Breaking News

Yearly Archives: 2023

ಯಲ್ಲಾಪುರದಲ್ಲಿ ಹೆಚ್.ಡಿ.ಎಫ್.ಸಿ ಬ್ಯಾಂಕ್ ನೂತನ ಶಾಖೆ ಉದ್ಘಾಟಿಸಿದ ಶಾಸಕ ಹೆಬ್ಬಾರ್

ಪ್ರತಿಧ್ವನಿ,ಯಲ್ಲಾಪುರ : ಯಲ್ಲಾಪುರದಲ್ಲಿ ಎಚ್.ಡಿ.ಎಫ್.ಸಿ ಬ್ಯಾಂಕಿನ ಶಾಖೆ ಉದ್ಘಾಟನೆಗೊಂಡಿರುವುದು ಸಂತಸದ ಸಂಗತಿ. ಎಚ್.ಡಿ.ಎಫ್.ಸಿ ಬ್ಯಾಂಕು ಬಡವರಿಗೂ, ಸಣ್ಣ ಪುಟ್ಟ ಉದ್ಯೋಗ ಸ್ಥಾಪಿಸುವವರಿಗೂ ಸಾಲ ನೀಡಿ ಸಮಾಜದ ಎಲ್ಲ ವರ್ಗದವರ ಆರ್ಥಿಕ ಭದ್ರತೆಗೆ ನೇರವು ನೀಡಬೇಕಲ್ಲದೇ, ಸಿಬ್ಬಂದಿಗಳು ಗ್ರಾಹಕರೊಂದಿಗೆ ಸೌಜನ್ಯದಿಂದ ಉತ್ತಮ ಸೇವೆ ಸಲ್ಲಿಸುವ ಮನೋಭಾವ ತಳೆಯಬೇಕು. ಬ್ಯಾಂಕುಗಳಿಗೆ ಉತ್ತಮ ಸಾಲಗಾರರ ಕೊರತೆ ಸಾಕಷ್ಟು ಪ್ರಮಾಣದಲ್ಲಿದ್ದರೂ, ಠೇವುದಾರರ ಕೊರತೆ ಉಂಟಾಗಿಲ್ಲ ಎಂದು ಕೆಡಿಸಿಸಿ ಬ್ಯಾಂಕಿನ ಅಧ್ಯಕ್ಷರೂ, ಶಾಸಕರೂ ಆದ ಶಿವರಾಮ ಹೆಬ್ಬಾರ …

Read More »

ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ಶಾಸಕ ಹೆಬ್ಬಾರ್ ಅವರಿಗೆ ಗೌರವಾರ್ಪಣೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಜನರ ಸಮಸ್ಯೆಗಳಿಗೆ, ಬೇಡಿಕೆಗಳಿಗೆ ನಾನೇ ಉತ್ತರಿಸಬೇಕಾಗುತ್ತದೆ. ವರ್ಗಾವಣೆಯ ಕಾರ್ಯದಲ್ಲಿ ಅನೇಕರು ತೊಡಗಿಕೊಂಡಿದ್ದಾರೆ. ಅನೇಕ ಸಂದರ್ಭಗಳಲ್ಲಿ ಮಳೆಯಿಂದ ವಿದ್ಯುತ್ ವ್ಯತ್ಯಯ ಉಂಟಾಗುತ್ತದೆ. ಆಗ ಇಲಾಖೆಯೊಂದಿಗೆ ಗುತ್ತಿಗೆದಾರರು ಸಹಕರಿಸಿ, ವಿದ್ಯುತ್ ಸಂಪರ್ಕ ಸರಿಪಡಿಸುವ ಕಾರ್ಯ ಮಾಡುತ್ತಿರುವುದು ತೃಪ್ತಿಕರವಾಗಿದೆ. ಯಾವುದೇ ರೀತಿಯಲ್ಲಿ ಜನರಿಗೆ ತೊಂದರೆಯಾಗದಂತೆ ಹೆಸ್ಕಾಂ ಅಧಿಕಾರಿಗಳು ಮತ್ತು ಗುತ್ತಿಗೆದಾರರು ತ್ವರಿತವಾಗಿ ಕಾರ್ಯನಿರ್ವಹಿಸಿ ಸಹಕಾರ ನೀಡಬೇಕು. ಜಿಲ್ಲೆಯಲ್ಲಿ ಅನೇಕ ಅಧಿಕಾರಿಗಳ ಕೊರತೆಯಿದ್ದು, ಸರ್ಕಾರದಿಂದ …

