ಯಲ್ಲಾಪುರ,ಯಲ್ಲಾಪುರ : ಪಟ್ಟಣದ ಹೊರವಲಯದ ಹುಬ್ಬಳ್ಳಿ ಮಾರ್ಗದಲ್ಲಿ ನ್ಯೂ ಮಲಬಾರ್ ಹೋಟೆಲ್ ಸಮೀಪ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಒಂದು ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟು 20 ಕ್ಕೂ ಅಧಿಕ ಜನರಿಗೆ ಗಾಯಗಳಾದ ಘಟನೆ ಶನಿವಾರ ಮುಂಜಾನೆ ನಡೆದಿದೆ. ಇಂಟರ್‌ಸಿಟಿ ಟ್ರಾವೆಲ್ಸ್ ಹೆಸರಿನ ಖಾಸಗಿ ಲಕ್ಸುರಿ ಬಸ್ ಒಂದು ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿಯ ನ್ಯೂ ಮಲಬಾರ್ ಹೋಟೆಲ್ ಸಮೀಪದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ವಿದ್ಯುತ್ …
Read More »Yearly Archives: 2023
ಇಳೆಗೆ ಮಳೆಯ ಆಗಮನ ಭೂಮಿಯ ಕಡೆಗೆ ರೈತನ ಗಮನ ಚುರುಕಾದ ಕೃಷಿ ಕಾರ್ಯ…
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನಲ್ಲಿ ಮಳೆ ಬಂದದ್ದು ತಡವಾಗಿದೆ ಆದರು ಕೆಲ ದಿನಗಳಿಂದ ಉತ್ತಮ ಮಳೆತ ಪ್ರವೇಶವಾಗಿದ್ದು ಮೊದಮೊದಲು ಮಳೆಯೇ ಇಲ್ಲವಾಗಿ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾದಂತಹ ಭಾವ ತಾಲೂಕಿನ ಎಲ್ಲಾ ರೈತರನ್ನು ಕಾಡಿತ್ತು. ಸದ್ಯ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ಜು.22ರಂದು 119ಮಿ.ಮೀ ಮಳೆಯಾಗಿದ್ದು ಈವರೆಗೆ ಒಟ್ಟು 1087ಮಿ.ಮೀ ಮಳೆಯಾಗಿದೆ. ಯಲ್ಲಾಪುರ ಸುತ್ತಮುತ್ತ ಭತ್ತದ ನಾಟಿ ಕಾರ್ಯ ಪ್ರತಿವರ್ಷವೂ ತಡವಾಗಿಯೇ ಪ್ರಾರಂಭವಾಗುವುದಾದರೂ ಮಡಿ ಕಟ್ಟುವುದು, …
Read More »ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ – ಇಬ್ಬರಿಗೆ ಗಾಯ
ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಹಳಿಯಾಳ ಕ್ರಾಸ್ ಸಮೀಪ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳಿಗೆ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕರೆದೊಯ್ಯಲಾಗಿದೆ. ಗಾಯಗೊಂಡವರು ತಾಲ್ಲೂಕಿನ ಉಮ್ಮಚ್ಚಗಿ ನಿವಾಸಿಗಳಾದ ಸುಬ್ರಹ್ಮಣ್ಯ ಆರ್ ಹೆಗಡೆ ಪರಶುರಾಮ ವಾಲೆಕರ ಎಂಬುವರಾಗಿದ್ದಾರೆ.ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
Read More »ಭೂಕುಸಿತದ ಅಪಾಯದ ಹಿನ್ನೆಲೆ ಕೆಲವು ಫಾಲ್ಸ್ ಗಳಿಗೆ ಪ್ರವಾಸಿಗರಿಗೆ ಪ್ರವೇಶ ನಿಷೇಧ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನಲ್ಲಿ ಸುರಿಯುತ್ತಿರುವ ಬಾರಿ ಮಳೆ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಅರಣ್ಯ ಇಲಾಖೆಯ ಸೂಚನೆಯಂತೆ ಕೆಲವು ಫಾಲ್ಸ್ ಗೆ ತೆರಳುವ ಮಾರ್ಗದಲ್ಲಿ ಭೂಕುಸಿತ ಸಂಭವಿಸಬಹುದಾದ ಹಿನ್ನೆಲೆಯಲ್ಲಿ ಪ್ರವೇಶ ನಿಷೇದಿಸಲಾಗಿದೆ. ಇಡಗುಂದಿ ವಲಯ ವ್ಯಾಪ್ತಿಯಲ್ಲಿರುವ ಕುಳಿಮಾಗೋಡು ಜಲಪಾತ, ಕಾನೂರು ಜಲಪಾತ, ಹಾಗೂ ಶಿರ್ಲೆ ಜಲಪಾತಗಳ ಮಾರ್ಗಗಳಲ್ಲಿ ಭೂ ಕುಸಿತದ ಭೀತಿ ಇದ್ದು ಆಗಸ್ಟ್ ತಿಂಗಳ ಕೊನೆಯವರೆಗೂ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ. …
Read More »ಯಲ್ಲಾಪುರದ ಹೆಸರಾಂತ ಗುತ್ತಿಗೆದಾರ ಬಿ ಸತ್ಯನ್ ಅವರಿಗೆ ಮಾತೃವಿಯೋಗ
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಶಾರದಾಗಲ್ಲಿ ನಿವಾಸಿ ಅಚ್ಚಾ ಕಂಫಟ್೯ ಮಾಲಿಕ ಹೆಸರಾಂತ ಗುತ್ತಿಗೆದಾರ ಸಮಾಜ ಸೇವಕ ಬಿ.ಸತ್ಯನ್ ಅವರಿಗೆ ಮಾತೃವಿಯೋಗವಾಗಿದೆ.ಸತ್ಯನ್ ಅವರ ತಾಯಿ ದೇವಕಿ ವಿ ನಾಯ್ಕ್ ಶುಕ್ರವಾರ ಇಹಲೋಕ ತ್ಯಜಿಸಿದ್ದು ಅವರಿಗೆ 85 ವರ್ಷ ವಯಸ್ಸಾಗಿತ್ತು ವಯೋ ಸಹಜದಿಂದ ನಿಧನರಾಗಿದ್ದು ಎರಡು ಹೆಣ್ಣು ಒಂದು ಗಂಡು ಮಕ್ಕಳನ್ನು ಹಾಗು ಅಪಾರ ಬಂಧು ಬಳಗವನ್ನು ಅಗಲಿರುತ್ತಾರೆ.
