Breaking News

Monthly Archives: June 2023

ಕಾನೂನು ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ವೈಟಿಎಸ್ಎಸ್ ನಲ್ಲಿ ಬಾಲ ಕಾರ್ಮಿಕ ದಿನಾಚರಣೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟಬೇಕು. 18 ವರ್ಷ ದೊಳಗಿನ ಎಲ್ಲಾ ಮಕ್ಕಳಿಗೂ ಶಿಕ್ಷಣ ದೊರೆಯುವಂತಾಗಬೇಕು. ಯಾವುದೇ ಹೋಟೆಲ್ ಮತ್ತು ಕಾರ್ಕಾನೆಗಳಲ್ಲಿ ಕೂಡ ಕೆಲಸ ಮಾಡುತ್ತಿರುವ ಮಕ್ಕಳು ಕಂಡರೆ ಈ ಕುರಿತು ಸಂಬಧಿಸಿದ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಸಿವಿಲ್ ನ್ಯಾಯಾಧೀಶೆ ಲಕ್ಷ್ಮಿಬಾಯಿ ಬಸನಗೌಡ ಪಾಟೀಲ್ ಹೇಳಿದರು. ಅವರು ಪಟ್ಟಣದ ವೈ.ಟಿ.ಎಸ್.ಎಸ್ ಸಭಾಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, …

Read More »

ನಾರಿಗೆ ಉಚಿತ ಸಾರಿಗೆ ; ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ವನಿತೆಯರು

ಯಲ್ಲಾಪುರದ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ರಾಜ್ಯಾದ್ಯಂತ ಜೂ.11 ರಂದು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಘೋಷಣೆಯಲ್ಲಿ ಒಂದಾದ ಮಹಿಳೆಯರಿಗೆ ಸರ್ಕಾರಿ ಸಾರಿಗೆಯಲ್ಲಿ ಉಚಿತ ಪ್ರಯಾಣ ಎಂಬ “ಶಕ್ತಿ” ಹೆಸರಿನ ಯೋಜನೆ ವಿದ್ಯುಕ್ತವಾಗಿ ಚಾಲನೆ ಪಡೆಯಿತು. ಅದರಂತೆ ಉಚಿತ ಪ್ರಯಾಣ ಪ್ರಾರಂಭಿಸಿರುವ ಮಹಿಳೆಯರು ಸಂತಸದಲ್ಲಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಸೋಮವಾರ ಯಲ್ಲಾಪುರ ಬಸ್ ನಿಲ್ದಾಣದಲ್ಲೂ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಸರ್ಕಾರದ ಶಕ್ತಿ ಯೋಜನೆಗೆ …

Read More »

ಕೇರಳದ ಯಡನೀರು ಮಠದ ಪೂಜ್ಯ ಶ್ರೀಮದ್ ಸಚ್ಚಿದಾನಂದ ಸ್ವಾಮೀಜಿ ಯಲ್ಲಾಪುರ ಶಕ್ತಿ ಗಣಪತಿಗೆ ಬೇಟಿ

ಪ್ರತಿಧ್ವನಿ,ಯಲ್ಲಾಪುರ : ಯಲ್ಲಾಪುರ, ಶಿರಸಿ, ಕುಮಟಾ, ಅಂಕೋಲಾ ಪ್ರದೇಶಗಳ ಜನರು ಸಾತ್ವಿಕರೂ, ಸರಳರೂ ಆಗಿದ್ದಾರೆ. ಆದ್ದರಿಂದಲೇ ದೂರದ ನಮ್ಮ ಪೂಜ್ಯ ಕೇಶವಾನಂದ ಭಾರತಿ ಸ್ವಾಮಿಗಳಿಗೆ ಇಲ್ಲಿಯ ಜನರ ಸಂಬಂಧ ಬೆಳೆಯಲು ಕಾರಣವಾಗಿದೆ. ಇಲ್ಲಿಯ ಜನರು ಧಾರ್ಮಿಕರೂ, ಸಂಸ್ಕಾರವಂತರೂ ಆಗಿರುವುದರಿಂದ ನಮ್ಮ ಪೂಜ್ಯರು ಇಲ್ಲಿ ಚಾತುರ್ಮಾಸ್ಯ ವ್ರತ ಆಚರಣೆ ಮಾಡಿದ್ದಾರೆ ಎಂದು ಜಗದ್ಗುರು ಶಂಕರಾಚಾರ್ಯ ಯಡನೀರು ಮಠದ ಪೂಜ್ಯ ಶ್ರೀಮದ್ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು ನುಡಿದರು. ಅವರು ಪಟ್ಟಣದ ಶ್ರೀ ಶಕ್ತಿ …