Read More »

ಯಲ್ಲಾಪುರ ತಾಲೂಕಿನ ಪಾಂಡಿತ್ಯದ ಗಣಿ‌ಎಂದೇ ಖ್ಯಾತರಾದ ದಿ, ಅನಂತ ವೈದ್ಯರಿಗೆ ಕಾ. ನಿ. ಪ. ಸಂಘದಿಂದ ನುಡಿನಮನ ಸಲ್ಲಿಕೆ‌..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ. ಪ್ರತಿಧ್ವನಿ,ಯಲ್ಲಾಪುರ : ಹಿರಿಯ ಪತ್ರಕರ್ತ, ಅರ್ಥಧಾರಿ, ಅಂಕಣಕಾರ ಅನಂತ ವೈದ್ಯ ಅವರಿಗೆ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳವಾರ ನುಡಿನಮನ ಸಲ್ಲಿಸಲಾಯಿತು.ಸಂಘದ ಅಧ್ಯಕ್ಷ ಕೆ.ಎಸ್.ಭಟ್ಟ ಆನಗೋಡ ಮಾತನಾಡಿ, ಅನಂತ ವೈದ್ಯರ ಮೇರು ವ್ಯಕ್ತಿತ್ವ ಆದರ್ಶಪ್ರಾಯವಾಗಿದೆ ಎಂದರು.ಜಿಲ್ಲಾ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ ಮಾತನಾಡಿ, ವೈದ್ಯ, ಪತ್ರಕರ್ತರಾಗಿ, ಸಾಹಿತಿಗಳಾಗಿ, ಉಪನ್ಯಾಸಕರಾಗಿ ವಿವಿಧ ನೆಲೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಾದರಿಯ …

Read More »

ಕಳಚಿಕೊಂಡ ಯಲ್ಲಾಪುರದ ಪಾಂಡಿತ್ಯದ ಹಿರಿಯ ಕೊಂಡಿ – ಅನಂತ ವೈದ್ಯ..

ಪ್ರತಿಧ್ವನಿ,ಯಲ್ಲಾಪುರ : ಅಂಕಣಕಾರರು, ಯಕ್ಷಗಾನ ಅರ್ಥಧಾರಿಗಳೂ ಆದ ಅನಂತ ಮಹಾಬಲೇಶ್ವರ ವೈದ್ಯ (70) ಜುಲೈ.24 ರಂದು ಇಹಲೋಕ ತ್ಯಜಿಸಿದರು. ಇದರೊಂದಿಗೆ ಯಲ್ಲಾಪುರ ಪಾಂಡಿತ್ಯದ ಹಿರಿಯ ಕೊಂಡಿಯೊಂದು ಕಳಚಿಕೊಂಡಾಂತಾಗಿ ಸರಸ್ವತ ಲೋಕಕ್ಕೆ ತಬಲಾರದ ನಷ್ಟವಾದಂತಾಗಿದೆ.. ಅವರು ಕೆಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದರು.ದಿವಂಗತರು ಕನ್ನಡ ಮತ್ತು ಸಂಸ್ಕೃತ ಅಧ್ಯಯನಶೀಲರಾಗಿದ್ದು, ರಾಮಾಯಣ, ಭಾರತದ ಕುರಿತು ಸಾಕಷ್ಟು ಪ್ರಭುತ್ವ ಸಾಧಿಸಿದ್ದರು. ದಕ್ಷಿಣೋತ್ತರ ಕನ್ನಡದ ಯಕ್ಷಗಾನ ಆರ್ಥಧಾರಿಯಾಗಿ, ಸಾಹಿತ್ಯ ರತ್ನ ಬಿರುದು ಪಡೆದು ಯಕ್ಷಗಾನ' ಎಂಬ ಮಾಸಪತ್ರಿಕೆಯ …