Read More »ತಾಲೂಕಿನಲ್ಲಿ ಸುರಿಯುತ್ತಿರುವ ಬಾರಿ ಮಳೆ ಹಿನ್ನೆಲೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲೆಗೆ ರಜೆ ಸೂಕ್ತ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನಾದ್ಯಂತ ಮೂರ್ನಾಲ್ಕು ದಿನಗಳಿಂದ ಬಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಹಳ್ಳಕೊಳ್ಳಗಳೆಲ್ಲ ತುಂಬಿ ಹರಿಯುತ್ತಿದೆ. ತಂಪಾದ ಗಾಳಿ ಎಲ್ಲೆಡೆ ಬೀಸುತ್ತಿದೆ. ಮರದ ರೆಂಬೆ ಕೊಂಬೆಗಳು ಕೆಲವೆಡೆ ಬೃಹತ್ ಗಾತ್ರದ ಮರಗಳು ಧರೆಗುರುಳುತ್ತಿದೆ. ಜೋರಾದ ಗಾಳಿ ಬೀಸುತ್ತಿದೆ. ಈ ಎಲ್ಲಾ ಕಾರಣಗಳಿಂದ ಕನಿಷ್ಠ ಎರಡು ಅಥವ ಮೂರು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ಬಹುಮುಖ್ಯವಾಗಿ ಅಂಗನವಾಡಿಗಳಿಗೆ ಸರ್ಕಾರ ರಜೆ ಘೋಷಿಸುವುದು ಸೂಕ್ತವಾಗಿದೆ ಎಂಬುದು …
Read More »ಯಲ್ಲಾಪುರದ ಹಾಲ್ನೊರೆಯ ಜಲಪಾತಗಳೆಲ್ಲಾ ಮಳೆಯ ಆರ್ಭಟಕ್ಕೆ ರುದ್ರ ರಮಣೀಯವಾಗಿದೆ..!!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪ್ರಕೃತಿ ಸೊಬಗು, ಕಣ್ಮನ ತಣಿಸುವ ಬೆಡಗು, ಹಚ್ಚಹಸಿರಿನ ಕಾನನ ಜಲಪಾತಗಳ ನರ್ತನ ಮಳೆಗಾಲದಲ್ಲಿ ಉತ್ತರ ಕನ್ನಡ ನೋಡಲು ಬಲು ಸುಂದರ ಅದರಲ್ಲು ಯಲ್ಲಾಪುರ ತಾಲೂಕಿನ ಸಾತೋಡ್ಡಿ, ಮಾಗೋಡು ಶಿರ್ಲೆ, ಗಣೇಶ್ ಪಾಲ್ , ಇನ್ನಿತರ ಜಲಪಾತಗಳು ನೋಡಲು ಮನಮೋಹಕವಾಗಿರುತ್ತದೆ.ತಾಲ್ಲೂಕಿನ ಜಲಪಾತಗಳಲ್ಲಿ ಅತ್ಯಂತ ಜನಪ್ರಿಯವಾದ ಪ್ರವಾಸಿಗರ ನೆಚ್ಚಿನ ಜಲಪಾತಗಳಲ್ಲಿ ಸಾತೊಡ್ಡಿ ಮತ್ತು ಮಾಗೋಡು ಅಗ್ರಸ್ಥಾನ ಪಡೆದ ಜಲಪಾತಗಳಾಗಿವೆ. ಮಾಗೋಡು ಜಲಪಾತ …
Read More »ಪ್ರತಿ ಮಕ್ಕಳ ಹುಟ್ಟು ಸಾರ್ಥಕಗೊಳಿಸಲು ಗಿಡನೆಟ್ಟು ಹುಟ್ಟು ಹಬ್ಬದಾಚರಣೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಕೇರಿ ಗೌಳಿವಾಡದಲ್ಲಿ ಶಾಲಾ ಮಕ್ಕಳ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸ ಲಾಗುತ್ತಿದೆ.ಶಾಲೆಯ ಆವರಣದಲ್ಲಿ ಕಳೆದ ವರ್ಷ ವಿಧಾನ ಪರಿಷತ್ತಿನ ಸದಸ್ಯ ಶಾಂತರಾಮ್ ಸಿದ್ದಿ ಹಾಗೂ ಅರಣ್ಯ ಇಲಾಖೆಯ ನೇತೃತ್ವದಲ್ಲಿ ಸುಮಾರು ಐವತ್ತರಿಂದ ಅರವತ್ತು ಗಿಡಗಳನ್ನು ನೆಡಲಾಗಿತ್ತು. ಅವುಗಳನ್ನು ಉಳಿಸಿ ಬೆಳೆಸಲು ಶಿಕ್ಷಕರಾದ ಗಂಗಾಧರ್ ಲಮಾಣಿ ಹಾಗು ಶೋಭಾ ಗುನಗಿ, ವಾಣಿ ನಾಯ್ಕ ಸೇರಿ ಶಾಲೆಯಲ್ಲಿ …