Read More »

ಅಕ್ಕಿ ತುಂಬಿದ ಲಾರಿ ಪಲ್ಟಿ ; ರಸ್ತೆಯಲ್ಲಿ ಹರಡಿದ ಅಕ್ಕಿ ಚೀಲಗಳು

ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದ ಶಿರ್ಲೆ ಕ್ರಾಸ್ ಬಳಿ ಅಕ್ಕಿ ತುಂಬಿದ್ದ ಲಾರಿಯೊಂದು ಪಲ್ಟಿಯಾಗಿ ರಸ್ತೆ ತುಂಬಾ ಅಕ್ಕಿ ಚೀಲಗಳು ಹರಡಿ ಬಿದ್ದ ಘಟನೆ ನಡೆದಿದೆ. ತೆಲಂಗಾಣದಿಂದ ಅಕ್ಕಿ ಪ್ಯಾಕೆಟ್‌ಗಳನ್ನು ತುಂಬಿಕೊಂಡು ಮಂಗಳೂರು ಹೊರಟಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಅರಬೈಲು ಘಟ್ಟದ ಶಿರ್ಲೆ ಕ್ರಾಸ್ ಸಮೀಪ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿಯ ಮೇಲೆ ಅಡ್ಡಲಾಗಿ ಬಿದ್ದಿದೆ. ಅದೃಷ್ಟವಶಾತ್ ಲಾರಿಯಲ್ಲಿದ್ದ ಚಾಲಕ ಹಾಗೂ ಸಹಾಯಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. …

Read More »

ಕಿರವತ್ತಿ ಸಮೀಪ ಭೀಕರ ರಸ್ತೆ ಅಪಘಾತ ; ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು

ಯಲ್ಲಾಪುರ : ತಾಲೂಕಿನ ಕಿರವತ್ತಿ ಸಮೀಪ ಒಂಟ್ಮನೆ ಎಂಬಲ್ಲಿ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿಯ ಮೇಲೆ ಬೈಕ್ ಅಪಘಾತವಾಗಿದ್ದು ಬೈಕಿನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ತಂಬೂರು ಮೂಲದ ಸೂರಜ್ ಪಾಲನಕರ್ ಮತ್ತು ಕಿರವತ್ತಿ ಮೂಲದ ಮಂಜುನಾಥ ವೀರಭದ್ರ ಬಡಿಗೇರ ಮೃತ ದುರ್ದೈವಿಗಳಾಗಿದ್ದು ಫೋಟೋ ಶೂಟ್‌ಗಾಗಿ ಯಲ್ಲಾಪುರಕ್ಕೆ ಬಂದವರು ಮುಗಿಸಿ ವಾಪಸ್ ತೆರಳುವ ವೇಳೆ ಕಿರವತ್ತಿ ಸಮೀಪದ ಒಂಟ್ಮನೆ ಎಂಬಲ್ಲಿ ಬೈಕ್ ಸ್ಕಿಡ್ ಆಗಿ ರಸ್ತೆಯಲ್ಲಿ ಬಿದ್ದಿದ್ದಾರೆ. ಅದೇ …