Read More »

ಯಲ್ಲಾಪುರ ತಾಲೂಕಿನಲ್ಲಿ ಮಳೆ,ಮಳೆ,ಮಳೆ ಅಲ್ಲಲ್ಲಿ ಒಂದಷ್ಟು ಸಮಸ್ಯೆ…

ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ರೈತರ ಮೊಗದಲ್ಲಿ ಸಂತಸ ಮೂಡಿದೆ ಹಾಗೆ ವಿವಿಧ ಪ್ರದೇಶಗಳಲ್ಲಿ ಸಮಸ್ಯೆಗಳು ಉದ್ಭವವಾಗಿವೆ. ಜಾನುವಾರುಗಳ ಮರಣ ಮೃದಂಗ ಮುಂದುವರೆದಿದ್ದು ಮತ್ತೆರಡು ಎಮ್ಮೆಗಳು ನೀರು ಪಾಲಾಗಿವೆ. ಮದನೂರು ಗ್ರಾಮದ ಗೋಯಾ ಬಾಬು ಕೊಕರೆ ಹಾಗೂ ಮಾಳು ಬಾಬು ಕೊಕರೆ ಎಂಬುವರಿಗೆ ಸೇರಿದ ಎರಡು ಸಾಕು ಎಮ್ಮೆಗಳು ಡೋಮಗೇರಿ ಹಳ್ಳದ ನೀರಿನಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿವಿರುವುದರೊಂದಿಗೆ ತಾಲೂಕಿನಲ್ಲಿ ಜಾನುವಾರುಗಳ ಸಾವಿನ ಸಂಖ್ಯೆ10 ಕ್ಕೇರಿದೆ. ಗೇರಾಳದ ನಾಗವೇಣಿ ನಾಗಪ್ಪ …

Read More »

ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವಕ್ಕೆ ದಕ್ಕೆ ತರಲೆತ್ನಿಸುತ್ತಿರುವವರ ವಿರುದ್ದ ಕಠಿಣಕ್ರಮಕ್ಕೆ ಮನವಿ..

ಪ್ರತಿಧ್ವನಿ,ಯಲ್ಲಾಪುರ : ರಾಜ್ಯ ಸರ್ಕಾರಿ ನೌಕರರ ಸಂಘದ ಇತಿಹಾಸದಲ್ಲಿ ನೌಕರರ ಕ್ಷೇವiಕ್ಕಾಗಿ ಅಭೂತಪೂರ್ವ ಯೋಜನೆಗಳನ್ನು, ಸರ್ಕಾರದಿಂದ ಪ್ರಯೋಜನಗಳನ್ನು ಕಟಿಬದ್ಧವಾಗಿ ಮತ್ತು ಉತ್ತಮ ಸಂಬಂಧದೊಂದಿಗೆ ಸರ್ಕಾರದೊಂದಿಗೆ ಸಂವಹನ ನಡೆಸಿ ವಿವಿಧ ಅನುಕೂಲಗಳನ್ನು ಸಂಘದ ಮುಖೇನ ಸರ್ಕಾರಿ ನೌಕರರಿಗೆ ತರುವಲ್ಲಿ ಪ್ರಸ್ತುತ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿಯವರು ಅವಿರತವಾಗಿ ಶ್ರಮಿಸಿದ್ದು ಅವರ ಹೆಸರಿಗೆ ಮತ್ತು ಸಂಘದ ಗೌರವಕ್ಕೆ ಮಸಿ ಬಳಿಯುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಇಲ್ಲ ಸಲ್ಲದ ತಪ್ಪು ಮಾಹಿತಿ …

Read More »

ತಾಲೂಕಿನಲ್ಲಿ ಸುರಿಯುತ್ತಿರುವ ಬಾರಿ ಮಳೆ ಎಲ್ಲೆಲ್ಲಿ ಏನೇನು..!!!

