೂಡಿದೆ. ಈ ಎಲ್ಲಾ ವಿಚಾರಧಾರೆಗಳನ್ನು ನಮ್ಮೊಳಗೇ ಮೆಲುಕು ಹಾಕುವುದಕ್ಕಿಂತ ಜನರ ಬಳಿಗೆ ಕೊಂಡೊಯ್ದು ಚುನಾವಣಾ ಅಭೂತಪೂರ್ವ ವಿಜಯ ಸಾಧಿಸುವಲ್ಲಿ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದು …

Read More »

ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸೇರ್ಪಡೆ ಪರ್ವ ಬಲು ಜೋರು

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಕಿರವತ್ತಿ ಗ್ರಾಮ ಪಂಚಾಯತ ವ್ಯಾಪ್ತಿ ಹಾಗೂ ಚಂದಗುಳಿ ಪಂಚಾಯತ ವ್ಯಾಪ್ತಿಯ 60 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ರಾಘವೇಂದ್ರ ಭಟ್ಟ ನೇತೃತ್ವದಲ್ಲಿ ವಿ.ಎಸ್.ಪಾಟೀಲ ಸಮ್ಮುಖದಲ್ಲಿ ಮುಂಡಗೋಡದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕಿರವತ್ತಿ ಗ್ರಾ.ಪಂ ವ್ಯಾಪ್ತಿಯ ಬೈಲಂದೂರು ಗ್ರಾಮದ 25 ಕ್ಕೂ ಅಧಿಕ , ಯಲವಳ್ಳಿ ಗ್ರಾಮದ 20 ಕ್ಕೂ ಹೆಚ್ಚು, …

Read More »

ಯಲ್ಲಾಪುರ ತಾಲೂಕಿನ ನಂದೊಳ್ಳಿಯಲ್ಲಿ ರಾಮಲಿಂಗೇಶ್ವರ ನಾಟಕ (ನಾಟ್ಯ) ಕಲಾ ಬಳಗದ ಆಶ್ರಯದಲ್ಲಿ ನಾಟಕ ಪ್ರದರ್ಶನ ಹಾಗೂ ಸನ್ಮಾನ ಕಾರ್ಯಕ್ರಮ

ಪ್ರತಿಧ್ವನಿ,ಯಲ್ಲಾಪುರ – ತಾಲೂಕಿನ ನಂದೊಳ್ಳಿ ಸ.ಹಿ.ಪ್ರಾ ಶಾಲೆಯ ಆವಾರದಲ್ಲಿ ರಾಮಲಿಂಗೇಶ್ವರ ನಾಟಕ (ನಾಟ್ಯ) ಕಲಾ ಬಳಗದ ಕಲಾವಿದರಿಂದ ” ಕುಡುಕ ಕಟ್ಟಿದ ತಾಳಿ ಅರ್ಥಾತ್‌ ಸಾಕು ತಂಗಿಯ ಸಂಕಟ “ ನಾಟಕ ಪ್ರದರ್ಶನ ಕಂಡಿತು. ಜ್ಯೋತಿಷಿ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾ.ಪಂ ಅಧ್ಯಕ್ಷ ನರಸಿಂಹ ಕೋಣೆಮನೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವೈದಿಕ ನಾರಾಯಣ ಭಟ್ಟ ಮೊಟ್ಟೆಗದ್ದೆ, ನಾಟಕ ಕಲಾವಿದ ನರಸಿಂಹ ಭಾಗ್ವತ ಗುಂಡ್ಕಲ್, ನಿವೃತ್ತ ಶಿಕ್ಷಕ ಕೆ.ಜಿ.ನಾಯಕ …

Read More »

ಯಲ್ಲಾಪುರದಲ್ಲಿ ಮುಸ್ಲಿಂ ಸಮುದಾಯದ ಪವಿತ್ರ ರಂಜಾನ್ ಆಚರಣೆ

ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಬಳ್ಳಾರಿ-ಕಾರವಾರ ಹೆದ್ದಾರಿ ಪಕ್ಕದಲ್ಲಿರುವ ಈದ್ಗಾ ಮೈದಾನದಲ್ಲಿ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ನೂರಾರು ಮುಸ್ಲಿಂ ಬಾಂಧವರು ಸೇರಿ ಅಲ್ಲಾಹುಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸುಮಾರು ಇಪ್ಪತ್ತೊಂಬತ್ತು ದಿನಗಳ ಉಪವಾಸ ಮಾಡಿ ಶುಕ್ರವಾರ ಚಂದ್ರ ದರ್ಶನ ಪಡೆದು ಶನಿವಾರ ಬೆಳಗ್ಗೆ 9-30 ರ ಸುಮಾರಿಗೆ ಸಮುದಾಯದ ಧರ್ಮ ಗುರುಗಳ ನೇತೃತ್ವದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಒಬ್ಬರಿಗೊಬ್ಬರು ಆಲಿಂಗಿಸಿಕೊಂಡು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ನಂತರ …

Read More »