Read More »

ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಗಳಲ್ಲಿ “ಶಕ್ತಿ” ಯೋಜನೆಗೆ ಶಾಸಕ ಹೆಬ್ಬಾರ್ ವಿದ್ಯುಕ್ತ ಚಾಲನೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಮಹಿಳಾ ಸಬಲಿಕರಣ ಮತ್ತು ಆರ್ಥಿಕ ಉನ್ನತಿಗೆ ಉಚಿತ ಪ್ರಯಾಣದ ಯೋಜನೆ ಸಹಕಾರಿಯಾಗಲಿದೆ. ಯಾವುದೆ ಸರ್ಕಾರಗಳು ಜನಹಿತಕ್ಕಾಗಿ ಜಾರಿಗೆ ತರುವ ಯೋಜನೆಯಲ್ಲಿ ಪಕ್ಷಬೇಧ ತೋರದೆ ಪ್ರೊತ್ಸಾಹಿಸಬೇಕಿದೆ. ಶಕ್ತಿ ಯೋಜನೆ ರಾಜ್ಯದ ಮಹಿಳೆಯರ ಅಭ್ಯುದಯಕ್ಕೆ ಅನುವಾಗಲಿ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು. ಅವರು ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಮಹಿಳೆಯರಿಗೆ …

Read More »

ಅಜಾತಶತ್ರು ಪಕ್ಷಾತೀತ ಶಾಸಕ ಅರಬೈಲ್ ಶಿವರಾಮ ಹೆಬ್ಬಾರ್ ಬತ್ತಳಿಕೆಯಲ್ಲಿ ಅಭಿವೃದ್ಧಿ ಬಾಣಗಳು

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ. ಪ್ರತಿಧ್ವನಿ,ಯಲ್ಲಾಪುರ : ಸತತ ನಾಲ್ಕು ಬಾರಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಯಾವುದೇ ಪಕ್ಷದಲ್ಲಿದ್ದರೂ ಜನರ ಅಭಿಮಾನ ಗಳಿಸಿ ಪಕ್ಷಾತೀತವಾದ ಬೆಂಬಲ ಪಡೆದು ಅಜಾತಶತ್ರು ಎನಿಸಿಕೊಂಡಿರುವ ಶಿವರಾಮ ಹೆಬ್ಬಾರ್ ಈ ಬಾರಿ ವಿರೋಧ ಪಕ್ಷದ ಸಾಲಿನಲ್ಲಿ ಕುಳಿತುಕೊಳ್ಳಬೇಕಿದೆ. ವಿಶೇಷವೆಂದರೆ ಮೂರು ಬಾರಿ ಗೆದ್ದಾಗಲೂ ಆಡಳಿತ ಪಕ್ಷದಲ್ಲಿದ್ದರು. ಒಮ್ಮೆ ಸಚಿವರೂ ಆಗಿದ್ದರು. ಆದರೆ ನಾಲ್ಕನೇ ಬಾರಿ ಗೆದ್ದರೂ ಆಡಳಿತ ಪಕ್ಷದಲ್ಲಿಲ್ಲ. ಆದರೂ ವರ್ಚಸ್ಸು …

Read More »

27,800ರೂ ಹಣ ಕಳೆದುಕೊಂಡ ಅಮೆಜಾನ್ ಡೆಲಿವರಿ ಬಾಯ್..

ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಎಪಿಎಂಸಿ ಆವಾರದ ಟಿ.ಎಸ್.ಎಸ್‌ಗೆ ಅಮೆಜಾನ್ ಮೂಲಕ ಬಂದ ಪಾರ್ಸೆಲ್ ಅನ್ನು ತಲುಪಿಸಿ ಹಿಂತಿರುಗುವಾಗ ಡೆಲಿವರಿ ಬಾಯ್ ಜೇಬಿನಲ್ಲಿದ್ದ 27,800 ರೂ ನಗದು ಹಣವನ್ನು ಕಳೆದುಕೊಂಡಿರುವ ಘಟನೆ ನಡೆದಿದೆ.ಪಟ್ಟಣದ ಇಸ್ಲಾಂಗಲ್ಲಿ ನಿವಾಸಿ ಆಸಿಫ್ ಎಂಬ ಯುವಕನೇ ಹಣ ಕಳೆದುಕೊಂಡವನಾಗಿದ್ದು ಕೇವಲ ಮೂರು ದಿನಗಳ ಹಿಂದೆ ಅಮೆಜಾನ್ ಕಂಪನಿಯಲ್ಲಿ ಡೆಲಿವರ್ ಬಾಯ್ ಕೆಲಸಕ್ಕೆ ಸೇರಿದ್ದಾನೆ. ಶುಕ್ರವಾರ ಬೆಳಗಿನಿಂದ ವಿವಿದೆಡೆ ಪಾರ್ಸೆಲ್ ತಲುಪಿಸಿ ಟಿ.ಎಸ್.ಎಸ್ ಗೆ ಬಂದ …

Read More »

ಎಸ್ಕೇಪ್ ಸಹೋದರ ಅಪರಾಧಿಗಳ ರೋಚಕ ಹಿನ್ನೆಲೆ..!!!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಜೂ.8 ರಂದು ಸಹೋದರ ಅಪರಾಧಿಗಳಿಬ್ಬರು ಪೊಲೀಸರನ್ನು ತಳ್ಳಿ ಪರಾರಿಯಾಗಲು ಯತ್ನಿಸಿದ ಖೈದಿಗಳಿಬ್ಬರ ಚರಿತ್ರೆ ಪುಟವನ್ನು ತಿರುಗಿಸಿದರೆ ಬಲು ರೋಚಕ ಮತ್ತು ರೋಮಾಂಚಕವಾದ ವಿಷಯಗಳು ಹೊರಬರುತ್ತವೆ. ಮೊನ್ನೆ ದಿನ ಯಲ್ಲಾಪುರದ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತಂದ ಪ್ರಕಾಶ ಕೃಷ್ಣಾ ಸಿದ್ದಿ, ಪಿಲಿಪ್ ಕೃಷ್ಣಾ ಸಿದ್ದಿ ಸಹೋದರರಾಗಿದ್ದು ಅಪರಾಧ ಪ್ರಕರಣಗಳಿಗೂ ಇವರಿಗೂ ಅವಿನಾಭಾವ ಸಂಬಂಧವಿದೆ. 2020 ರಲ್ಲಿ ಒಬ್ಬನ ಮೇಲೆ ಫೋಕ್ಸೋ …

Read More »

ವಿಚಾರಣೆಗೆ ನ್ಯಾಯಾಲಯಕ್ಕೆ ಕರೆತಂದ ಖೈದಿಗಳಿಬ್ಬರು ಪರಾರಿ ಮತ್ತೆ ಬಂಧಿಸಿದ ಪೊಲೀಸರು

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲು ಕಾರವಾರ ಜೈಲಿನಿಂದ ಕರೆತಂದ ಇಬ್ಬರು ಸಹೋದರ ಖೈದಿಗಳು ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾದ ಘಟನೆ ನಡೆದಿದ್ದು ಮಿಂಚಿನ ವೇಗದಲ್ಲಿ ಬೆನ್ನತ್ತಿದ ಪೊಲೀಸರು ಖೈದಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೂ.7 ರ ಬುಧವಾರದಂದು ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಕಾರವಾರದ ಜಿಲ್ಲಾ ಕಾರಾಗೃಹದಿಂದ ಹಾಜರು ಪಡಿಸಲು ಕರೆತಂದ ಖೈದಿಗಳಾದ ಪ್ರಕಾಶ್ ಕೃಷ್ಣಾ ಸಿದ್ದಿ (25 ) ಮತ್ತು …

Read More »