Read More »ಸ್ಥಗಿತಗೊಂಡಿರುವ ಬೇಡ್ತಿ ಕುಡಿಯುವ ನೀರಿನ ಯೋಜನೆಯ ಬೇಡ್ತಿ ತಟದ ಜಾಕ್ ವೆಲ್ ಗೆ ಮುಖ್ಯಾಧಿಕಾರಿ ಭೇಟಿ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ. ಪ್ರತಿಧ್ವನಿ,ಯಲ್ಲಾಪುರ : ಕೋಟ್ಯಾಂತರ ಮೌಲ್ಯ ಸಾರ್ವಜನಿಕ ತೆರಿಗೆ ಹಣದಲ್ಲಿ ಅನುಷ್ಟಾನಗೊಂಡು ಕಾರಣಾಂತರಗಳಿಂದ ಯೋಜನೆ ಸ್ಥಗಿತಗೊಂಡ ನಂತರ ಅಲ್ಲಿದ್ದ ಬೆಲೆಬಾಳುವ ವಸ್ತುಗಳು ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ ಬಿದ್ದು ಹಾಳಾಗುತ್ತಿರುವುದು. ನಿಧಾನವಾಗಿ ಕಣ್ಮರೆಯಾಗುವುದರೊಂದಿಗೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. . ಈ ಹಿನ್ನೆಲೆಯಲ್ಲಿ ಗುರುವಾರ ಯಲ್ಲಾಪುರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುನಿಲ್ ಸುಭಾಷ್ ಗಾವಡೆ ಬೇಡ್ತಿ ನದಿ ತಟದಲ್ಲಿರುವ ಕುಡಿಯುವ ನೀರು ಸರಬರಾಜು ಘಟಕಕ್ಕೆ ಭೇಟಿ …
Read More »ಮಳೆ ಅವಾಂತರ ಸರ್ಕಾರಕ್ಕೆ ವರದಿ ನೀಡುವ ಕಂದಾಯ ಅಧಿಕಾರಿಗಳ ಮನೆಗಳೆ ಜಲಾವೃತ.!!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ. ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ನೂತನ ಆಡಳಿತ ಸೌಧದ ಹಿಂಭಾಗ ಕಂದಾಯ ಇಲಾಖೆಯ ಅಧಿಕಾರಿಗಳ ವಸತಿಗೃಹಗಳಿದ್ದು ಮಂಗಳವಾರ ರಾತ್ರಿಯಿಂದ ಸುರಿದ ಭಾರೀ ಮಳೆಯಿಂದಾಗಿ ಸಂಪೂರ್ಣ ಜಲಾವೃತವಾಗಿದೆ. ವಸತಿ ಗೃಹಗಳು ಜಲಾವೃತವಾಗಿರುವುದು ಗಟಾರವಿಲ್ಲದೇ ಕಾಂಕ್ರೀಟ್ ರಸ್ತೆಯೊಂದನ್ನು ನಿರ್ಮಿಸಿರುವುದೇ ಪ್ರಮುಖ ಕಾರಣವಾಗಿದ್ದು ಸಂಬAಧಿಸಿದ ಇಲಾಖೆ ತುರ್ತಾಗಿ ನೀರು ಹೊರ ಹೋಗುವಂತೆ ವ್ಯವಸ್ಥೆ ಕಲ್ಪಿಸಬೇಕಿದೆ. ಇಲ್ಲವಾದಲ್ಲಿ ಮಳೆಯಿಂದಾದ ಹಾನಿಯ ವರದಿಗೆ ತೆರಳುವ ಕಂದಾಯ ಇಲಾಖೆಯ ಅಧಿಕಾರಿಗಳ ಮನೆಗಳೇ …
Read More »
Prathidvani Yellapura