ಯಲ್ಲಾಪುರ : ತಾಲೂಕಿನಲ್ಲಿ ಬಿಡದೆ ಸುರಿಯುತ್ತಿರುವ ಬಾರಿ ಮಳೆಗೆ ಹಳ್ಳ ಕೊಳ್ಳಗಳೆಲ್ಲಾ ಉಕ್ಕಿ ಹರಿಯಿತ್ತಿದೆ. ಜಿಲ್ಲಾಧಿಕಾರಿಗಳ ಅನುಮತಿ ಪಡೆದು ತಾಲೂಕಿನಲ್ಲಿ‌ ಇಂದು ಸೋಮವಾರ ಒಂದು ದಿನದ ಮಟ್ಟಿಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಅವರ ಅಭಿಪ್ರಾಯ ಪಡೆದು. ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ತಹಶಿಲ್ದಾರ ಶ್ರೀಕೃಷ್ಣ ಕಾಮಕರ ಈ ನಿರ್ಧಾರ ಪ್ರಕಟಿಸಿರುತ್ತಾರೆ. ಬಿಡದೆ ಸುರಿದ ಮಳೆಗೆ ರವಿವಾರದ ಸಂತೆ ಮಾರುಕಟ್ಟೆಯಲ್ಲಿ ತರಕಾರಿ,ದವಸದಾನ್ಯ, ಹಣ್ಣು, ಪ್ಲಾಸ್ಟಿಕ್ …

Read More »

ಯಲ್ಲಾಪುರ-ಮುಂಡಗೋಡು ರಸ್ತೆ‌ ಸಂಚರಿಸುವುದಾದರು ಎಲ್ಲಿ..?? ಯಕ್ಷ ಪ್ರಶ್ನೆಗೆ ಉತ್ತರಿಸಿ.

ಪ್ರತಿಧ್ವನಿ,ಯಲ್ಲಾಪುರ : ಭಾರತ ಚಂದ್ರನಲ್ಲಿಗೆ ಅಧ್ಯಯನ ಸಂಬಂಧ 3900 ಕೆ.ಜಿ ತೂಕ ಹೊತ್ತ ಉಪಗ್ರಹ ಉಡಾವಣೆ ಮಾಡಿ ಇತರೆ ದೇಶಗಳ ಎದುರು ತನ್ನ ದೇಶದ ತಂತ್ರಜ್ಞಾನದ ಶ್ರೇಷ್ಟತೆಯನ್ನು ಜಗತ್ತಿನೆದುರು ತೆರೆದಿಟ್ಟಿದೆ. ಹಗಲು ರಾತ್ರಿ ಎನ್ನದೆ ಅವಿಷ್ಕಾರದಲ್ಲಿ ತೊಡಗಿರುವ ವಿಜ್ಞಾನಿಗಳು ಒಂದೆಡೆ ದೇಶದ ಘನತೆ ಎತ್ತಿ ಹಿಡಿಯುತ್ತಿದ್ದರೆ  ಯಲ್ಲಾಪುರ ತಾಲೂಕಿನಲ್ಲಿರುವ ಸಣ್ಣ ಪುಟ್ಟ ರಸ್ತೆಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಾಣ ಮಾಡದೆ ಸಂಬಂಧಪಟ್ಟ ಇಲಾಖೆಯವರು ನಗೆಪಾಟಿಲಿಗೆ ಗುರಿಯಾಗುತ್ತಿದ್ದಾರೆ.      ಯಲ್ಲಾಪುರ-ಮುಂಡಗೋಡು ರಸ್ತೆ …

Read More »

ಉಪನ್ಯಾಸಕ ಸುಬ್ರಹ್ಮಣ್ಯ ಭಟ್ ನಿವೃತ್ತಿ – ಗೌರವದ ಬೀಳ್ಕೊಡುಗೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪ್ರತಿಯೊಬ್ಬರ ಬದುಕಿನಲ್ಲಿಯೂ ನಿವೃತ್ತಿ ಎಂಬುದು ಅನಿವಾರ್ಯವಾದರೂ, ವೃತ್ತಿಯ ಸಂದರ್ಭದಲ್ಲಿ ಅನುಸರಿಸಿದ ಬಧ್ಧತೆ ಮತ್ತು ಪ್ರಾಮಾಣಿಕತೆಗಳು ಏನೆಂಬುದು ಪ್ರಮುಖವಾಗಿರುತ್ತದೆ. ಪ್ರಸ್ತುತ ಕಾಲೇಜಿನಲ್ಲಿ ಕಳೆದ ೧೬ ವರ್ಷಗಳ ಕಾಲ ಉಪನ್ಯಾಸಕರಾಗಿ ಕರ್ತವ್ಯ ಬಧ್ಧತೆಯಿಂದ ಕಾರ್ಯನಿರ್ವಹಿಸಿದ ಸುಬ್ರಹ್ಮಣ್ಯ ಭಟ್ಟರು ನಿರ್ವತ್ತರಾದುದು ನಮಗೆಲ್ಲರಿಗೂ ಬೇಸರದ ಸಂಗತಿಯಾಗಿದ್ದು, ಇನ್ನು ಮುಂದೆಯೂ ಕ್ರಿಯಾಶೀಲರಾಗಿ ತಮ್ಮನ್ನು ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಆರ್.ಜಿ.ಹೆಗಡೆ …

Read More »

ನಂದಿಬಾವಿಯಲ್ಲಿ ಮನೆ ಕುಸಿದು ಹಾನಿ ಸ್ಥಳಕ್ಕೆ ಅಧಿಕಾರಿಗಳು ಜನಪ್ರತಿನಿಧಿಗಳು ಭೇಟಿ ಪರಿಶೀಲನೆ.

ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ತಾರೆಹಳ್ಳಿ ಗ್ರಾಮದಲ್ಲಿ ಮನೆ ಕುಸಿದು ಅಪಾರ ಪ್ರಮಾಣದ ಹಾನಿಯಾದ ಘಟನೆ ವರದಿಯಾಗಿರುತ್ತದೆ. ನಂದಿಬಾವಿಯ ಗೀತಾ ಪುಟ್ಟ ಸಿದ್ದಿ ಎಂಬುವರ ವಾಸದ ಮನೆ ಕಳೆದ ರಾತ್ರಿ ಸುರಿದ ಮಳೆಗೆ ಗೋಡೆ ಕುಸಿದು ಮನೆಯ ಬಹುತೇಕ ಭಾಗ ನೆಲಸಮವಾಗುವ ಹಂತದಲ್ಲಿದೆ.ಮನೆ ಬೀಳಬಹುದೆಂಬ ಸಂಗತಿ ಕುಟುಂಬದವರ ಗಮನಕ್ಕೆ ಮೊದಲೇ ಬಂದಿರುವುದರಿಂದ ಪಕ್ಕದಲ್ಲಿದ್ದ ತಮ್ಮದೇ ಶೆಡ್‌ನಲ್ಲಿ ಉಳಿದು ರಾತ್ರಿ ಬಚಾವಾಗಿರುತ್ತಾರೆ. ಸುದ್ದಿ ತಿಳಿದ ತಕ್ಷಣ ಘಟನೆ ನಡೆದ …

Read More »